Advertisement

ಆ್ಯತ್ಲೆಟಿಕ್ಸ್‌ನಲ್ಲಿ ಅವಿನಾಶ್‌ ಸಬ್ಲೆ ರಾಷ್ಟ್ರೀಯ ದಾಖಲೆ

10:54 PM Jul 30, 2021 | Team Udayavani |

ಟೋಕಿಯೊ: ಶುಕ್ರವಾರ ಮೊದಲ್ಗೊಂಡ ಒಲಿಂಪಿಕ್ಸ್‌ ಆ್ಯತ್ಲೆಟಿಕ್ಸ್‌ನಲ್ಲಿ ಅವಿನಾಶ್‌ ಸಬ್ಲೆ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದನ್ನು ಹೊರತುಪಡಿಸಿದರೆ ಉಳಿದ ಭಾರತೀಯರೆಲ್ಲ ಸೋಲಿನ ಸುಳಿಗೆ ಸಿಲುಕಿದರು.

Advertisement

ಸಬ್ಲೆ 3 ಸಾವಿರ ಮೀ. ಸ್ಟೀಪಲ್‌ಚೇಸ್‌ ಹೀಟ್ಸ್‌ ನಲ್ಲಿ 8 ನಿಮಿಷ, 18.12 ಸೆಕೆಂಡ್ಸ್‌ಗಳ ಸಮಯ ದಾಖಲಿಸಿದರು. ಹಿಂದಿನ 8:20.20 ಸಮಯದ ತಮ್ಮ ರಾಷ್ಟ್ರೀಯ ದಾಖಲೆಯನ್ನು ತಿದ್ದಿ ಬರೆದರು. ಆದರೆ ಹೀಟ್ಸ್‌ನಲ್ಲಿ 7 ಸ್ಥಾನ ಪಡೆದು ಫೈನಲ್‌ ರೇಸ್‌ನಿಂದ ಹೊರಬಿದ್ದರು.

ದ್ಯುತಿ ಚಂದ್‌ 100 ಮೀ. ಹೀಟ್ಸ್‌ನ 54 ಸ್ಪರ್ಧಿಗಳಲ್ಲಿ 45ರಷ್ಟು ಕೆಳಸ್ಥಾನ ಪಡೆದರು.
36 ಸ್ಪರ್ಧಿಗಳ 400 ಮೀ. ಹರ್ಡಲ್ಸ್‌ನಲ್ಲಿ ಎಂ.ಪಿ. ಜಬೀರ್‌ 33ನೇ ಸ್ಥಾನಿಯಾದರು. ಮುಹಮ್ಮದ್‌ ಅನಾಸ್‌, ರೇವತಿ ವೀರಮಣಿ, ಶುಭಾ ವೆಂಕಟೇಶನ್‌ ಹಾಗೂ ರಾಜೀವ್‌ ಅರೋಕಿಯಾ ಅವರನ್ನೊಳಗೊಂಡ 4×400 ಮಿಕ್ಸೆಡ್‌ ರಿಲೇ ತಂಡ 13ನೇ ಸ್ಥಾನಕ್ಕೆ ಇಳಿಯಿತು.

ಇದನ್ನೂ ಓದಿ :ಶೂಟಿಂಗ್‌: ಮನು ಭಾಕರ್‌, ರಾಹಿ ಸರ್ನೋಬತ್‌ ಹೋರಾಟ ಅಂತ್ಯ

Advertisement

Udayavani is now on Telegram. Click here to join our channel and stay updated with the latest news.

Next