Advertisement

ಭಾರತೀಯರಿಗೆ ಐತಿಹಾಸಿಕ ಭರವಸೆ

12:19 AM Jul 23, 2021 | Team Udayavani |

ಟೋಕಿಯೊ: ಸತತ ವಿವಾದ, ಪ್ರತಿರೋಧಗಳು, ಕೊರೊನಾ ಎದುರಿಟ್ಟ ಭಾರೀ ಸವಾಲು… ಎಲ್ಲವಕ್ಕೂ ಟೋಕಿಯೊ ಒಲಿಂಪಿಕ್ಸ್‌ ಸ್ಥಳೀಯ ಸಂಘ ಟಕರು ಹಾಗೂ ಅಂತಾರಾಷ್ಟ್ರೀಯ ಒಲಿಂ ಪಿಕ್ಸ್‌ ಸಮಿತಿ (ಐಒಸಿ) ಎದೆಯೊಡ್ಡಿ ನಿಂತಿವೆ. ಎಲ್ಲ ಅಡ್ಡಿ ಗಳನ್ನು ಮೀರಿ ಒಲಿಂಪಿಕ್ಸ್‌ ಶುಕ್ರ ವಾರ ಆರಂಭವಾಗ ಲಿದೆ. ಇಂಥ ಅಸಾ ಧಾರಣ ಸನ್ನಿವೇಶ ದಲ್ಲಿ 127 ಆ್ಯತ್ಲೀಟ್‌ಗಳಿರುವ ಭಾರತದ ತಂಡವೂ ಸ್ಪರ್ಧಿಸಲಿದೆ. ಇದು ಇತಿಹಾಸ ದಲ್ಲೇ ಒಲಿಂಪಿಕ್ಸ್‌ಗೆ ಭಾರತ ಕಳುಹಿಸಿದ ಬೃಹತ್‌ ತಂಡ. ಹಾಗೆಯೇ ಇತಿಹಾಸ ದಲ್ಲೇ ಗರಿಷ್ಠ ಪದಕ ಗೆಲ್ಲಬಲ್ಲೆವು ಎಂದು ಭಾರತೀಯರು ಭರವಸೆಯಿಂದ ಹೇಳಬಹುದಾದ ಕೂಟವೂ ಹೌದು. ನಿರೀಕ್ಷೆಗಳ ಭಾರವನ್ನು ಹೊತ್ತಿರುವ ಭಾರತೀಯರೇ, ಗೆದ್ದುಬನ್ನಿ… ಇದು ಭಾರ ತೀಯರೆಲ್ಲರ ಶುಭ ಹಾರೈಕೆ.

Advertisement

ಯಾರಿಂದೆಲ್ಲ ಪದಕಗಳ ನಿರೀಕ್ಷೆ ? : ಕುಸ್ತಿಪಟುಗಳಾದ ವಿನೇಶ್‌ ಫೊಗಾಟ್‌, ಭಜರಂಗ್‌ ಪುನಿಯ ಪದಕ ಗೆಲ್ಲುತ್ತಾರೆಂಬ ಭರವಸೆಯಿದೆ. ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧು ಚಿನ್ನವನ್ನೇ ಗೆದ್ದು ಇತಿಹಾಸ ನಿರ್ಮಿಸುತ್ತಾರೆಂದು ಭಾವಿಸ ಲಾಗಿದೆ. ಶೂಟಿಂಗ್‌ನಲ್ಲಿ ಸೌರಭ್‌ ಚೌಧರಿ, ಮನು ಭಾಕರ್‌, ಅಭಿಷೇಕ್‌ ವರ್ಮ, ಯಶಸ್ವಿನಿ ದೇಸ್ವಾಲ್‌ ಮೇಲೂ ಚಿನ್ನದಂತಹ ನಂಬಿಕೆಯಿದೆ. ಟಿಟಿಯಲ್ಲಿ ಮಣಿಕಾ ಬಾತ್ರಾ ಎಂಬ ಆಶಾಕಿರಣವಿದೆ. ಹಾಕಿಯಲ್ಲಿ ಕಂಚು ಸಿಗಬಹುದೆಂಬ ಲೆಕ್ಕಾಚಾರವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಾಕ್ಸರ್‌ ಅಮಿತ್‌ ಪಂಘಲ್‌. ವಿಶ್ವದ ಯಾವುದೇ ಎದುರಾಳಿಯನ್ನೂ ಗೆಲ್ಲಬಲ್ಲ ಛಾತಿ ಇವರಿಗಿದೆ.

ಉದ್ಘಾಟನೆಯ ವಿಶೇಷ :

1.ಶಾಂತಿ, ಸಹಬಾಳ್ವೆ, ಪುನಾರಚನೆ, ಭವಿಷ್ಯವನ್ನು ಪ್ರತಿಬಿಂಬಿಸುವ ಕಾರ್ಯಕ್ರಮ.

  1. ಜಪಾನಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಲಾತ್ಮಕ ಕಾರ್ಯಕ್ರಮಗಳು.
  2. ಆತಿಥೇಯ ರಾಷ್ಟ್ರದ ಮುಖ್ಯಸ್ಥರ ಆಗಮನ. ಜಪಾನ್‌ ರಾಷ್ಟ್ರಗೀತೆ, ಆ್ಯತ್ಲೀಟ್‌ಗಳ ಪರೇಡ್‌, ಶಾಂತಿಸೂಚಕವಾಗಿ ಪಾರಿವಾಳ ಗಳನ್ನು ಹಾರಿಬಿಡಲಾಗುತ್ತದೆ, ಕ್ರೀಡಾಕೂಟ ಉದ್ಘಾಟನೆಯ ಘೋಷಣೆ, ಒಲಿಂಪಿಕ್ಸ್‌ ಧ್ವಜಾರೋಹಣ, ಧ್ಯೇಯಗೀತೆ, ಪ್ರಮಾಣ ವಚನ, ಕಲಾತ್ಮಕ  ಕಾರ್ಯಕ್ರಮಗಳು.

 ಪಾಲ್ಗೊಳ್ಳುವ  ಆ್ಯತ್ಲೀಟ್‌ಗಳು: 11,238+

Advertisement

ಭಾಗವಹಿಸುವ ದೇಶಗಳ ಸಂಖ್ಯೆ.  : 204

33 ಕ್ರೀಡೆ, ಇದರ ಉಪವಿಭಾಗ ಸಹಿತ ಒಟ್ಟು  339 ಸ್ಪರ್ಧೆಗಳು: 339

Advertisement

Udayavani is now on Telegram. Click here to join our channel and stay updated with the latest news.

Next