Advertisement

ಟೋಕಿಯೊ ಪ್ಯಾರಾಲಂಪಿಕ್ಸ್: ಹೈಜಂಪ್ ನಲ್ಲಿ ಭಾರತದ ತಂಗವೇಲುಗೆ ಬೆಳ್ಳಿ, ಶರದ್ ಕುಮಾರ್ ಗೆ ಕಂಚು

05:35 PM Aug 31, 2021 | Team Udayavani |

ಟೋಕಿಯೊ : ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಒಲಿದಿವೆ, ಪುರುಷರ ಹೈ ಜಂಪ್ ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ ಪದಕ ಗೆದ್ದರೆ , ಶರದ್ ಕುಮಾರ್ ಕಂಚಿನ ಪದಕ ಗೆದ್ದುಕೊಂಡರು.

Advertisement

ಟೋಕಿಯೊದಲ್ಲಿ ಮಂಗಳವಾರ ನಡೆದ ಪುರುಷರ ಹೈಜಂಪ್ ಟಿ 63 ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು ಮತ್ತು ಶರದ್ ಕುಮಾರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದರಿಂದ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ನಂಬಲಾಗದ ಪದಕದ ಭರಾಟೆ ಮುಂದುವರೆಯಿತು.

ಈ ಪ್ಯಾರಾಲಂಪಿಕ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ ಈಗ 10 ಕ್ಕೆ ತಲುಪಿದೆ. ಎರಡು ಚಿನ್ನ, ಐದು ಬೆಳ್ಳಿ ಮತ್ತು ಮೂರು ಕಂಚು ಗೆದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next