Advertisement

ವಾಹನಗಳಿಗೆ ಟೋಲ್‌ ಏರಿಕೆ ಬಿಸಿ

09:20 AM Mar 30, 2018 | Team Udayavani |

ಮಂಗಳೂರು: ಹೊಸ ಆರ್ಥಿಕ ವರ್ಷಾರಂಭದ ಜತೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ಟೋಲ್‌ ಪ್ಲಾಜಾ ಬಳಕೆದಾರರಿಗೆ ಶುಲ್ಕ ಏರಿಕೆಯ ಬಿಸಿ ನೀಡಲಿದೆ. ಕರಾವಳಿ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಐದು ಟೋಲ್‌ ಫ್ಲಾಜಾಗಳಲ್ಲೂ ಎ. 1ರಿಂದಲೇ ವಾಹನಗಳು ಈ ಹಿಂದಿಗಿಂತ ಹೆಚ್ಚಿನ ಶುಲ್ಕ ಪಾವತಿಸಬೇಕಿದೆ. ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್‌ ಎನ್‌ಐಟಿಕೆ ಟೋಲ್‌ ಪ್ಲಾಜಾಗಳು ನೇರವಾಗಿ ಎನ್‌ಎಚ್‌ಎಐ ವ್ಯಾಪ್ತಿಗೆ ಬರುತ್ತವೆ. ದ.ಕ. ಹಾಗೂ ಕೇರಳ ಗಡಿಭಾಗದ ತಲಪಾಡಿ ಹಾಗೂ ಉಡುಪಿ ಜಿಲ್ಲೆಯ ಗುಂಡ್ಮಿ ಮತ್ತು ಹೆಜಮಾಡಿಯ ಟೋಲ್‌ ಪ್ಲಾಜಾಗಳು ನವಯುಗ ಉಡುಪಿ ಟೋಲ್‌ವೇ ಪ್ರೈವೇಟ್‌ ಲಿಮಿಟೆಡ್‌ ವ್ಯಾಪ್ತಿಗೆ ಬರುತ್ತದೆ. ಈ ಎಲ್ಲ ಟೋಲ್‌ಗ‌ಳಲ್ಲೂ ಬಹುತೇಕ ಟೋಲ್‌ ಶುಲ್ಕಗಳು ಹೆಚ್ಚಳಗೊಳ್ಳಲಿವೆ.

Advertisement

ಸುರತ್ಕಲ್‌ ಎನ್‌ಐಟಿಕೆ ಟೋಲ್‌
ಸುರತ್ಕಲ್‌ ಟೋಲ್‌ ಪ್ಲಾಜಾದಲ್ಲಿ ಲಘು ವಾಹನದ ಏಕಮುಖ ಸಂಚಾರದ ಶುಲ್ಕ ಹಿಂದಿನಂತೆಯೇ 50 ರೂ. ಇದ್ದರೆ, ಅದೇ ದಿನ ಮರಳಿ ಬರುವ ಶುಲ್ಕ 5 ರೂ. ಹೆಚ್ಚಳವಾಗಿ 75 ರೂ.ಗೆ ಏರಿಕೆಯಾಗಲಿದೆ. ತಿಂಗಳ ಪಾಸ್‌ ಶುಲ್ಕ 1,600 ರೂ.ಗಳ ಬದಲು 1,670 ರೂ.ಗೆ ಏರಿಕೆಯಾದರೆ, ಜಿಲ್ಲೆಯಲ್ಲಿ ನೋಂದಾಯಿತ ವಾಣಿಜ್ಯ ವಾಹನಕ್ಕೆ ಹಿಂದಿನಂತೆ 25 ರೂ. ಇರುತ್ತದೆ.

ಲಘು ವಾಣಿಜ್ಯ, ಸರಕು ವಾಹನ, ಮಿನಿ ಬಸ್‌ಗಳ ಏಕಮುಖ ಸಂಚಾರಕ್ಕೆ ಹಿಂದಿನಂತೆ 80 ರೂ. ಇದ್ದರೆ, ಅದೇ ದಿನ ಮರಳಿ ಬರುವುದಾಗಿದ್ದರೆ 115 ರೂ.ಗಳ ಬದಲು 120 ರೂ., ಮಾಸಿಕ ಶುಲ್ಕ 2,585 ರೂ.ಗಳ ಬದಲು 2,695 ರೂ.ಗಳಿಗೆ ಏರಿಕೆಯಾಗಲಿದೆ. ಸ್ಥಳೀಯ ವಾಣಿಜ್ಯ ವಾಹನಗಳಿಗೆ ಶುಲ್ಕ ಹಿಂದಿನಂತೆ 40 ರೂ. ಇರುತ್ತದೆ.

