Advertisement

Pushpa 2: ಪುಷ್ಪ ಹವಾ ಮುಂದೆ ಮಂಕಾದ ಟಿಕೆಟ್‌ ದರ ಹೋರಾಟ

12:29 PM Dec 02, 2024 | Team Udayavani |

ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿ, ಇಲ್ಲಿನ ಚಿತ್ರಗಳಿಗೆ ಶೋ ಸಿಗದಂತೆ ಮಾಡುತ್ತವೆ, ಎಲ್ಲಾ ಚಿತ್ರಮಂದಿರ ಗಳನ್ನು ಆಕ್ರಮಿಸಿಕೊಳ್ಳುವ ಜೊತೆಗೆ ಟಿಕೆಟ್‌ ದರವನ್ನು ದುಪ್ಪಟ್ಟು ಮಾಡಿ ಪ್ರೇಕ್ಷಕನ ಜೇಬಿಗೆ ಕತ್ತರಿ ಹಾಕುತ್ತವೆ. ಇದರಿಂದ ನಮ್ಮ ಕನ್ನಡಿಗರ ಹಣ ಪರಭಾಷಾ ಪಾಲಾಗುತ್ತಿದೆ…

Advertisement

ಪ್ರತಿ ಬಾರಿಯೂ ಪರಭಾಷೆಯಿಂದ ಯಾವುದಾದರೂ ದೊಡ್ಡ ಸಿನಿಮಾ ರಿಲೀಸ್‌ ವೇಳೆ ಕೇಳಿಬರುವ ಮಾತಿದು. ಕೆಲವೊಮ್ಮೆ ಇದರ ಕುರಿತು “ಹೋರಾಟ’ವೂ ನಡೆಯುತ್ತದೆ. ಆ ನಂತರ ಆ ಹೋರಾಟ, ಅದರ ಪರಿಣಾಮ ಏನಾಯಿತು ಎಂದರೆ ಅದಕ್ಕೆ ಉತ್ತರವಿಲ್ಲ. ಈ ಬಾರಿಯೂ ಇಂತಹ ಹೋರಾಟವೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಆದರೆ, ಈಗ ಆದು ತಣ್ಣಗಾಗಿದೆ.

ಪರಭಾಷಾ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್‌ ದುಬಾರಿ ಟಿಕೆಟ್‌ ದರ ನಿಗದಿ ಮಾಡುವುದನ್ನು ವಿರೋಧಿಸಿ ಏಕರೂಪ ಟಿಕೆಟ್‌ ದರಕ್ಕೆ ಕನ್ನಡ ಚಿತ್ರ ರಂಗದ ಮಂದಿ ಒತ್ತಾಯಿಸಿದ್ದರು. ಮಾಧ್ಯಮ ಮುಂದೆ ಗರಂ ಆಗಿ ಹೇಳಿಕೆಗಳನ್ನೂ ಕೊಟ್ಟರು. ಮಂಡಳಿ ಮುಂದೆ ಪ್ರತಿಭಟನೆ ಕೂಡಾ ನಡೆಯಿತು. ಆದರೆ, ಅದ್ಯಾವುದು ಕಾರ್ಯರೂಪಕ್ಕೆ ಬಂದಿಲ್ಲ. ಅದರ ಪರಿಣಾಮವಾಗಿ ತೆಲುಗಿನ “ಪುಷ್ಪ-2′ ಚಿತ್ರ ರಾಜ ಮರ್ಯಾದೆಯೊಂದಿಗೆ ಕರ್ನಾಟಕದ 400ಕ್ಕೂ ಅಧಿಕ ಚಿತ್ರಮಂದಿ ರಗಳಲ್ಲಿ ತೆರೆ ಕಾಣುತ್ತಿದೆ. ಇಷ್ಟೇ ಅಲ್ಲಾ, ಕೆ.ಜಿ.ರಸ್ತೆಯ ಬರೋಬ್ಬರಿ 3 ಪ್ರಮುಖ ಚಿತ್ರ ಮಂದಿರ ಗಳು “ಪುಷ್ಪ’ ಪಾಲಾ ಗಿದೆ. ಸಂತೋ ಷ್‌, ತ್ರಿವೇಣಿ ಹಾಗೂ ಅನುಪಮ ಚಿತ್ರಮಂದಿರಗಳಲ್ಲಿ ಪುಷ್ಪ ತೆರೆಕಾಣುತ್ತಿದೆ.

