ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಸುತ್ತಮುತ್ತ ಸಂಜೆ ಬಿದ್ದ ಆಲಿಕಲ್ಲು ಮಳೆಯಿಂದ ದ್ರಾಕ್ಷಿ-ಟೋಮೆಟೋ-ತರಕಾರಿ ಬೆಳೆ ಹಾನಿಯಾಗಿದ್ದು ಪಾಲಿಹೌಸ್ ನೆಲಕಚ್ಚಿ ಅಪಾರ ಪ್ರಮಾಣದಲ್ಲಿ ನಷ್ಟುಂಟಾಗಿದೆ.
ಸಂಜೆ ಸುರಿದ ಮಳೆಯ ಆರ್ಭಟಕ್ಕೆ ತಾಲೂಕಿನ ಬಶೆಟ್ಟಹಳ್ಳಿ ಹಾಗೂ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ಸುತ್ತಮುತ್ತ ಬೆಳೆದಿದ್ದ ದ್ರಾಕ್ಷಿ-ಟೋಮೋಟೋ ಬೆಳೆ ಆಲಿಕಲ್ಲು ಮಳೆಯಿಂದ ಹಾನಿಯಾಗಿದೆ ಬೃಹತ್ ಗಾತ್ರದ ಆಲಿಕಲ್ಲು ಬಿದ್ದಿದೆ ಇದರಿಂದ ಪಾಲಿಹೌಸ್ ನಾಶವಾಗಿದೆ ಮಳೆಯ ಆರ್ಭಟಕ್ಕೆ ಮರಗಿಡಗಳು ನೆಲಕ್ಕೆ ಉರುಳಿದ್ದು ಅದೃಷ್ಟವಷಾತ್ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ.
ಕೋವಿಡ್ ಸೋಂಕಿನ ಪ್ರಭಾವದಿಂದ ಹೂಡಿದ್ದ ಬಂಡವಾಳ ಕೈಗಟುಕದೆ ರೈತರು ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಭದಲ್ಲಿ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಮತ್ತು ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ಸುತ್ತಮುತ್ತ ಆಲಿಕಲ್ಲು ಮಳೆಯಿಂದ ರೈತರ ಬೆನ್ನು ಮುರಿದು ಬಿದ್ದಿದೆ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಸಹಿತ ಸುರಿದ ಮಳೆಯ ಆರ್ಭಟದಿಂದ ದ್ರಾಕ್ಷಿ ತೋಟ-ತರಕಾರಿ ಬೆಳೆಗಳು ನೆಲಕಚ್ಚಿದೆ ಜೊತೆಗೆ ಪಾಲಿಹೌಸ್ ಸಂಪೂರ್ಣವಾಗಿ ಹಾಳಾಗಿದ್ದು ರೈತರಿಗೆ ಲಕ್ಷಾಂತರ ರೂಗಳ ನಷ್ಟಉಂಟಾಗಿದೆ.
ಬಶೆಟ್ಟಹಳ್ಳಿ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಆಗಿರುವ ನಷ್ಟವನ್ನು ಪ್ರಾಥಮಿಕ ವರದಿಯಲ್ಲಿ ದಾಖಲಿಸಿದ್ದಾರೆ ಶುಕ್ರವಾರದಂದು ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಎಷ್ಟು ಪ್ರಮಾಣದಲ್ಲಿ ನಷ್ಟುಂಟಾಗಿದೆ ಗೌಡನಹಳ್ಳಿಯ ನವೀನ್ ಪಾಲಿಹೌಸ್,ಶೀಟ್ ಮನೆ,ನಿವೃತ್ತ ಉಪ ತಹಶೀಲ್ದಾರ್ ನಾರಾಯಣಸ್ವಾಮಿ ಅವರಿಗೆ ಸೇರಿದ ದ್ರಾಕ್ಷಿ ಚಪ್ರಕ್ಕೆ ಹಾನಿಯಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಮೊದಲು ಬಾರಿಗೆ ಆಲಿಕಲ್ಲು: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆಯಾಗಿದ್ದು ಇದರಿಂದ ರೈತರು ಲಕ್ಷಾಂತರ ರೂಗಳನ್ನು ನಷ್ಟ ಅನುಭವಿಸುಂತಾಗಿದೆ ಎಂದು ಸಂಕಷ್ಟದಲ್ಲಿ ಸಿಲುಕಿರುವ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ ಕೋವಿಡ್ ಸಂಕಷ್ಟದಲ್ಲಿ ಆಲಿಕಲ್ಲು ಮಳೆಯಿಂದ ಅಪಾರ ನಷ್ಟ ಸಂಭವಿಸಿದ್ದು ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ ಗಮನಹರಿಸಲಿ: ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಮತ್ತು ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ಸುತ್ತಮುತ್ತ ಆಲಿಕಲ್ಲು ಮಳೆಯಿಂದ ರೈತರು ಲಕ್ಷಾಂತರ ರೂಗಳು ನಷ್ಟವನ್ನು ಅನುಭವಿಸಿದ್ದು ಜಿಲ್ಲಾಡಳಿತ ಕೂಡಲೇ ರೈತರಿಗೆ ನಷ್ಟ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಕೋಡಹಳ್ಳಿ ಚಂದ್ರಶೇಖರ್ ಬಣ) ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಆಗ್ರಹಿಸಿದ್ದಾರೆ.
ಕೋಟ್: ಶಿಡ್ಲಘಟ್ಟ ತಾಲೂಕಿನಲ್ಲಿ ಆಲಿಕಲ್ಲು ಮಳೆಯಿಂದ ಅಪಾರ ಪ್ರಮಾಣದಲ್ಲಿ ದ್ರಾಕ್ಷಿ-ತರಕಾರಿ ಬೆಳೆ ನಾಶವಾಗಿರುವ ಕುರಿತು ದೂರು ಕೇಳಿಬಂದಿದೆ ಈಗಾಗಲೇ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿದ್ದಾರೆ ಬೆಳಿಗ್ಗೆ ಕೃಷಿ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಯಾವ ಬೆಳೆ ನಷ್ಟವಾಗಿದೆಯೆಂಬುದರ ಕುರಿತು ಸ್ಪಷ್ಟವಾಗಿ ತಿಳಿಯಲಿದೆಯೆಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ತಿಳಿಸಿದ್ದಾರೆ.