ಹೈದರಾಬಾದ್: ಈ ವರ್ಷ ತೆರೆ ಕಾಣಲಿರುವ ಬಿಗೆಸ್ಟ್ ಪ್ಯಾನ್ ಇಂಡಿಯಾ ಸಿನಿಮಾವೆಂದೇ ಹೇಳಲಾಗುತ್ತಿರುವ ʼಪುಷ್ಪ-2ʼ (Pushpa 2) ವೀಕ್ಷಣೆಗೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಮುಂಗಡವಾಗಿಯೇ ಟಿಕೆಟ್ ಬುಕ್ ಮಾಡಿಕೊಂಡು ಕಾಯುತ್ತಿದ್ದಾರೆ.
ಅಲ್ಲು ಅರ್ಜುನ್ (Allu Arjun) ʼಪುಷ್ಪರಾಜ್ʼ ಅವತಾರ ಸಿನಿಮಂದಿಗೆ ಪೈಸಾ ವಸೂಲ್ ಮನರಂಜನೆ ನೀಡುವ ನಿರೀಕ್ಷೆಗಳಿವೆ. ಅದಕ್ಕೆ ತಕ್ಕಂತೆ ಸಿನಿಮಾದ ಟ್ರೇಲರ್, ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ.
400 ಕೋಟಿಗೂ ಅಧಿಕ ಬಜೆಟ್ನಲ್ಲಿ ʼಪುಷ್ಪ-2ʼ ತಯರಾಗಿದೆ. ದೊಡ್ಡ ಬಜೆಟ್ ಜತೆಗೆ ಕಲಾವಿದರಿಗೂ ʼಪುಷ್ಪʼ ನಿರ್ಮಾಪಕರು ಭರ್ಜರಿ ಸಂಭಾವನೆ ನೀಡಿದ್ದಾರೆ. ಯಾರು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವುದರ ಕುರಿತ ಒಂದು ವರದಿ ಇಲ್ಲಿದೆ.
ಇದನ್ನೂ ಓದಿ: UI Movie: ಧಿಕ್ಕಾರಗಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ.. ಕಲಿಯುಗದ ಕರಾಳತೆ ಬಿಚ್ಟಿಟ್ಟ ʼಯುಐʼ
ಅಲ್ಲು ಅರ್ಜುನ್: ʼಪುಷ್ಪʼ ಸಿನಿಮಾದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತನ್ನ ವಿಭಿನ್ನ ಮ್ಯಾನರಿಸಂ, ಅಭಿನಯದಿಂದ ಒನ್ ಮ್ಯಾನ್ ಶೋನಂತೆ ಮಿಂಚಿದ್ದರು. ʼಪುಷ್ಪ-2ʼ ನಲ್ಲೂ ಅದೇ ಖದರ್ ತೋರಿಸಲಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ನಲ್ಲಿ ʼಪುಷ್ಪರಾಜ್ʼ ಪಾತ್ರ ಸಖತ್ ಗಮನ ಸೆಳೆದಿದೆ.
ಅಲ್ಲು ಅರ್ಜುನ್ ʼಪುಷ್ಪರಾಜ್ʼ ಪಾತ್ರಕ್ಕೆ 300 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಆ ಮೂಲಕ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ದಳಪತಿ ವಿಜಯ್, ಶಾರುಖ್ ಖಾನ್ ಅವರನ್ನು ಅಲ್ಲು ಅರ್ಜುನ್ ಮೀರಿಸಿದ್ದಾರೆ ಎಂದು ವರದಿಯಾಗಿದೆ.
ರಶ್ಮಿಕಾ ಮಂದಣ್ಣ: ಕನ್ನಡದ ರಶ್ಮಿಕಾ ಮಂದಣ್ಣ(Rashmika Mandanna) ಅವರಿಗೆ ʼಪುಷ್ಪʼ ಸೌತ್ ಸಿನಿರಂಗದಲ್ಲಿ ವಿಶೇಷ ಸಿನಿಮಾವೆಂದರೆ ತಪ್ಪಾಗದು. ಈ ಸಿನಿಮಾದಿಂದ ಅವರು ʼಶ್ರೀವಲ್ಲಿʼಯಾಗಿ ಎಲ್ಲರ ಮನಗೆದ್ದಿದ್ದಾರೆ. ಸೀಕ್ವೆಲ್ನಲ್ಲಿ ಅವರ ಪಾತ್ರದ ಕುರಿತ ಹೆಚ್ಚಿನ ಸನ್ನಿವೇಶಗಳಿರಲಿದೆ. ಅಭಿನಯದ ಜತೆಗೆ ಅವರು ಡ್ಯಾನ್ಸ್ ನಂಬರ್ನಲ್ಲೂ ಕಾಣಿಸಿಕೊಂಡಿದ್ದಾರೆ.
ʼಪುಷ್ಪ-2ʼವಿನ ಪಾತ್ರಕ್ಕಾಗಿ ರಶ್ಮಿಕಾ ಅವರು 10 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.
ಫಾಹದ್ ಫಾಸಿಲ್: ʼಪುಷ್ಪʼ ಸಿನಿಮಾದಲ್ಲಿ ಬನ್ವರ್ ಸಿಂಗ್ ಶೇಖಾವತ್ ಎನ್ನುವ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದ ಫಾಹದ್ ಫಾಸಿಲ್ (Fahadh Faasil) ಸಿನಿಮಾದ ಮೊದಲ ಭಾಗಕ್ಕಾಗಿ 3.5 ಕೋಟಿ ರೂ ಸಂಭಾವನೆ ಪಡೆದಿದ್ದರು. ಸೀಕ್ವೆಲ್ಗಾಗಿ ಅವರು 8 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.
ಶ್ರೀಲೀಲಾ: ಕನ್ನಡದ ಶ್ರೀಲೀಲಾ ಇಂದು ಕಾಲಿವುಡ್, ಟಾಲಿವುಡ್ನಲ್ಲಿ ಅಪಾರ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ನಟನೆ ಮಾತ್ರವಲ್ಲದೆ ಡ್ಯಾನ್ಸ್ ನಂಬರ್ ಹಾಡುಗಳಲ್ಲೂ ಶ್ರೀಲೀಲಾ ತನ್ನ ಛಾಪು ಮೂಡಿಸಿದ್ದಾರೆ.
ʼಪುಷ್ಪ-2ʼ ಸಿನಿಮಾದಲ್ಲಿ ʼಕಿಸಿಕ್ʼ ಎನ್ನುವ ಹಾಡಿಗೆ ಅವರು ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಅವರು 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಇದೇ ವಾರ (ಡಿ.5 ರಂದು) ಸಿನಿಮಾ ತೆರೆ ಕಾಣಲಿದೆ. ವರದಿಗಳ ಪ್ರಕಾರ 1200 ಥಿಯೇಟರ್ಗಳಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ವರದಿಯಾಗಿದೆ.