ಟಿಕೆಟ್‌ ದರ ದುಬಾರಿ: “ಪುಷ್ಪ-2′ ಚಿತ್ರದ ಟಿಕೆಟ್‌ ದರ ಕೂಡಾ ದುಪ್ಪಟ್ಟಾಗಿದೆ.ಬಹುತೇಕ ಚಿತ್ರಮಂದಿರಗಳು ಮುಂಜಾನೆಯಿಂದಲೇ ಶೋ ಆರಂಭಿಸುತ್ತಿದ್ದು, ಈ ವಿಶೇಷ ಪ್ರದರ್ಶನದ ದರ 1000 ರೂಪಾಯಿಂದ ಆರಂಭವಾಗುತ್ತಿದೆ. ಅದರಾಚೆಗಿನ ಸಾಮಾನ್ಯ ಶೋಗಳ ದರ ಕೂಡಾ ದುಪ್ಪಟ್ಟಾಗಿದೆ. ಇದಲ್ಲದೇ 5ರಿಂದ 6 ಶೋಗಳ ಪ್ರದರ್ಶನ ವಾಗಲಿದೆ. ಅಲ್ಲಿಗೆ ಏಕರೂಪ ಟಿಕೆಟ್‌ ದರ ಕೂಗು ಕೇವಲ ಕೂಗಾ ಗಿಯೇ ಉಳಿದಂತಾಗಿದೆ. ಗಡುವು ಮೀರಿತು: ಟಿಕೆಟ್‌ ದರ ಆದೇಶಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಶೀಘ್ರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸುವು ದಾಗಿ ಹೇಳಿತ್ತು. ನವೆಂಬರ್‌ 15 ರೊಳಗಾಗಿ ಆದೇಶ ಮಾಡದೇ ಹೋದರೆ ರಾಜ್ಯವ್ಯಾಪಿ ಈ ಕುರಿತು ಹೋರಾಟ ಮಾಡುವು ದಾಗಿಯೂ ನಿಯೋಗ ಎಚ್ಚರಿಕೆ ನೀಡಿತ್ತು. ಆದರೆ, ಸದ್ಯ ಯಾವ ಪರಿಣಾಮವೂ ಆಗಿಲ್ಲ. ಈ ಕುರಿತು ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ.

ಇದನ್ನೂ ಓದಿ: UI Movie: ಧಿಕ್ಕಾರಗಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ.. ಕಲಿಯುಗದ ಕರಾಳತೆ ಬಿಚ್ಟಿಟ್ಟ ʼಯುಐʼ

Advertisement

ತೆಲಂಗಾಣದ ಷರತ್ತು: ತೆಲಂಗಾಣ ಸರ್ಕಾರ “ಪುಷ್ಪ-2′ ಚಿತ್ರದ ಟಿಕೆಟ್‌ ದರ ಹೆಚ್ಚಳಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ. ಡಿಸೆಂಬರ್‌ 04 ರಂದು ರಾತ್ರಿ 9.30ಗೆ ವಿಶೇಷ ಶೋಗಳನ್ನು ಪ್ರದರ್ಶಿಸಲು ಅನುಮತಿ ನೀಡಿದ್ದು, ಈ ಶೋನ ಟಿಕೆಟ್‌ ದರ 800 ರೂಪಾಯಿಗಳಿಗಿಂತಲೂ ಹೆಚ್ಚಿಗೆ ಇರಿಸುವಂತಿಲ್ಲ ಎಂದು ಸರ್ಕಾರ ಹೇಳಿದೆ. ಜೊತೆಗೆ ಡಿಸೆಂಬರ್‌ 05 ರಂದು ತೆಲಂಗಾ ಣದ ಎಲ್ಲ ಚಿತ್ರಮಂದಿರಗಳಲ್ಲಿ ಎರಡು ಹೆಚ್ಚುವರಿ ಶೋಗಳನ್ನಷ್ಟೇ ಪ್ರದರ್ಶನ ಮಾಡಲು ಸರ್ಕಾರ ಅನುಮತಿ ನೀಡಿದ್ದು, ಮಧ್ಯರಾತ್ರಿ 1 ಗಂಟೆಗೆ ಹಾಗೂ ಬೆಳಗಿನ ಜಾವ 4 ಗಂಟೆಗೆ ಈ ಶೋ ಪ್ರದರ್ಶನ ಮಾಡಬಹುದಾಗಿದೆ. ಇದರ ಟಿಕೆಟ್‌ ದರವೂ ಸಹ 800 ರೂಪಾಯಿ ಮೀರುವಂತಿಲ್ಲ ಎಂದಿದೆ. ಇದರ ಜೊತೆಗೆ ಇನ್ನೂ ಹಲವು ಷರತ್ತುಗಳನ್ನು ವಿಧಿಸಿ, ಅನುಮತಿ ನೀಡಿದೆ.

ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಅಲ್ಲಿಂದ ಅಧಿಕೃತ ಆದೇಶ ಆಗಬೇಕಿತ್ತು. ಇನ್ನೂ ಆಗಿಲ್ಲ. ಹಾಗಂತ ನಮ್ಮ ಹೋರಾಟ ನಿಲ್ಲುವುದಿಲ್ಲ. ಏಕ ರೂಪ ಟಿಕೆಟ್‌ ದರ ಕುರಿತು ಮತ್ತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಎನ್‌.ಎಂ.ಸುರೇಶ್‌, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next