Advertisement

ಕಮಲ ಮುಡಿದ ನಟಿ ಪಾಯೆಲ್ ಸರ್ಕಾರ್…!

07:52 PM Feb 25, 2021 | Team Udayavani |

ಕೊಲ್ಕತ್ತಾ : ವಿಧಾನಸಭೆ ಚುನಾವಣೆ ಎದುರು ನೋಡುತ್ತಿರುವ ಪಶ್ಚಿಮ ಬಂಗಾಳದಲ್ಲಿ ಇದೀಗ ಸಿನಿಮಾ ತಾರೆಯರು ರಾಜಕೀಯ ಅಂಗಳಕ್ಕೆ ಕಾಲಿಡುತ್ತಿರುವುದು ಹೆಚ್ಚುತ್ತಿದೆ. ಟಾಲಿವುಡ್ (ಪಶ್ಚಿಮ ಬಂಗಾಳ ಚಿತ್ರರಂಗ)ನ ಖ್ಯಾತ ನಟರು, ನಟಿಯರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗಳಿಯುತ್ತಿದ್ದಾರೆ.

Advertisement

ಇಂದು (ಫೆ.25) ಚಿತ್ರನಟಿ ಪಾಯೆಲ್ ಸರ್ಕಾರ್ ಬಿಜೆಪಿ ಸೇರಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರ ಸಮ್ಮುಖದಲ್ಲಿ ಕಮಲ ಮುಡಿದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಯಶ್ ದಾಸಗುಪ್ತಾ ಬಿಜೆಪಿ ಸೇರಿದ್ದರು. ಇದೀಗ ಪಾಯೆಲ್ ಸರದಿ.

ಚುನಾವಣೆ ಸಮೀಪಿಸುತ್ತಿದ್ದಂತೆ ಕಾರ್ಯತಂತ್ರ ಬಿಗಿಗೊಳಿಸುತ್ತಿರುವ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಚಿತ್ರ ತಾರೆಯರಿಗೆ ಗಾಳ ಹಾಕುತ್ತಿವೆ. ಸಿನಿಮಾ ರಂಗದಲ್ಲಿ ಹೆಸರು ಮಾಡಿರುವ ನಟ-ನಟಿಯರಿಗೆ ಮಣೆ ಹಾಕುತ್ತಿವೆ. ಈಗಾಗಲೇ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಹಲವು ತಾರೆಯನ್ನು ಪಕ್ಷಕ್ಕೆ ಕರೆತಂದು ಬೀಗುತ್ತಿದ್ದರೆ, ನಾವೇನೂ ಕಮ್ಮಿಯಿಲ್ಲ ಎನ್ನುವಂತೆ ಬಿಜೆಪಿ ಕೂಡ ಸೆಲಬ್ರಿಟಿಗಳನ್ನು ತನ್ನ ಪಕ್ಷಕ್ಕೆ ಬರಮಾಡಿಕೊಂಡು ದೀದಿಗೆ ಟಕ್ಕರ್ ಕೊಡುತ್ತಿದೆ.

ಇನ್ನು ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲೂ ಉಭಯಪಕ್ಷಗಳ ಸಿನಿಮಾ ತಾರೆಯನ್ನು ಕರೆತಂದು ಟಿಕೆಟ್ ನೀಡದ್ದವು. ಬಿಜೆಪಿ ಹಾಗೂ ಟಿಎಂಸಿಯಿಂದ ಕೆಲ ನಟ-ನಟಿಯರು ಗೆಲುವು ಪಡೆದು ಲೋಕಸಭೆ ಪ್ರವೇಶಿಸಿದ್ದರು. ಇದೀಗ ವಿಧಾನ ಸಭೆ ಚುನಾವಣೆಗೂ ಇದೇ ತಂತ್ರ ಪ್ರಯೋಗಿಸಲು ಮುಂದಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next