ಬಸ್‌, ಟ್ರಕ್‌ಗಳ ಏಕಮುಖ ಸಂಚಾರಕ್ಕೆ 170 ರೂ. ಪಾವತಿಸಬೇಕು. ಅದೇ ದಿನ ಮರಳಿ ಬರುವುದಿದ್ದರೆ 255 ರೂ., ಮಾಸಿಕ ಪಾಸ್‌ಗೆ 5,650 ರೂ., ಜಿಲ್ಲೆಯಲ್ಲಿ ನೋಂದಾಯಿತ ವಾಹನ ಗಳಿಗೆ ಶುಲ್ಕ 85 ರೂ.ಗಳಿಗೆ ಏರಿಕೆಯಾಗಲಿದೆ. ಇದೇ ರೀತಿ ಮೂರು ಆ್ಯಕ್ಸೆಲ್‌ ಗಿಂತ ಹೆಚ್ಚಿನ ಭಾರೀ ವಾಣಿಜ್ಯ ವಾಹನಗಳು, ಎಚ್‌ಸಿಎಂ, ಇಎಂಇ, ಎಂಎವಿ ವಾಹನ, ಮಿತಿ ಮೀರಿದ ವಾಹನ (7 ಅಕ್ಸೆಲ್‌ಗಿಂತ ಹೆಚ್ಚಿನ)ಗಳ ಶುಲ್ಕದಲ್ಲೂ ಏರಿಕೆಯಾಗಿದೆ. ಟೋಲ್‌ ಪ್ಲಾಜಾದಿಂದ 20 ಕಿ.ಮೀ. ವಿಸ್ತೀರ್ಣದೊಳಗಿನ ಎಲ್ಲ ವಾಣಿಜ್ಯೇತರ ವಾಹನಗಳು 255 ರೂ.ಗಳ ತಿಂಗಳ ಪಾಸ್‌ ಪಡೆಯಬೇಕಿದೆ.

ಬ್ರಹ್ಮರಕೂಟ್ಲು ಟೋಲ್‌
ಈ ಟೋಲ್‌ ಪ್ಲಾಜಾದಲ್ಲಿ ಲಘು ವಾಹನಗಳ ಏಕಮುಖ ಸಂಚಾರದ ಶುಲ್ಕ 25 ರೂ., ಅದೇ ದಿನ ಮರಳಿ ಬರುವ ಶುಲ್ಕ 35 ರೂ. ಹಿಂದಿನಂತೆಯೇ ಇರುತ್ತದೆ. ತಿಂಗಳ ಪಾಸ್‌ ಶುಲ್ಕ 770 ರೂ.ಗಳ ಬದಲು 800 ರೂ.ಗಳಿಗೆ ಏರಿಕೆಯಾದರೆ, ಜಿಲ್ಲೆಯಲ್ಲಿ ನೋಂದಾಯಿತ ವಾಣಿಜ್ಯ ವಾಹನಕ್ಕೆ ಹಿಂದಿನಂತೆ 10 ರೂ. ಇರುತ್ತದೆ.
ಲಘು ವಾಣಿಜ್ಯ, ಸರಕು ವಾಹನ, ಮಿನಿ ಬಸ್‌ಗಳ ಏಕಮುಖ ಸಂಚಾರಕ್ಕೆ 35 ರೂ.ಗಳ ಬದಲು 40 ರೂ., ಅದೇ ದಿನ ಮರಳಿ ಬರುವುದಕ್ಕೆ 55 ರೂ.ಗಳ ಬದಲು 60 ರೂ., ಮಾಸಿಕ ಶುಲ್ಕ 1,240 ರೂ.ಗಳ ಬದಲು 1,295 ರೂ. ಗಳಿಗೆ ಏರಿಕೆಯಾಗಿದೆ. ಸ್ಥಳೀಯ ವಾಣಿಜ್ಯ ವಾಹನ ಶುಲ್ಕ ಹಿಂದಿನಂತೆ 20 ರೂ. ಇರುತ್ತದೆ.

Advertisement

ಬಸ್‌, ಟ್ರಕ್‌ಗಳ ಏಕಮುಖ ಸಂಚಾರಕ್ಕೆ ಶುಲ್ಕ ಹಿಂದಿನಂತೆಯೇ 80 ರೂ. ಇದ್ದರೆ, ಅದೇ ದಿನ ಮರಳಿ ಬರುವುದಕ್ಕೆ 120 ರೂ., ಮಾಸಿಕ ಪಾಸ್‌ 2,710 ರೂ.ಗಳಿಗೆ ಏರಿಕೆಯಾಗಿದೆ. ಜಿಲ್ಲೆಯ ನೋಂದಣಿ ವಾಹನಕ್ಕೆ ಹಿಂದಿನಂತೆಯೇ 40 ರೂ. ಇರುತ್ತದೆ. ಇದೇ ರೀತಿ 3 ಆ್ಯಕ್ಸೆಲ್‌ಗಿಂತ ಹೆಚ್ಚಿನ ವಾಣಿಜ್ಯ ವಾಹನಗಳು, ಎಚ್‌ಸಿಎಂ, ಇಎಂಇ, ಎಂಎವಿ ವಾಹನ, ಮಿತಿ ಮೀರಿದ ವಾಹನ (7 ಆ್ಯಕ್ಸೆಲ್‌ಗಿಂತ ಹೆಚ್ಚಿನ) ಗಳ ಶುಲ್ಕದಲ್ಲೂ ಏರಿಕೆಯಾಗಿದೆ. 

