Advertisement
ಅವರು ಬುಧವಾರ ಹೆಜಮಾಡಿಯ ಟೋಲ್‌ಗೇಟ್‌ನಲ್ಲಿ ಟೋಲ್ ಸಂಗ್ರಹಿಸುವ ಹುನ್ನಾರದ ವಿರುದ್ಧ ಸಾರ್ವಜನಿಕರ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಇಲ್ಲಿನ ಸಮಸ್ಯೆ ಕುರಿತು ತಾನು ರಾಜ್ಯ ಲೋಕೋಪಧಿಯೋಗಿ ಸಚಿವರು ಹಾಗೂ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ಅಗತ್ಯ ಬಿದ್ದಲ್ಲಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲೂ ಈ ವಿಚಾರ ಎತ್ತುವುದಾಗಿ ಶಾಸಕ ಸೊರಕೆ ತಿಳಿಸಿದರು.
ಸಭೆ ಉದ್ದೇಶಿಸಿ ಪಂ.ಪ್ರ. ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಮಾತಾಡಿ, ಬಲಾತ್ಕಾರವಾಗಿ ಟೋಲ್ ಸಂಗ್ರಹಕ್ಕೆ ನವಯುಗ ನಿರ್ಮಾಣ ಕಂಪೆನಿ ಮುಂದಾದಲ್ಲಿ ಜಿಲ್ಲೆಯ ಎಲ್ಲ ಪಂಚಾಯತ್ ಪ್ರತಿನಿಧಿಗಳು ಸಂಘಟಿತರಾಗಿ ಮುಂದಿನ ಪ್ರತಿಭಟನೆಯಲ್ಲಿ ಭಾಗವಹಿಸಲಿರುವರು ಎಂದರು. ಕಾಪು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮಾಹಿತಿ ಹಕ್ಕುಗಳ ಪ್ರಕಾರ ಹೆದ್ದಾರಿ ಕಾಮಗಾರಿಗಳು ನಿಗದಿತ ಪ್ರಮಾಣದಲ್ಲಿ ಆಗಿಲ್ಲ ಎಂದು ಹೇಳಿದರು. ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ತಾ| ಕೆಡಿಪಿ ಸದಸ್ಯ ಅಬ್ದುಲ್ ಹಮೀದ್, ಹೆಜಮಾಡಿ ನಾಗರಿಕ ಸಮಿತಿ ಅಧ್ಯಕ್ಷ ಗುಲಾಂ ಮೊಹಮ್ಮದ್ ಸಹಿತ ವಿವಿಧ ಸಂಘಟನೆಗಳ ಮುಖ್ಯಸ್ಥರು, ತಾ.ಪಂ. ಸದಸ್ಯರು, ಜನಪ್ರತಿನಿಗಳು ಹೆಜಮಾಡಿಯಲ್ಲಿ ನಡೆದಿದ್ದ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗಿಗಳಾದರು.