ಟೋಕಿಯೊ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಗುರುವಾರ ಮುಂಜಾನೆ ಹಲವು ಶುಭ ಸುದ್ದಿ ನೀಡಿದೆ. ಹಾಕಿಯಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡವನ್ನು ಸೋಲಿಸಿ ಭಾರತ ತಂಡ ಕ್ವಾರ್ಟರ್ ಫೈನಲ್ ತಲುಪಿದೆ.
2016ರ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ಈ ಪಂದ್ಯದ ಫೇವರೇಟ್ ಆಗಿತ್ತು. ಆದರೆ ಹಾಲಿ ಚಾಂಪಿಯನ್ನರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಭಾರತದ ಯುವಕರು 3-1 ಅಂತರದಿಂದ ಗೆಲುವು ಸಾಧಿಸಿದರು.
ಮೊದಲೆರಡು ಕ್ವಾರ್ಟರ್ ಗೋಲುಗಳಿಲ್ಲದೆ ಸಾಗಿತು. ಆದರೆ 43ನೇ ನಿಮಿಷದಲ್ಲಿ ವರುಣ್ ಕುಮಾರ್ ಗೋಲು ಬಾರಿಸಿದರೆ, 58ನೇ ನಿಮಿಷದಲ್ಲಿ ವಿವೇಕ್ ಪ್ರಸಾದ್ ಮತ್ತು 59ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಸಿಂಗ್ ಗೋಲು ಬಾರಿಸಿ ಭಾರತದ ಮುನ್ನಡೆಯನ್ನು ಹೆಚ್ಚಿಸಿದರು.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು
ಅರ್ಜೆಂಟೀನ್ 48ನೇ ನಿಮಿಷದಲ್ಲಿ ತನ್ನ ಏಕೈಕ ಗೋಲು ಗಳಿಸಿತು. ಈ ಗೆಲುವಿನ ಬಳಿಕ ಭಾರತ ತಂಡ ‘ಎ’ ಪೂಲ್ ನಲ್ಲಿ ದ್ವಿತೀಯ ಸ್ಥಾನಕ್ಕೇರಿತು. ಭಾರತ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದೆ. ಭಾರತ ತಂಡ ಈ ಗುಂಪಿನ ತನ್ನ ಅಂತಿಮ ಪಂದ್ಯವನ್ನು ಶುಕ್ರವಾರ ಜಪಾನ್ ವಿರುದ್ಧ ಆಡಲಿದೆ.