Advertisement

ಪಿಯುಸಿ ಉತ್ತೀರ್ಣರಾದವರಿಗೆ ನಾಳೆ ಕೆರಿಯರ್‌ ಮಾರ್ಗದರ್ಶನ

01:48 AM Apr 30, 2019 | Team Udayavani |

ಉಡುಪಿ: ಉದಯವಾಣಿಯು ದ್ವಿತೀಯ ಪಿಯುಸಿ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಭವಿಷ್ಯದ ಶಿಕ್ಷಣ ಸಾಧ್ಯತೆ ಹಾಗೂ ಅವಕಾಶಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮವನ್ನು ಮೇ 1ರಂದು ಹಮ್ಮಿಕೊಂಡಿದೆ.

Advertisement

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆ 8.30ರಿಂದ ಅಪರಾಹ್ನ 1ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಷಯದಲ್ಲಿರುವ ಅವಕಾಶಗಳ ಬಗ್ಗೆ ಆಯಾ ಕ್ಷೇತ್ರಗಳ ಪರಿಣಿತರು ಸೂಕ್ತ ಮಾರ್ಗದರ್ಶನ ನೀಡುವರು.

ಈ ಕಾರ್ಯಕ್ರಮ ಸಂಪೂರ್ಣ ಉಚಿತವಾಗಿದ್ದು, ದ್ವಿತೀಯ ಪಿಯುಸಿ ಉತ್ತೀರ್ಣರಾದವರೆಲ್ಲರೂ ಭಾಗವಹಿಸಬಹುದಾಗಿದೆ.

ಈಗಾಗಲೇ ಪತ್ರಿಕೆಯ ವಾಟ್ಸಪ್‌ ನಂಬರ್‌ ಮೂಲಕ ಶಿಬಿರದಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿರುವವರಿಗೆ ಮಾಹಿತಿ ರವಾನಿಸಲಾಗಿದೆ. ಅಲ್ಲದೇ ಇದುವರೆಗೆ ಹೆಸರು ನೋಂದಾಯಿಸದವರೂ ನೇರವಾಗಿ ಸ್ಥಳದಲ್ಲಿಯೇ ಹೆಸರು ನೋಂದಣಿ ಮಾಡಲು ಅವಕಾಶವಿದೆ.

ಸುವರ್ಣ ಸಂಭ್ರಮದಲ್ಲಿರುವ ಉದಯವಾಣಿ ಪತ್ರಿಕೆಯು ಕರಾವಳಿಯ ಯುವಜನರ ಭವಿಷ್ಯವನ್ನು ಗಟ್ಟಿಗೊಳಿಸುವಲ್ಲಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಸರಣಿಯ ಕಾರ್ಯಕ್ರಮ ಇದಾಗಿದ್ದು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೂ ಭಾಗವಹಿಸಬಹುದು.

Advertisement

ಪಿಯುಸಿ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ
ಅದೇ ದಿನ ಅಪರಾಹ್ನ 2ರಿಂದ 3.30ರ ವರೆಗೆ ಮತ್ತೂಂದು ವಿಶೇಷ ಕಾರ್ಯಕ್ರಮವಿದೆ. ಇದರಲ್ಲಿ ಪಿಯುಸಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯಲು ಸಿದ್ಧರಾಗಿರುವವರಿಗೆ ಪರಿಣಿತರು ವಿವಿಧ ಕೋರ್ಸ್‌ಗಳ ಸ್ಥೂಲ ವಿವರ ನೀಡುವರು.

ಮುಕ್ತ ಅವಕಾಶ
ಈ ಉಪನ್ಯಾಸದಲ್ಲಿಯೂ ವಿಜ್ಞಾನ, ವಾಣಿಜ್ಯ, ಕಲಾ ವಿಷಯವನ್ನು ಒಳಗೊಂಡಿರುತ್ತದೆ. ಭಾಗವಹಿಸಲು ಯಾವುದೇ ಶುಲ್ಕವಿರು ವುದಿಲ್ಲ. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಬಹುದು. ಇದಲ್ಲದೇ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೂ ಭಾಗವಹಿಸಲಡ್ಡಿಯಿಲ್ಲ.

ಶನಿವಾರ ಮಂಗಳೂರಿನಲ್ಲಿ
ಇದೇ ಕಾರ್ಯಕ್ರಮ ಮಂಗಳೂರಿನಲ್ಲಿ ಮೇ 4ರಂದು ನಡೆಯಲಿದೆ. ಸ್ಥಳ ಮತ್ತಿತರ ವಿವರಗಳನ್ನು ಶೀಘ್ರವೇ ಪ್ರಕಟಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಮೂಡುಬಿದಿರೆ, ಬೆಳ್ತಂಗಡಿ ಮತ್ತಿತರ ತಾಲೂಕುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಮಾಹಿತಿ: 8095192817

Advertisement

Udayavani is now on Telegram. Click here to join our channel and stay updated with the latest news.

Next