Advertisement
ಇತ್ತೀಚೆಗೆ ಮೊರಿ ಜಪಾನ್ ಒಲಿಂಪಿಕ್ಸ್ ಸಮಿತಿ ಸಭೆಯೊಂದರಲ್ಲಿ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. “ಮಹಿಳೆಯರು ಬಲವಾದ ಜಗಳಗಂಟಿ ಸ್ವಭಾವ ಹೊಂದಿರುತ್ತಾರೆ. ಒಬ್ಬರು ಮಾತನಾಡಲಿಕ್ಕೆ ಕೈಯೆತ್ತಿದರೆ, ಉಳಿದವರಿಗೆ ತಾವೂ ಮಾತನಾಡಬೇಕು ಎಂದೆನಿಸುತ್ತದೆ. ಪ್ರತಿಯೊಬ್ಬರೂ ಏನಾದರೂ ಹೇಳಿಯೇ ಮುಗಿಸುತ್ತಾರೆ. ಜಪಾನ್ ಒಲಿಂಪಿಕ್ಸ್ ಸಮಿತಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸಬೇಕೆಂದು ಕೆಲವರು ಹೇಳಿದ್ದನ್ನು ಕೇಳಿದೆ. ಹಾಗೆ ಮಾಡುವುದಾದರೆ ಮಾತನಾಡುವ ಸಮಯಕ್ಕೆ ಒಂದು ಮಿತಿ ಹಾಕಬೇಕಾಗುತ್ತದೆ. ಇಲ್ಲವಾದರೆ ಸಭೆ ಮುಗಿಯುವ ಸಾಧ್ಯತೆಯೇ ಇಲ್ಲ…’ ಎಂದಿದ್ದರು.
ಮೊರಿ ಅವರ ಈ ಹೇಳಿಕೆ ತೀವ್ರ ವಿವಾದದ ಸ್ವರೂಪ ಪಡೆಯಿತು. ಅವರು ಲಿಂಗ ತಾರತಮ್ಯ ಆರೋಪವನ್ನೂ ಹೊರಬೇಕಾಯಿತು. ಈ ಕಾರಣಕ್ಕಾಗಿ ಒಲಿಂಪಿಕ್ಸ್ ಸಂಘಟನಾ ಸಮಿತಿಗೆ ಮೊರಿ ರಾಜೀನಾಮೆ ನೀಡುವಂತೆ ಒತ್ತಾಯ ಕೇಳಿಬಂದಿತ್ತು. ಕೊನೆಗೆ ಮೊರಿ ಕ್ಷಮೆಯಾಚಿಸುವುದರೊಂದಿಗೆ ವಿವಾದ ಇತ್ಯರ್ಥವಾಗಿತ್ತು. ಗುರುವಾರದ ಬೆಳವಣಿಗೆಯೊಂದಲ್ಲಿ ಯೊಶಿತೊ ಮೊರಿ ತಮ್ಮ ಒಲಿಂಪಿಕ್ಸ್ ಸಂಘಟನಾ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇವರ ಸ್ಥಾನಕ್ಕೆ ಜಪಾನ್ ಫುಟ್‌ಬಾಲ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ, ಒಲಿಂಪಿಕ್ ವಿಲೇಜ್‌ನ ಮೇಯರ್ ಸಬುರೊ ಕವಾಬುಚಿ ಅವರನ್ನು ನೇಮಿಸಲಾಗಿದೆ.