Advertisement
“”ಟಾಮ್ ಅವರು ಶುಕ್ರವಾರ ರಾತ್ರಿ ಮನೆಯಲ್ಲಿ ಕೊನೆಯುಸಿರೆಳೆ ದಿದ್ದಾರೆ. ಕುಟುಂಬ, ಬಂಧು-ಬಳಗ, ಅಭಿ ಮಾನಿಗಳನ್ನು ಅಗಲಿ ದ್ದಾರೆ. ಕಳೆದೊಂದು ವರ್ಷದಿಂದ ಚರ್ಮ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಟಾಮ್ ಅವರು ಕಳೆದ ತಿಂಗಳಿಂದಲೂ ಸೈಫೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು” ಎಂದು ಕುಟುಂಬದವರು ತಿಳಿಸಿದ್ದಾರೆ.ಕ್ರಿಶ್ಚಿಯನ್ ಸಂಪ್ರದಾಯದಂತೆ ಬುಧವಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಟಾಮ್ ಅವರ ಪುತ್ರ ಜಾಮೀ ತಿಳಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಾಲಿವುಡ್‌ನ ಹಿರಿಯ ನಟರಾದ ಅನಿಲ್ ಕಪೂರ್, ರಿಷಿ ಕಪೂರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಕೋರಿದ್ದಾರೆ.
ಹಿಂದಿ, ಉರ್ದು ಭಾಷೆಯಲ್ಲಿ ಹಿಡಿತ ಸಾಧಿಸಿದ್ದ ಟಾಮ್ ಆಲ್ಟರ್ ಅವರು ಕ್ರಿಕೆಟ್ ಕೋಚ್ ಹಾಗೂ ಕ್ರಿಕೆಟ್ ರೈಟರ್ ಕೂಡ ಆಗಿದ್ದರು. ಅವರು ನ್ಪೋರ್ಟ್ಸ್ವೀಕ್, ಔಟ್‌ಲುಕ್‌ಗಳಲ್ಲಿ ಕ್ರೀಡಾ ಬರಹಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಕ್ರಿಕೆಟ್‌ಗೆ ಸಂಬಂಧಿಸಿದ ಅವರ ಜ್ಞಾನ ಅವರನ್ನು ಈ ಮಟ್ಟಕ್ಕೆ ಕೊಂಡೊಯ್ದಿತ್ತು. 1988ರಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಮೊದಲ ಟಿವಿ ಸಂದರ್ಶನ ಮಾಡಿದ ಖ್ಯಾತಿಯೂ ಆಲ್ಟರ್‌ಗೆà ಸಲ್ಲುತ್ತದೆ. ಇದಾದ ಬಳಿಕ, 2014ರಲ್ಲಿ ಧೋನಿ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದಾಗ, ಆಲ್ಟರ್ ಕೆಂಡಾಮಂಡಲರಾಗಿದ್ದರು. ಧೋನಿ ಅವರಿಗೆ ನಿಷೇಧ ಹೇರಬೇಕು. ಇನ್ನು ಎಂದಿಗೂ ಅವರು ಭಾರತವನ್ನು ಪ್ರತಿನಿಧಿಸಬಾರದು. ಕ್ರಿಕೆಟ್ ಅನ್ನು ಪ್ರೀತಿಸುವ ನಮ್ಮಂಥವರಿಗೆ ಅವರು ಮೋಸ ಮಾಡಿದರು ಎಂದು ನುಡಿದಿದ್ದರು ಆಲ್ಟರ್. ಟಾಮ್ ಅವರ ನಿಧನ ನೋವನ್ನುಂಟು ಮಾಡಿದೆ. ಚಿತ್ರರಸಿಕರೆಲ್ಲರೂ ಅವರನ್ನು ನೆನಪಿಸಿಕೊಳ್ಳದೇ ಇರಲಾರರು. ಅವರನ್ನು ಕಳೆದುಕೊಂಡ ಕುಟುಂಬದವರಿಗೆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಲಿ.
– ರಾಮನಾಥ ಕೋವಿಂದ್, ರಾಷ್ಟ್ರಪತಿ