Advertisement

78,303 ರೈತರ ಆತ್ಮಹತ್ಯೆ;ತೋಮರ್ ಸರ್, ವೈಫಲ್ಯ ಮರೆಮಾಡಬೇಡಿ ಎಂದ ಸುರ್ಜೆವಾಲಾ

12:51 PM Dec 01, 2021 | Team Udayavani |

ನವ ದೆಹಲಿ : ‘ವೈಫಲ್ಯವನ್ನು ಮರೆಮಾಡಲು ಇಷ್ಟು ದೊಡ್ಡ ಸುಳ್ಳು ಹೇಳಬೇಡಿ’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಬುಧವಾರ ಟ್ವೀಟ್ ಮಾಡಿದ್ದಾರೆ.

Advertisement

”ತೋಮರ್ ಸರ್, ವೈಫಲ್ಯವನ್ನು ಮರೆಮಾಡಲು ಇಷ್ಟು ದೊಡ್ಡ ಸುಳ್ಳು! ಸತ್ಯ- 2020ರಲ್ಲಿ 10677 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 4090 ಸ್ವಂತ ಹೊಲ ಹೊಂದಿರುವ ರೈತರು,ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದ 639 ರೈತರು, 5097 ಇತರರ ಹೊಲಗಳಲ್ಲಿ ಕೆಲಸ ಮಾಡಿದ ರೈತರು. ಕಳೆದ 7 ವರ್ಷಗಳಲ್ಲಿ 78303 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ :ರೈತರ ಸಾವಿನ ಅಂಕಿಅಂಶ ನಮ್ಮ ಬಳಿ ಇಲ್ಲ, ಹೀಗಾಗಿ ಪರಿಹಾರದ ಪ್ರಶ್ನೆಯೂ ಇಲ್ಲ: ಕೇಂದ್ರ

ಹಿಂದಿನ ವರ್ಷಗಳಿಗೆ ಹೋಲಿಸಿದರೆ 2020 ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 5,579 ಕ್ಕೆ ಇಳಿದಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇತ್ತೀಚಿನ ಎನ್‌ಸಿಆರ್‌ಬಿ ವರದಿಯನ್ನು ಉಲ್ಲೇಖಿಸಿ  ಮಂಗಳವಾರ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದರು.

ವ್ಯಕ್ತಿಗಳ (ರೈತರನ್ನು ಒಳಗೊಂಡಂತೆ) ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆಗಳು, ಅನಾರೋಗ್ಯ, ಮಾದಕ ವ್ಯಸನ, ವಿವಾಹ ಸಂಬಂಧಿತ ಸಮಸ್ಯೆಗಳು, ಪ್ರೇಮ ವ್ಯವಹಾರಗಳು, ದಿವಾಳಿತನ ಅಥವಾ ಋಣಭಾರ, ಪರೀಕ್ಷೆಯಲ್ಲಿ ವಿಫಲತೆ, ನಿರುದ್ಯೋಗ,ವೃತ್ತಿ ಸಮಸ್ಯೆ ಮತ್ತು ಆಸ್ತಿ ವಿವಾದಗಳೂ ಪ್ರಮುಖ ಕಾರಣಗಳು ಎಂದು ತೋಮರ್ ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next