Advertisement

ಟೋಕಿಯೋದಲ್ಲಿ 2025ರ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌

11:50 PM Jul 15, 2022 | Team Udayavani |

ಟೋಕಿಯೊ: 2025ರ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿ ಯನ್‌ಶಿಪ್‌ ಆತಿಥ್ಯ ಜಪಾನ್‌ ರಾಜಧಾನಿ ಟೋಕಿಯೊ ಪಾಲಾಗಿದೆ.

Advertisement

ಯೂಜೀನ್‌ ಕ್ರೀಡಾಕೂಟ ಆರಂಭವಾಗುವ ಹೊತ್ತಿನಲ್ಲೇ “ವರ್ಲ್ಡ್ ಆ್ಯತ್ಲೆಟಿಕ್ಸ್‌’ (ಡಬ್ಲ್ಯುಎ) ಇದನ್ನು ಪ್ರಕಟಿಸಿದೆ.

ಇದರೊಂದಿಗೆ ಕಳೆದ ವರ್ಷದ ಒಲಿಂಪಿಕ್ಸ್‌ ತಾಣವಾದ ಟೋಕಿಯೊ ವಿಶ್ವ ಆ್ಯತ್ಲೆಟಿಕ್ಸ್‌ ಕ್ರೀಡಾಕೂಟದ ಮೂಲಕ ಮತ್ತೂಮ್ಮೆ ಜಗತ್ತಿನ ಗಮನ ಸೆಳೆಯಲಿದೆ.

2025ರಲ್ಲಿ “ಜಪಾನೀಸ್‌ ಅಸೋಸಿಯೇಶನ್‌ ಆಫ್ ಆ್ಯತ್ಲೆಟಿಕ್ಸ್‌ ಫೆಡರೇಶನ್‌’ (ಜೆಎಎಎಫ್) ಶತಮಾನೋತ್ಸವ ಸಂಭ್ರಮವನ್ನೂ ಆಚರಿಸಲಿದ್ದು, ಇದಕ್ಕೆ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಆತಿಥ್ಯ ನೂತನ ಮೆರುಗು ನೀಡಲಿದೆ. ಈ ಕ್ರೀಡಾಕೂಟ 1991ರಲ್ಲಿಯೂ ಟೋಕಿಯೊದಲ್ಲಿ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next