Advertisement
ಒಂದು ತಿಂಗಳ ಹಿಂದೆ ಪ್ರತಿ ಕೆ.ಜಿ. ಟೊಮೆಟೋ 10ರಿಂದ 20 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಪ್ರಸ್ತುತ ಪುಣೆ, ಮುಂಬಯಿ ಮತ್ತು ಥಾಣೆ ಪ್ರದೇಶಗಳಲ್ಲಿ ಕೆ.ಜಿ.ಗೆ 45ರಿಂದ 60 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದರ ಜತೆ ಇತರ ತರಕಾರಿಗಳ ದರವೂ ಏರಿಕೆಯಾಗಿದೆ. ಪ್ರಸ್ತುತ ಬೇಡಿಕೆಗಿಂತ ಕಡಿಮೆ ಟೊಮೆಟೋ ಪೂರೈಕೆ ಆಗುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಛತ್ರಪತಿ ಶಿವಾಜಿ ಮಾರ್ಕೆಟ್ ಯಾರ್ಡ್ ಆಡ್ತೆ ಅಸೋಸಿ ಯೇಶನ್ ಅಧ್ಯಕ್ಷ ವಿಲಾಸ್ ಭುಜಬಲ್ ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಟೊಮೆಟೋ ಬೆಳೆಗಾರರು ನಷ್ಟವನ್ನು ಎದುರಿಸಬೇಕಾಯಿತು. ಬೇಡಿಕೆಯ ಕೊರತೆಯಿಂದಾಗಿ ಕಳೆದ ತಿಂಗಳು ರೈತರು ಕಂಗಾಲಾಗಿದ್ದರು. ಆದರೆ ಈಗ ಸಗಟು ಮಾರುಕಟ್ಟೆಯಲ್ಲಿ ಟೊಮೆಟೋಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಟೊಮೆಟೋ ದರ್ಜೆಯನ್ನು ಅವಲಂಬಿಸಿ ಸಾಗಾಟ ವೆಚ್ಚವನ್ನು ಹೊರತುಪಡಿಸಿ ರೈತರು ಪ್ರತಿ ಕೆ.ಜಿ. ಟೊಮೆಟೋಗೆ 20ರಿಂದ 30 ರೂ. ಗಳನ್ನು ಪಡೆಯುತ್ತಿದ್ದಾರೆ. ನವಿಮುಂಬಯಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ, ಪುಣೆ ಜಿಲ್ಲೆಯ ಜುನ್ನಾರ್, ಅಂಬೇಗಾಂವ್, ಖೇಡ್, ನಾಸಿಕ್ ಪ್ರದೇಶಗಳಿಂದ ಟೊಮೆಟೋಗಳ ದೊಡ್ಡ ಪ್ರಮಾಣದ ಪೂರೈಕೆ ಇತ್ತು. ಪ್ರಸ್ತುತ ಬೇಡಿಕೆಗೆ ಹೋಲಿಸಿದರೆ ಸಗಟು ಮಾರುಕಟ್ಟೆಯಲ್ಲಿ ಟೊಮೆಟೋ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆ ಯಾಗಿದೆ. ಮುಂಬಯಿ, ಥಾಣೆ ಮತ್ತು ಉಪನಗರ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೋವನ್ನು ದರ್ಜೆಗೆ ಅನುಗುಣವಾಗಿ 40ರಿಂದ 50 ರೂ.ಗೆ ಮಾರಾಟ ಮಾಡಲಾಗುತ್ತಿದೆ.
Related Articles
ಸಗಟು ಮಾರುಕಟ್ಟೆಯ ಪ್ರಕಾರ ಕಳೆದ ತಿಂಗಳು ಟೊಮೆಟೋ ಪ್ರತೀ ಕೆ.ಜಿ.ಗೆ 5-10 ರೂ.ಗೆ ಮಾರಾಟವಾಗುತ್ತಿತ್ತು. ಮಾರುಕಟ್ಟೆಗಳಲ್ಲಿ ದರವಿಲ್ಲದ ಕಾರಣ ಆಕ್ರೋಶಗೊಂಡ ರೈತರು ರಾಜ್ಯಾದ್ಯಂತ ಟೊಮೆಟೋಗಳನ್ನು ಬೀದಿಗಳಲ್ಲಿ ಎಸೆದು ಹೋದ ಘಟನೆಗಳು ಸಂಭವಿಸಿದವು.
ಇಂಧನ ಬೆಲೆ ಏರಿಕೆಯಿಂದಾಗಿ ಸಾಗಾಟ ವೆಚ್ಚ ಜತೆಗೆ ಫಸಲಿಗೆ ಕಡಿಮೆ ಬೆಲೆ ಪಡೆದಿದ್ದರಿಂದ ಟೊಮೆಟೋಗಳನ್ನು ರೈತರು ಎಸೆಯಬೇಕಾಯಿತು. ಪಿತೃಪಕ್ಷದ ಸಂದರ್ಭ ಮಾರುಕಟ್ಟೆಗಳಲ್ಲಿ ಟೊಮೆಟೋ ಬೇಡಿಕೆ ಕಡಿಮೆಯಾಗಿತ್ತು.
Advertisement
ಪೂರೈಕೆ ಹೆಚ್ಚಾದಬಳಿಕ ಬೆಲೆ ಸ್ಥಿರ ಪುಣೆ, ಅಹ್ಮದ್‌ನಗರ, ಸಾಂಗ್ಲಿ, ಸತಾರಾ, ಕೊಲ್ಲಾಪುರ, ಸೊಲ್ಲಾಪುರ ಮತ್ತು ನಾಸಿಕ್ ಪ್ರದೇಶಗಳಲ್ಲಿ ಟೊಮೆಟೋ ಅನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಪ್ರಸ್ತುತ ಸಗಟು ಮಾರುಕಟ್ಟೆಗೆ ಪ್ರತೀದಿನ ಆರರಿಂದ ಎಂಟು ಸಾವಿರ ಬಾಕ್ಸ್ ಟೊಮೆಟೋಗಳು ಬರುತ್ತಿವೆ. ಬೇಡಿಕೆಗೆ ಹೋಲಿಸಿದರೆ ಪ್ರಸ್ತುತ ಟೊಮೆಟೋಗಳ ಪೂರೈಕೆ ಕಡಿಮೆಯಾಗುತ್ತಿದ್ದು, ಮುಂದಿನ 10-15 ದಿನಗಳಲ್ಲಿ ಪೂರೈಕೆ ಹೆಚ್ಚಾಗಲಿದೆ. ಅದರ ನಂತರ ದರಗಳು ಸ್ಥಿರಗೊಳ್ಳಲಿದೆ.
– ವಿಲಾಸ್ ಭುಜಬಲ್‌ಅಧ್ಯಕ್ಷರು, ಶ್ರೀ ಛತ್ರಪತಿ
ಶಿವಾಜಿ ಮಾರುಕಟ್ಟೆ ಯಾರ್ಡ್