ಹರಿಹರ: ಪರಸ್ಪರ ಸಾಮರಸ್ಯದಿಂದ ಇದ್ದರೆ ಮಾತ್ರ ಒಂದು ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಆದಿ ಜಾಂಬವ ಮಠದ ಶ್ರೀ ಷಡಾಕ್ಷರಿಮುನಿ ದೇಶಿಕೇಂದ್ರ ಶ್ರೀಗಳು ಹೇಳಿದರು. ತಾಲೂಕಿನ ನಂದಿಗಾವಿ ಗ್ರಾಮದಲ್ಲಿ ನಡೆದ ಆದಿ ಜಾಂಬವ ಜಾಗೃತಿ ಪಾದಯಾತ್ರೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾನವ ಸಂಘ ಜೀವಿ, ಸಮಾಜದಲ್ಲಿ ಮತ್ತೂಬ್ಬರ ತ್ಯಕ್ಷ-ಪರೋಕ್ಷ ಸಹಕಾರವಿಲ್ಲದೇ ಯಾರೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅದರಂತೆ ಇತರೆ ಸಮಾಜಗಳೊಂದಿಗೆ ಸಮಾರಸ್ಯದಿಂದ ಇದ್ದಾಗ ಮಾತ್ರ ಒಂದು ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಜಾಪ್ರಭುತ್ವದಲ್ಲಿ ಎಲ್ಲರೂ ಸಂಘಟಿತರಾಗಿ ಅಭಿವೃದ್ಧಿ ಹೊಂದುತ್ತಿದ್ದರೆ ನಮ್ಮ ಸಮಾಜ ಮಾತ್ರ ಒಮ್ಮೆಮ್ಮೆ ದಿಕ್ಕು ತಪ್ಪುತ್ತಿದೆ ಎಂದು ಆತಂಕವಾಗುತ್ತದೆ. ಆದಿ ಜಾಂಬವ ಸಮಾಜಕ್ಕೆ ಭವ್ಯ ಇತಿಹಾಸವಿದೆ. ಆದರೆ ಸಮಾಜದ ಬುದ್ಧಿಜೀವಿಗಳಿಗೆ ಮಾತ್ರ ಇದರ ಬಗ್ಗೆ ಆಸಕ್ತಿಯಿಲ್ಲ. ಆದಿ ಜಾಂಬವರ ನಡೆ, ಮಾದಿಗರ ಕೇರಿ ಕಡೆ.. ಎಂಬುದಕ್ಕೆ ಕೆಲವರು ಕೊಂಕು ಮಾತನಾಡಿದ್ದಾರೆ.
ಮೀಸಲಾತಿಗೆ ಮಾದಿಗ ಎನ್ನುವುದಾದರೆ, ಮಾದಿಗರ ಕೇರಿಗೆ ಆದಿ ಜಾಂಬವ ಸಮಾಜ ಏಕೆ ಹೋಗಬಾರದು ಎಂದು ಪ್ರಶ್ನಿಸಿದ ಅವರು, ಇಂತಹ ತೋಳೇರಿಸುವ ಪ್ರವೃತ್ತಿ ತೊರೆದು ಸಮಾಜ ಕಟ್ಟುವುದರಲ್ಲಿ ತೊಡಗಿಸಿಕೊಳ್ಳಿ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಅಧ್ಯಕ್ಷ ಎ.ಗೋವಿಂದ ರೆಡ್ಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರೀಗಳು ನಡೆಸುತ್ತಿರುವ ಪ್ರಯತ್ನಕ್ಕೆ ಸಮಾಜ ಬಾಂಧವರು ಕೈಜೋಡಿಸಬೇಕು ಎಂದರು.
ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ತಲತಲಾಂತರದಿಂದ ಶೋಷಣೆಗೆ ಒಳಗಾದ ಮಾದಿಗ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶ್ರೀಗಳು ಸಮಾಜವನ್ನು ಮುಖ್ಯ ವಾಹಿನಿಗೆ ತರುವಲ್ಲಿ ಮಹತ್ತರವಾದ ಹೆಜ್ಜೆ ಇಟ್ಟಿದ್ದಾರೆ ಎಂದರು. ಕುರುಬ ಸಮಾಜದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ದೇವೇಂದ್ರಪ್ಪ ಮಾತನಾಡಿದರು. ಎನ್.ಜಿ.ನಾಗನಗೌಡ್ರು ಉದ್ಘಾಟಿಸಿದರು.
ಗ್ರಾಪಂ ಅಧ್ಯಕ್ಷೆ ದುರ್ಗಮ್ಮ, ನಗರಸಭೆ ಸದಸ್ಯ ಶಂಕರ್ ಖಾಟವಕರ್, ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಜಗದೀಶಪ್ಪ ಬಣಕಾರ, ಭದ್ರ ನೀರು ಬಳಕೆದಾರರ ಸಹಕಾರ ಮಂಡಳದ ಅಧ್ಯಕ್ಷ ದ್ಯಾವಪ್ಪರೆಡ್ಡಿ, ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಇಂದೂಧರ್ ಎನ್.ರುದ್ರೇಗೌಡ್, ಆರ್.ಟಿ.ಬಸವನಗೌಡ, ಪಿ.ರುದ್ರಮುನಿಯಪ್ಪ, ಬಿ.ಹನುಮಂತ ರೆಡ್ಡಿ, ವೈ. ರಂಗಪ್ಪ ರೆಡ್ಡಿ, ಬಿ.ಆರ್.ರುದ್ರೇಶ್, ಎ.ಎನ್. ರಾಜಣ್ಣ, ಬಿ.ಹನುಮಂತ ರೆಡ್ಡಿ, ಎಂ.ಮಲ್ಲೇಶಪ್ಪ,
ಮಂಜುನಾಥ ಆರ್, ಓಂಕಾರಪ್ಪ ವಾಸನ, ಎ.ಕೆ.ನರಸಿಂಹಪ್ಪ, ಪರುಶುರಾಮ, ಚೌಡಪ್ಪ, ಬಸವನಗೌಡ ಪಾಟೀಲ್, ಗುತ್ತೂರಿನ ಗರಡಿ ಮನೆ ಬಸಣ್ಣ, ಸುರೇಶ್ ಕುಣೇಬೆಳಕೆರೆ, ಜಿ.ಮಂಜುನಾಥ್, ಬಿ.ಎಮ್.ರುದ್ರಯ್ಯ, ಮೂಲಿಮನಿ ಕರಿಬಸಪ್ಪ, ಅಜ್ಜಪ್ಪರ ಬಸಪ್ಪ ರೆಡ್ಡಿ, ಬಿರ್ಲಾ ಚನ್ನಬಸಪ್ಪ, ಎ.ಕೆ. ಬಸವರಾಜ್, ಎ.ಕೆ.ಗೊಳಪ್ಪ, ಎ.ಕೆ.ಮಲ್ಲಪ್ಪ, ಎ.ಕೆ.ರಮೇಶ್, ಎ.ಕೆ.ಮಹಾಂತೇಶ್, ಎ.ಕೆ. ರವಿ, ಎ.ಕೆ.ನರಸಿಂಹಪ್ಪ, ಮಡಿವಾಳರ್ ನಿಂಗಪ್ಪ, ಮಡಿವಾಳರ್ ಕೆಂಚಪ್ಪ ಇತರರಿದ್ದರು.