Advertisement
ಕಡಿಮೆ ಅವಧಿಯಲ್ಲೇ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಿದ್ದ ಶೇ.10ರಷ್ಟು ಹಣ ಟೋಲ್ ಶುಲ್ಕದ ಮೂಲಕ ಎನ್‌ಎಚ್‌ಎಐಗೆ ಜಮೆಯಾಗಿದೆ. ಈ ಸಂಗತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಖಚಿತಪಡಿಸಿದೆ.
ಎಕ್ಸ್‌ಪ್ರೆಸ್ ವೇನಲ್ಲಿ ಪೂರ್ಣ ಪ್ರಮಾಣದ ಟೋಲ್ ಸಂಗ್ರಹಣೆ ಆರಂಭವಾಗಿದ್ದು 2023 ಜು.1ರಿಂದ, 2023-24ನೇ ಸಾಲಿನಲ್ಲಿ 270.96 ಕೋಟಿ ರೂ., 2024-25ನೇ ಸಾಲಿನಲ್ಲಿ 167.32 ಕೋಟಿ ರೂ., ಪ್ರಸಕ್ತ ಹಣಕಾಸಿನ ವರ್ಷ ಪೂರ್ಣಗೊಳ್ಳಲು ಇನ್ನೂ 4 ತಿಂಗಳು ಇದ್ದು, ಟೋಲ್ ಸಂಗ್ರಹಣೆ ಇನ್ನಷ್ಟು ಹೆಚ್ಚಾಗಲಿದೆ. 119 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣಕ್ಕೆ ಎನ್‌ಎಚ್‌ಎಐ ರೂ. 4,473 ಕೋಟಿ ಖರ್ಚು ಮಾಡಿದೆ.