ನವಯುಗ ಟೋಲ್‌ಗ‌ಳು
ನವಯುಗ ಟೋಲ್‌ಗ‌ಳಲ್ಲಿ ಎ.1ರಿಂದ ಏಕ ಮುಖ ಸಂಚಾರ ಲಘು ವಾಹನಗಳಿಗೆ ಗುಂಡ್ಮಿ ಹಾಗೂ ತಲಪಾಡಿಯಲ್ಲಿ 40 ರೂ., ಹೆಜಮಾಡಿಯಲ್ಲಿ 35 ರೂ. ಆಗಿರುತ್ತದೆ. ಅದೇ ದಿನ ಮರಳಿ ಬರುವುದಕ್ಕೆ ಗುಂಡ್ಮಿಯಲ್ಲಿ 65 ರೂ., ಹೆಜಮಾಡಿಯಲ್ಲಿ 50 ರೂ., ತಲಪಾಡಿಯಲ್ಲಿ 55 ರೂ. ಆಗಿರುತ್ತದೆ. ಮಾಸಿಕ ಪಾಸ್‌ ಮೂರು ಕಡೆಗಳಲ್ಲಿ ಕ್ರಮವಾಗಿ 1,395 ರೂ., 1,145 ರೂ., 1,255 ರೂ. ಆಗಿರುತ್ತದೆ.

ಲಘು ವಾಣಿಜ್ಯ, ಸರಕು ವಾಹನ ಹಾಗೂ ಮಿನಿ ಬಸ್‌ಗಳಿಗೆ ಗುಂಡ್ಮಿ, ಹೆಜಮಾಡಿ, ತಲಪಾಡಿಗಳಲ್ಲಿ ಕ್ರಮವಾಗಿ ಏಕಮುಖ ಸಂಚರಕ್ಕೆ 70 ರೂ., 55 ರೂ., 60 ರೂ., ಅದೇ ದಿನ ಮರಳಿ ಬರುವುದಕ್ಕೆ 100 ರೂ., 85 ರೂ., 85 ರೂ., ಮಾಸಿಕ ಶುಲ್ಕ 2,250 ರೂ., 1,850 ರೂ., 1,935 ರೂ. ಆಗಿರುತ್ತದೆ. ಜತೆಗೆ ಬಸ್ಸು ಮತ್ತು ಟ್ರಕ್‌ಗಳಿಗೆ ಕ್ರಮವಾಗಿ ಏಕಮುಖ ಸಂಚಾರಕ್ಕೆ 140 ರೂ., 115 ರೂ., 120 ರೂ., ಅದೇ ದಿನ ಮರಳಿ ಬರುವುದಕ್ಕೆ 210 ರೂ., 175 ರೂ., 175 ರೂ., ಮಾಸಿಕ ಶುಲ್ಕ 4,715 ರೂ., 3,880 ರೂ., 3,935 ರೂ. ಆಗಿರುತ್ತದೆ. 
ಇದೇ ರೀತಿ ಮೂರು ಆ್ಯಕ್ಸೆಲ್‌ಗಿಂತ ಹೆಚ್ಚಿನ ವಾಣಿಜ್ಯ ವಾಹನಗಳು, ಎಚ್‌ಸಿಎಂ, ಇಎಂಇ, ಎಂಎವಿ ವಾಹನ, ಮಿತಿ ಮೀರಿದ ವಾಹನ (7 ಆ್ಯಕ್ಸೆಲ್‌ಗಿಂತ ಹೆಚ್ಚಿನ)ಗಳ ಶುಲ್ಕದಲ್ಲೂ ಏರಿಕೆಯಾಗಿದೆ. ಮೂರೂ ಟೋಲ್‌ ಫ್ಲಾಜಾಗಳಿಂದ 20 ಕಿ.ಮೀ. ಅಂತರದಲ್ಲಿ ವಾಸಿಸುವವರ ಸ್ಥಳೀಯ ವಾಣಿಜ್ಯೇತರ ವಾಹನಗಳಿಗೆ ಪ್ರತಿ ಟೋಲ್‌ ಪ್ಲಾಜಾಕ್ಕೆ ಮಾಸಿಕ ಪಾಸ್‌ ದರ 255 ರೂ. ಆಗಿರುತ್ತದೆ.

— ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next