Advertisement

ಟೊಮ್ಯಾಟೊದಲ್ಲಿದೆ ಸೌಂದರ್ಯದ ಗುಟ್ಟು

05:17 PM May 05, 2021 | Team Udayavani |

ಟೊಮ್ಯಾಟೊ ರುಚಿ ರುಚಿಯಾದ ಅಡುಗೆಗೆ ಮಾತ್ರವಲ್ಲ ಸೌಂದರ್ಯವರ್ಧಕವಾಗಿಯೂ ಬಳಕೆಗೆ ಬರುತ್ತದೆ. ಟೊಮ್ಯಾಟೊದಿಂದ ನಾನಾ ಬಗೆಯ ಅಡುಗೆ ಪದಾರ್ಥಗಳನ್ನು ತಯಾರಿಸಬಹುದು. ಅದರಂತೆ ನಿಮ್ಮ ತ್ವಚೆಯನ್ನು ಫಳ-ಫಳ ಹೊಳೆಯುವಂತೆ ಮಾಡಬಹುದು.

Advertisement

ಟೊಮೆಟೊವನ್ನು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಟೊಮೆಟೊ ಇಲ್ಲದೆ ಅಡುಗೆ ಪೂರ್ಣವಾಗುವುದಿಲ್ಲ. ಈ ಟೊಮೆಟೊ ಅಡುಗೆ ಮಾತ್ರವಲ್ಲ ಇದರಿಂದ ನಿಮ್ಮ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಹಾಗಾಗಿ ಅದರಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿ.

1 ಚಮಚ ಪುದೀನಾ ಪೇಸ್ಟ್ ಗೆ 2 ಚಮಚ ಟೊಮೆಟೊ ತಿರುಳನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ. ಇದು ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.

ಟೊಮೆಟೊ ತಿರುಳಿಗೆ 1 ಚಮಚ ಜೇನುತುಪ್ಪ ಬೆರೆಸಿ ಚರ್ಮದ ಮೇಲೆ ಹಚ್ಚಿ ಮಸಾಜ್ ಮಾಡಿ 15 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿ. ಇದು ಸನ್ ಟ್ಯಾನ್ ಅನ್ನು ನಿವಾರಿಸುತ್ತದೆ.

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ

Advertisement

ಇನ್ನು ಟೊಮೆಟೊ ಸೂಪ್ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿ ಲೈಕೋಪೀನ್, ಫ್ಲೇವೊನೈಡ್ ಗಳು ಮತ್ತು ವಿಟಮಿನ್ ಸಿ ಮತ್ತು ಇ ಸೇರಿದಂತೆ ಅನೇಕ ವಿಟಾಮಿನ್ ಸೇರಿವೆ. ಉತ್ಕರ್ಷಣ ನಿರೋಧಕಗಳನ್ನು ಸೇವಿಸುವುದರಿಂದ ಬೊಜ್ಜು ಮತ್ತು ಹೃದಯ ಕಾಯಿಲೆಯಂತಹ, ಕ್ಯಾನ್ಸರ್ ಮತ್ತು ಉರಿಯೂತ-ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next