Advertisement

ಹಾಲ್ನೊರೆಯಂತೆ ಹರಿಯುತ್ತಿದೆ ತೊಂಬಟ್ಟು ಜಲಪಾತ

09:57 AM Aug 07, 2019 | Hari Prasad |

ಕುಂದಾಪುರ: ವನರಾಶಿ ಮಧ್ಯೆ ಬಂಡೆಕಲ್ಲುಗಳ ಮೇಲಿನಿಂದ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ಸೊಬಗನ್ನು ನೋಡಬೇಕಾದರೆ ಹೊಸಂಗಡಿ ಸಮೀಪದ ಮಚ್ಚಟ್ಟು ಗ್ರಾಮದ ತೊಂಬಟ್ಟು (ಇರ್ಕಿಗದ್ದೆ) ಜಲಪಾತಕೆ ಹೋಗಬೇಕು.

Advertisement

ಎಲ್ಲಿದೆ ಜಲಪಾತ?
ಕುಂದಾಪುರದಿಂದ ಸುಮಾರು 35 ಕಿ.ಮೀ. ದೂರವಿದ್ದು, ಹೊಸಂಗಡಿಯಿಂದ 10 ಕಿ.ಮೀ. ಅಂತರದಲ್ಲಿದೆ. ಮಳೆಗಾಲದಲ್ಲಿ ಮಾತ್ರ ಮೈದುಂಬಿ ಹರಿಯುವ ಈ ಜಲಪಾತವು ನೋಡುಗರ ಕಣ್ಣಿಗೆ ಮನಮೋಹಕವಾಗಿದೆ. ಕಾನನದ ನಡುವೆ ಇರುವ ಈ ಜಲಪಾತ ಈಗಂತೂ ಹರಿಯುವುದನ್ನು ನೋಡುವುದೇ ಚಂದ.


ನಿರ್ಲಕ್ಷ್ಯ ಬೇಡ
ಕುಂದಾಪುರದಿಂದ ಬಸ್ರೂರು, ಕಂಡ್ಲೂರು, ಸಿದ್ದಾಪುರ ಮಾರ್ಗವಾಗಿ ಹೊಸಂಗಡಿಗೆ ತೆರಳಿ, ಅಲ್ಲಿಂದ ಬಾಗೆಮನೆ ಮಾರ್ಗವಾಗಿ ಸಂಚರಿಸಿದಾಗ ಬಲಕ್ಕೆ 3 ಕಿ.ಮೀ. ಕ್ರಮಿಸಿದರೆ ಈ ಜಲಪಾತ ಸಿಗುತ್ತದೆ.

ಈ ಜಲಪಾತ ಕಡಿಮೆ ಎತ್ತರದಿಂದ ನೀರು ಬೀಳುವುದಾಗಿದ್ದು, ಅಷ್ಟೇನೂ ಅಪಾಯಕಾರಿಯಲ್ಲ. ಆದರೆ ನಿರ್ಲಕ್ಷ್ಯ ವಹಿಸಿ, ನೀರಿಗಿಳಿದರೆ ಮಾತ್ರ ಅಪಾಯವನ್ನು ಆಹ್ವಾನಿಸಿಕೊಂಡಂತೆ, ಹಾಗಾಗಿ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆಯು ಜಂಟಿಯಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿ ಎನ್ನುವುದು ಇಲ್ಲಿಗೆ ಬಂದ ಪ್ರವಾಸಿಗರೊಬ್ಬರ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next