Advertisement

ಟೋಕಿಯೊ ಒಲಿಂಪಿಕ್ಸ್‌ : ಹದಿನಾರರ ಸುತ್ತಿಗೆ ಏರಿದ ಬಾಕ್ಸಿಂಗ್‌ ತಾರೆ ಮೇರಿ ಕೋಮ್‌

11:59 PM Jul 25, 2021 | Team Udayavani |

ಟೋಕಿಯೊ : ಬಾಕ್ಸಿಂಗ್‌ ತಾರೆ ಎಂ.ಸಿ. ಮೇರಿ ಕೋಮ್‌ ಟೋಕಿಯೊ ಒಲಿಂಪಿಕ್ಸ್‌ನ 51 ಕೆಜಿ ಫ್ಲೈವೇಟ್‌ ರೌಂಡ್‌ನ‌ಲ್ಲಿ ಜಯ ಸಾಧಿಸಿ ಪ್ರಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಮೇರಿ ಡೊಮಿನಿಕ್‌ ಗಣರಾಜ್ಯದ ಮಿಗುಲಿನಾ ಹರ್ನಾಂಡೆಜ್‌ ಗಾರ್ಸಿಯಾ ಅವರನ್ನು 4-1 ಅಂತರದಿಂದ ಸೋಲಿಸಿದರು.

Advertisement

ಜು. 29ರಂದು ನಡೆಯಲಿರುವ ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಮೇರಿ ಕೋಮ್‌ 3ನೇ ಶ್ರೇಯಾಂಕದ, ರಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಕೊಲಂಬಿಯಾದ ಬಾಕ್ಸರ್‌ ಇನ್‌ಗ್ಲಿಟ್ ವಲೆನ್ಸಿಯಾ ಅವರನ್ನು ಎದುರಿಸಲಿದ್ದಾರೆ.

4 ಮಕ್ಕಳ ತಾಯಿಯಾಗಿರುವ ಮೇರಿ ಕೋಮ್‌ ರವಿವಾರ ತನಗಿಂತ 15 ವರ್ಷ ಕಿರಿಯಳಾದ, ಪಾನ್‌ ಅಮೆರಿಕನ್‌ ಗೇಮ್ಸ್‌ ಕಂಚಿನ ಪದಕ ವಿಜೇತೆ ಗಾರ್ಸಿಯಾ ವಿರುದ್ಧ ಅನುಭವಕ್ಕೆ ತಕ್ಕ ಹೋರಾಟ ನೀಡಿದರು.

ಇದನ್ನೂ ಓದಿ :ಟಿ20 ಸರಣಿ : ತಮ್ಮದೇ ನೆಲದಲ್ಲಿ ಮತ್ತೆ ಮುಗ್ಗರಿಸಿದ ಲಂಕಾ ಸಿಂಹಗಳು : ಭಾರತಕ್ಕೆ 38 ರನ್‌ ಜಯ

“ನನ್ನ ಬಳಿ ಬಹಳಷ್ಟು ಪದಕಗಳಿವೆ. ಅವುಗಳನ್ನು ಎಣಿಸಲು ಸಾಧ್ಯವಿಲ್ಲ. ಆದರೆ ನನ್ನ ಗುರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು. ಮುಂದಿನ ಪಂದ್ಯಗಳಲ್ಲಿ ಇನ್ನೂ ಉತ್ತಮ ಪ್ರದರ್ಶನ ತೋರಿದರೆ ಚಿನ್ನಕ್ಕೆ ಪಂಚ್‌ ನೀಡಬಲ್ಲೆ. ಆ ಸಾಮರ್ಥ್ಯ ನನ್ನಲ್ಲಿದೆ’ ಎಂದು ಮೇರಿ ಕೋಮ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next