Advertisement
ರ್‍ಯಾಂಕಿಂಗ್ ಸುತ್ತಿನಲ್ಲಿ ಕೊರಿಯನ್ನರೇ ಪ್ರಾಬಲ್ಯ ಮೆರೆದರು. ಮೊದಲ 3 ಸ್ಥಾನವನ್ನು ಇವರೇ ಆಕ್ರಮಿಸಿಕೊಂಡರು. ಮೊದಲ ಒಲಿಂಪಿಕ್ಸ್ ಕಾಣುತ್ತಿರುವ 20 ವರ್ಷದ ಆ್ಯನ್ ಸಾನ್ 680 ಅಂಕಗಳೊಂದಿಗೆ ಅಗ್ರಸ್ಥಾನಿಯಾದರು. ವಿಶ್ವದ ನಂ.1 ಖ್ಯಾತಿಯ ದೀಪಿಕಾ 663 ಅಂಕ ಸಂಪಾದಿಸಿದರು. ಅರ್ಧ ಹಾದಿ ಕ್ರಮಿಸುವಾಗ (36 ಬಾಣ) ದೀಪಿಕಾ 334 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದರು.
Related Articles
Advertisement
ಪುರುಷರಿಗೂ 9ನೇ ಸ್ಥಾನಪುರುಷರ ಟೀಮ್ ಹಾಗೂ ಮಿಕ್ಸೆಡ್ ರ್‍ಯಾಂಕಿಂಗ್ ಸುತ್ತಿನಲ್ಲಿ ಭಾರತ 9ನೇ ಸ್ಥಾನಿಯಾಗಿದೆ. ಅಚ್ಚರಿಯೆಂದರೆ, ಮೊದಲ ಒಲಿಂಪಿಕ್ಸ್ ಕಾಣುತ್ತಿರುವ ಪ್ರವೀಣ್ ಜಾಧವ್ ಅನುಭವಿ ಅತನು ದಾಸ್ ಮತ್ತು ತರುಣ್‌ದೀಪ್ ರಾಯ್ ಅವರನ್ನು ಮೀರಿ ನಿಂತದ್ದು. ಆದರೆ ಪ್ರಧಾನ ಸುತ್ತಿನಲ್ಲಿ ಎರಡೂ ವಿಭಾಗಗಳಿಗೆ ಕಠಿನ ಸವಾಲು ಎದುರಾಗದೆ. ಮಿಶ್ರ ತಂಡಕ್ಕೆ 8ನೇ ರ್‍ಯಾಂಕಿಂಗ್‌ನ ಚೈನೀಸ್ ತೈಪೆ ಎದುರಾಗಿದೆ. ಬಳಿಕ ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಕೊರಿಯಾ ಕಾದು ಕುಳಿತಿದೆ. ಪುರುಷರ ತಂಡಕ್ಕೆ ಆರಂಭದಲ್ಲಿ ಕಜಾಕ್‌ಸ್ಥಾನ ಎದುರಾಗಲಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಕೊರಿಯಾ ಸಿಗಲಿದೆ. ಕೊರಿಯಾಕ್ಕೆ ಮೊದಲ ಸುತ್ತಿನ ಬೈ ಸಿಕ್ಕಿದೆ. ವೈಯಕ್ತಿಕ ವಿಭಾಗದಲ್ಲಿ ಮೂರೂ ಬಿಲ್ಗಾರರು 30ರ ಆಚೆಯ ಸ್ಥಾನ ಪಡೆದು ನಿರಾಸೆ ಮೂಡಿಸಿದರು. ಪ್ರವೀಣ್ ಜಾಧವ್ 31, ಅತನು ದಾಸ್ 35 ಹಾಗೂ ತರುಣ್‌ದೀಪ್ ರಾಯ್ 37ನೇ ಸ್ಥಾನ ಪಡೆದರು. ಈ ಮೂವರು ಕ್ರಮವಾಗಿ 656, 653 ಹಾಗೂ 652 ಅಂಕ ಸಂಪಾದಿಸಿದರು. ಮಿಕ್ಸೆಡ್‌ನಲ್ಲಿ ದೀಪಿಕಾ-ಪ್ರವೀಣ್
ಪುರುಷರ ವಿಭಾಗದಲ್ಲಿ 31ನೇ ಸ್ಥಾನ ಪಡೆದ ಪ್ರವೀಣ್ ಜಾಧವ್ ಮಿಕ್ಸೆಡ್ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ ಜತೆ ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಅತನು ದಾಸ್ ಈ ವಿಭಾಗದಲ್ಲಿ ದೀಪಿಕಾ ಜೋಡಿ ಎಂದು ನಿರ್ಧರಿಸಲಾಗಿತ್ತಾದರೂ ಶುಕ್ರವಾರದ ಸ್ಪರ್ಧೆಯಲ್ಲಿ ಪ್ರವೀಣ್‌ಗಿಂತ ಕೆಳಸ್ಥಾನ ಸಂಪಾದಿಸಿದ ಕಾರಣ ಈ ಅವಕಾಶದಿಂದ ವಂಚಿತರಾದರು.