Advertisement

ಪ್ಯಾರಾಲಿಂಪಿಕ್ಸ್‌|ಭಾರತಕ್ಕೆ ಮತ್ತೊಂದು ಪದಕ|ಹೈ ಜಂಪ್‌ನಲ್ಲಿ ಬೆಳ್ಳಿ ಗೆದ್ದ ನಿಶಾದ್‌

06:42 PM Aug 29, 2021 | Team Udayavani |

ನವದೆಹಲಿ: ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದೆ. ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾರತದ ನಿಶಾದ್‌ ಕುಮಾರ್‌ ಅವರು ಬೆಳ್ಳಿ ಪದಕ ಗೆದಿದ್ದಾರೆ.

Advertisement

2.06 ಮೀಟರ್ ಗಳಷ್ಟು ಜಿಗಿಯುವ ಮೂಲಕ ನಿಶಾದ್ ಕುಮಾರ್ ತಮ್ಮದೇ ಏಷ್ಯನ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇದೇ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಭಾರತದ ಮತ್ತೋರ್ವ ಕ್ರೀಡಾಪಟು ರಾಮ್ ಪಾಲ್ 5 ನೇ ಸ್ಥಾನ ಪಡೆದಿದ್ದು, 1.94 ಮೀಟರ್ ಜಿಗಿದಿದ್ದಾರೆ. ಅಮೆರಿಕಾದ ಡಲ್ಲಾಸ್ ವೈಸ್ (ಟಿ46) 2.06 ಮೀಟರ್ (ನಿಶಾದ್ ಕುಮಾರ್ ಅವರ ಸಮ) ಜಿಗಿದಿದ್ದು ರಜತ ಪದಕವನ್ನು ಭಾರತೀಯ ಕ್ರೀಡಾಪಟುವಿನೊಂದಿಗೆ ಹಂಚಿಕೊಂಡಿದ್ದಾರೆ.

ಈ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಅಮೆರಿಕದ ಮತ್ತೋರ್ವ ಕ್ರೀಡಾಪಟು ರೋಡೆರಿಕ್ ಟೌನ್ಸೆಂಡ್ 2.15 ಮೀಟರ್ ಜಿಗಿದಿದ್ದು ದಾಖಲೆ ನಿರ್ಮಿಸಿದ್ದಾರೆ. ಫೈನಲ್ ನಲ್ಲಿ ನಿಶಾದ್ ಕುಮಾರ್ 1.89 ರಿಂದ ಜಿಗಿತ ಪ್ರಾರಂಭಿಸಿ ಹಾದಿ ಸುಗಮಗೊಳಿಸಿಕೊಂಡರು. ರಾಮ್ ಪಾಲ್  ಪ್ರಾರಂಭದಲ್ಲಿ 1.84 ಮೀಟರ್ ಜಿಗಿಯುವ ಮೂಲಕ ಉತ್ತಮ ಆರಂಭ ಕಂಡುಕೊಂಡರು.

ಹಿಮಾಚಲ ಪ್ರದೇಶದ ಊನಾ ಜಿಲ್ಲೆಯವರಾದ 20 ವರ್ಷದ ನಿಶಾದ್‌, 2009ರಿಂದಲೂ ಪ್ಯಾರಾ ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಂಟನೇ ವಯಸ್ಸಿನಲ್ಲಿದ್ದಾಗ ಅಪಘಾತಕ್ಕೀಡಾಗಿ ಬಲಗೈ ಕಳೆದುಕೊಂಡಿದ್ದರು. ದುಬೈನಲ್ಲಿ 2019ರಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಪ್ರದರ್ಶನದೊಂದಿಗೆ ಕಂಚಿನ ಪದಕ ಗೆದ್ದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next