Advertisement

ತನ್ನ ಸ್ವಾರ್ಥಕ್ಕಾಗಿ ಡೇವಿಡ್ ವಾರ್ನರ್ ಐಪಿಎಲ್ ಭವಿಷ್ಯ ಹಾಳು ಮಾಡಿದರೇ ಟಾಮ್ ಮೂಡಿ?

01:29 PM Oct 10, 2021 | Team Udayavani |

ದುಬೈ: ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಯಶಸ್ಸು ಪಡೆದ ವಿದೇಶಿ ಆಟಗಾರರಲ್ಲಿ ಆಸೀಸ್ ಎಡಗೈ ಆಟಗಾರ ಡೇವಿಡ್ ವಾರ್ನರ್ ಕೂಡಾ ಒಬ್ಬರು. ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ವಾರ್ನರ್ 2016ರಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು. ಆದರೆ 2021ರ ಋತುವಿನಲ್ಲಿ ವಾರ್ನರ್ ಪ್ರದರ್ಶನ ನೀರಸವಾಗಿದ್ದು, ತಂಡ ಕೂಡಾ ಅವರನ್ನು ಕೈಬಿಟ್ಟಿತು.

Advertisement

ಭಾರತದಲ್ಲಿ ನಡೆದ ಐಪಿಎಲ್ ಮೊದಲಾರ್ಧದಲ್ಲಿ ವಾರ್ನರ್ ಕಳಪೆ ಪ್ರದರ್ಶನ ತೋರಿದ್ದರು. ಎಸ್ ಆರ್ ಎಚ್ ತಂಡದ ಪ್ರದರ್ಶನ ಕೂಡಾ ಹೀನಾಯವಾಗಿತ್ತು. ಹೀಗಾಗಿ ಫ್ರಾಂಚೈಸಿ ವಾರ್ನರ್ ರನ್ನು ನಾಯಕತ್ವದಿಂದ ಕೆಳಗಿಳಿಸಿ ಕೇನ್ ವಿಲಿಯಮ್ಸನ್ ಗೆ ಆ ಜವಾಬ್ದಾರಿ ನೀಡಿತ್ತು. ಯುಎಇ ಚರಣದಲ್ಲಿ ಮೊದಲೆರಡು ಪಂದ್ಯವಾಡಿದ್ದ ವಾರ್ನರ್ ಬ್ಯಾಟ್ ನಿಂದ ರನ್ ಬರಲಿಲ್ಲ. ನಂತರ ತಂಡದಿಂದಲೇ ಅವರು ಹೊರ ಬೀಳಬೇಕಾಯಿತು.

ಇದನ್ನೂ ಓದಿ:ಜಮ್ಮು ವೇಗಿಗೆ ಒಲಿದ ಅದೃಷ್ಟ: ವಿಶ್ವಕಪ್ ಗೆ ನೆಟ್ ಬೌಲರ್ ಆಗಿ ಉಮ್ರಾನ್ ಮಲಿಕ್ ಆಯ್ಕೆ

ಆದರೆ ವಾರ್ನರ್ ರನ್ನು ಹೈದರಾಬಾದ್ ತಂಡ ಕೈಬಿಡಲು ಕೋಚ್ ಟಾಮ್ ಮೂಡಿ ಕಾರಣ ಎನ್ನಲಾಗಿದೆ. ಫಾಕ್ಸ್ ಸ್ಪೋರ್ಟ್ಸ್ ವರದಿಯಂತೆ, ಮಾಜಿ ಆಸೀಸ್ ಆಟಗಾರ ಸನ್ ರೈಸರ್ಸ್ ಕೋಚ್ ಟಾಮ್ ಮೂಡಿ ಅವರು ಭಾರತ ತಂಡದ ಕೋಚ್ ಸ್ಥಾನಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಬಳಿಕ ರವಿ ಶಾಸ್ತ್ರಿ ಅವರ ಕೋಚ್ ಅವಧಿ ಮುಗಿಯಲಿದ್ದು, ಆ ಸ್ಥಾನಕ್ಕೆ ಬರಲು ಟಾಮ್ ಮೂಡಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.

Advertisement

ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಿಕರು ಬಿಸಿಸಿಐ ನಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಟಾಮ್ ಮೂಡಿ ಅವರ ನೆರವಿನಿಂದ ಕೋಚ್ ಹುದ್ದೆಗೇರಲು ಯತ್ನಿಸುತ್ತಿದ್ದಾರೆ. ಹೀಗಾಗಿ ಡೇವಿಡ್ ವಾರ್ನರ್ ರನ್ನು ತಂಡದಿಂದ ಸಂಪೂರ್ಣ ಹೊರಗಿರಿಸಿ ಯುವ ಭಾರತೀಯ ಆಟಗಾರರಿಗೆ ಆಡುವ ಅವಕಾಶ ನೀಡಿದ್ದಾರೆ ಎಂದು ಫಾಕ್ಸ್ ಸ್ಪೋರ್ಟ್ಸ್ ವರದಿ ಮಾಡಿದೆ.

ಭಾರತೀಯ ತಂಡದ ಕೋಚ್ ಹುದ್ದೆಗಾಗಿ ಈಗಾಗಲೇ ಹಲವು ಹೆಸರುಗಳು ಕೇಳಿ ಬರುತ್ತಿದೆ. ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್ ಹೆಸರುಗಳು ಈಗಾಗಲೇ ಮುನ್ನೆಲೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next