Advertisement

SSMB29: ಮಹೇಶ್‌ – ಪ್ರಭಾಸ್‌ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್‌ ನೀಡಲಿದ್ದಾರೆ ಹಿರಿಯ ನಟ

04:15 PM Jul 08, 2024 | Team Udayavani |

ಹೈದರಾಬಾದ್:‌ ರಾಜಮೌಳಿ – ಮಹೇಶ್‌ ಬಾಬು ಕಾಂಬಿನೇಷನ್‌ನಲ್ಲಿ ಬರಲಿರುವ ಪ್ಯಾನ್‌ ಇಂಡಿಯಾ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಚಿತ್ರದ ಅಪ್ಡೇಟ್‌ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Advertisement

ʼSSMB29ʼ ಅನೌನ್ಸ್‌ ಆದ ದಿನದಿಂದ ಸುದ್ದಿಯಲ್ಲಿದೆ. ʼಆರ್‌ ಆರ್‌ ಆರ್‌ʼ ಬಳಿಕ ರಾಜಮೌಳಿ ಅವರು ಕೈಗೆತ್ತಿಕೊಂಡಿರುವ ಮತ್ತೊಂದು ಮೆಗಾ ಬಜೆಟ್‌ ವುಳ್ಳ ಸಿನಿಮಾ ಇದಾಗಿದ್ದು, ಮಹೇಶ್‌ ಬಾಬು 29ನೇ ಚಿತ್ರ ಇದಾದ ಕಾರಣ ಸಿನಿಮಾಕ್ಕೆ ತಾತ್ಕಾಲಿಕವಾಗಿ ʼSSMB29ʼ ಟೈಟಲ್‌ ಇಡಲಾಗಿದೆ.

ಅಡ್ವೆಂಚರ್‌ ಜಂಗಲ್‌, ಸಾಹಸಮಯ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ಮಹೇಶ್ ಬಾಬು ಅವರ ಪಾತ್ರವು ರಾಮಾಯಣದ ಹನುಮಂತನಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಈ ಸಿನಿಮಾದಲ್ಲಿ ಮಾಲಿವುಡ್‌ ನಟ ಪೃಥ್ವಿರಾಜ್‌ ಸುಕುಮಾರನ್ ವಿಲನ್‌ ಆಗಿ ನಟಿಸಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿತ್ತು. ಈ ಸುದ್ದಿ ಚರ್ಚೆಯಲ್ಲಿರುವಾಗಲೇ ಸಿನಿಮಾ ಬಗ್ಗೆ ಮತ್ತೊಂದು ಅಪ್ಡೇಟ್‌ ಹೊರಬಿದ್ದಿದೆ.

ರಾಜಮೌಳಿ ತನ್ನ ಪ್ರತಿ ಸಿನಿಮಾವನ್ನು ಶುರು ಮಾಡುವ ಮುನ್ನ ಸಾಕಷ್ಟು ತಯಾರಿಯನ್ನು ನಡೆಸಿಕೊಳ್ಳುತ್ತಾರೆ. ಅನೇಕ ವರ್ಕ್‌ ಶಾಪ್‌ ಗಳನ್ನು ಮಾಡುತ್ತಾರೆ. ಇದೀಗ ಈ ಸಿನಿಮಾಕ್ಕೂ ರಾಜಮೌಳಿ ವರ್ಕ್‌ ಶಾಪ್‌ ನಡೆಸಲಿದ್ದು, ಇದಕ್ಕಾಗಿ ಖ್ಯಾತ ಕಾಲಿವುಡ್‌ ನಟ ನಾಸರ್ ಅವರೊಂದಿಗೆ ರಾಜಮೌಳಿ  ವರ್ಕ್‌ ಶಾಪ್‌ ವಿಚಾರದ ಬಗ್ಗೆ ಮಾತನಾಡಿದ್ದಾರೆ.

Advertisement

ನಾಸರ್ ರಂಗಭೂಮಿ ಕಲಾವಿದರಾಗಿದ್ದು, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಹೊಂದಿರುವುದರಿಂದ ಅವರ ನೇತೃತ್ವದಲ್ಲಿ ವರ್ಕ್‌ ಶಾಪ್‌ ವೊಂದನ್ನು ನಡೆಸಲಿದ್ದು, ಇದರಲ್ಲಿ ಮಹೇಶ್‌ ಬಾಬು ಸೇರಿದಂತೆ ಇತರೆ ಕಲಾವಿದರು ಭಾಗಿಯಾಗಲಿದ್ದಾರೆ. ಈ ಕಲಾವಿದರಿಗೆ ನಾಸರ್‌ ಅವರು ಕೆಲವೊಂದಿಷ್ಟು ಸಲಹೆ ಹಾಗೂ ನಟನಾ ಅನುಭವದ ಬಗ್ಗೆ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ.

ನಾಸರ್‌ ಹಾಗೂ ಮಹೇಶ್‌ ಬಾಬು ಜೊತೆಯಾಗಿ ʼಅತ್ತಾಡು, ʼಪೋಕಿರಿʼ, ʼದೂಕುಡುʼ, ʼಆಗಡುʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಸರ್‌ ರಾಜಮೌಳಿ ಅವರ ʼಬಾಹುಬಲಿʼ ಸಿನಿಮಾದಲ್ಲಿ ಬಿಜ್ಜಳ ದೇವನಾಗಿ ನಟಿಸಿದ್ದರು.

ವಿಜಯೇಂದ್ರ ಪ್ರಸಾದ್ ಈ ಸಿನಿಮಾಕ್ಕೆ ಸ್ಕ್ರಿಪ್ಟ್‌ ಬರೆದಿದ್ದು, ಬಹುದೊಡ್ಡ ಪ್ರಾಜೆಕ್ಟ್‌ ಶೀಘ್ರದಲ್ಲಿ ಶುರುವಾಗುವ ಸಾಧ್ಯತೆಯಿದೆ.

“ಇದೊಂದು ವಿಶ್ವ ಪರ್ಯಟನೆಯುಳ್ಳ ಸಾಹಸಮಯವದ ಸಿನಿಮಾ, ಈ ಸಿನಿಮಾ ಪ್ರತಿಯೊಬ್ಬ ಪ್ರೇಕ್ಷಕರನ್ನು ಸೆಳೆಯಲಿದೆ. ಇದು ಜೇಮ್ಸ್‌ ಬಾಂಡ್‌ ಅಥವಾ ಇಂಡಿಯಾನ ಜೋನ್ಸ್‌  ಸಾಹಸದ ಹಾಗೆ ಭಾರತೀಯ ಶೈಲಿಯಲ್ಲಿ ಮೂಡಿಬರುವ ಚಿತ್ರ. ಥಿಯೇಟರ್‌ ನಲ್ಲಿ ಈ ಸಿನಿಮಾ ಎಲ್ಲರನ್ನೂ ರೋಮಾಂಚನಗೊಳಿಸಲಿದೆ” ಎಂದು ರಾಜಮಾಳಿ ಈ ಹಿಂದೆ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next