Advertisement

ಚಿಂತಾಮಣಿ ಟೊಮೆಟೋ ಮಾರುಕಟ್ಟೆ ಈಗ ಕೆಸರುಗದ್ದೆ

08:25 PM Jun 28, 2021 | Team Udayavani |

ಚಿಂತಾಮಣಿ: ನಗರದ ಟೊಮೆಟೋಮಾರುಕಟ್ಟೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಕಾರಣ, ವಾರದಿಂದ ಸುರಿಯುತ್ತಿರುವ ಮಳೆಯಿಂದ ನೀರು ನಿಂತು ಕೆಸರುಗದ್ದೆ ಆಗಿದೆ.ರೈತರು, ವ್ಯಾಪಾರಿಗಳು ಕೆಸರಿನಲ್ಲೇ ನಿಂತುವಹಿವಾಟು ನಡೆಸುವಂತಾಗಿದೆ. ಚಿಂತಾಮಣಿ ಟೊಮೆಟೋ ಮಾರುಕಟ್ಟೆಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಪ್ರಮುಖವಾಗಿದೆ.

Advertisement

ಈ ಮಾರುಕಟ್ಟೆಗೆ ಆಂಧ್ರ,ತಮಿಳುನಾಡು, ಮಹಾರಾಷ್ಟ್ರ ಮತ್ತಿತರಕಡೆಗಳಿಂದವ್ಯಾಪಾರಸ್ಥರು ಹೆಚ್ಚಾಗಿ ಆಗಮಿಸುತ್ತಿದ್ದಾರೆ. ತಾಲೂಕು ಸೇರಿ ಜಿಲ್ಲೆಯ ವಿವಿಧ ಭಾಗಗಳಿಂದರೈತರು ಟೊಮೆಟೋ ಇಲ್ಲಿಗೆ ತರುತ್ತಾರೆ.

ಚರಂಡಿ ವ್ಯವಸ್ಥೆ ಇಲ್ಲ: ಲಕ್ಷಾಂತರ ರೂ. ವಹಿವಾಟು ನಡೆಯುವ ಈ ಟೊಮೆಟೋ ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯಗಳಿಲ್ಲ. ಮುಖ್ಯವಾಗಿ ಚರಂಡಿವ್ಯವಸ್ಥೆ ಮಾಡದ ಕಾರಣ, ಸ್ವಲ್ಪ ಮಳೆ ಬಂದರೆಸಾಕು ಇಡೀ ಮಾರುಕಟ್ಟೆ ಕೆಸರುಗದ್ದೆ ಆಗುತ್ತದೆ.ವ್ಯಾಪಾರಿಗಳು ಟೊಮೆಟೋ ಕ್ರೇಟ್‌ಗಳನ್ನು ಮಳೆನೀರಿನಲ್ಲೇ ಇಟ್ಟು ವ್ಯಾಪಾರ ವಹಿವಾಟುನಡೆಸುವಂತಾಗಿದೆ.

ಸೌಲಭ್ಯ ಕಲ್ಪಿಸದೇ ನಿರ್ಲಕ್ಷ್ಯ: ಮಾರುಕಟ್ಟೆಗೆ ಸೂಕ್ತಚರಂಡಿ ವ್ಯವಸ್ಥೆ, ಕೊಳೆತ, ವ್ಯರ್ಥವಾಗಿ ಎಸೆದಟೊಮೆಟೋವನ್ನು ವಿಲೇವಾರಿ ಮಾಡಲು ಸೂಕ್ತಕ್ರಮಕೈಗೊಳ್ಳಲು ಹಲವು ಬಾರಿ ಎಪಿಎಂಸಿ ಆಡಳಿತಮಂಡಳಿಗೆ, ನಗರಸಭೆ, ಸ್ಥಳೀಯ ಜನಪ್ರತಿನಿಧಿಗಳಿಗೆರೈತರು, ಟೊಮೆಟೋ ವ್ಯಾಪಾರಿಗಳು ಮನವಿಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ವಾಹನಸಂಚಾರಕ್ಕೆ ತೊಂದರೆ:ಚಿಂತಾಮಣಿಯಲ್ಲಿಶನಿವಾರ ರಾತ್ರಿ ಸುರಿದ ಮಳೆ ಮಾರುಕಟ್ಟೆಯನ್ನುಕೆರೆಯನ್ನಾಗಿಸಿತು. ಕೊರೊನಾ ನಿಯಂತ್ರಣಕ್ಕೆಬಂದ ಕಾರಣ ಸರ್ಕಾರ ಜಿಲ್ಲೆಯಲ್ಲೂ ಅನ್‌ಲಾಕ್‌ಮಾಡಿರುವ ಕಾರಣ, ಮಾರುಕಟ್ಟೆಗೆ ಹೆಚ್ಚುಟೊಮೆಟೋ ಬರುತ್ತಿದೆ. ರೈತರು ತಾವು ತಂದಿದ್ದಟೊಮೆಟೋ ಹಣ್ಣನ್ನು ಹರಾಜಿಗೆ ಇಡಲುಸ್ಥಳವಿಲ್ಲದೇ ಮಾರುಕಟ್ಟೆ ಮುಂಭಾಗದಲ್ಲಿನಜೋಡಿ ರಸ್ತೆಯಲ್ಲಿ ಇಟ್ಟಿದ್ದರು. ಇದರಿಂದ ವಾಹನಸಂಚಾರಕ್ಕೆ ತೊಂದರೆ ಆಗಿತ್ತು.ಸಾಂಕ್ರಾಮಿಕ ರೋಗ ಭೀತಿ: ನೀರು ಸರಾಗವಾಗಿಹರಿಯದ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next