Advertisement
ಈ ಐವರ ಪೈಕಿ ಓರ್ವ ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ಸಂಬಂಧಿಸಿದ ವ್ಯಕ್ತಿ ಜಪಾನ್‌ನ ಚಿಬಾ ನಗರಕ್ಕೆ ಸೇರಿದವರಾಗಿದ್ದಾರೆ. ಗುತ್ತಿಗೆದಾರ ಸೈತಾಮಾದವರು. ಮತ್ತೋರ್ವ ಪತ್ರಕರ್ತ. ಕೊಕೊ ಗಾಫ್ಗೆ ಕೊರೊನಾ ಅಮೆರಿಕದ ಯುವ ಟೆನಿಸ್ ಆಟಗಾರ್ತಿ ಕೊಕೊ ಗಾಫ್ ಕೊರೊನಾ ಸೋಂಕಿನಿಂದಾಗಿ ಒಲಿಂಪಿಕ್ಸ್ ನಿಂದ ದೂರ ಉಳಿಯಲಿದ್ದಾರೆ.
Related Articles
ಅಮೆರಿಕ ತಂಡದ ಮಹಿಳಾ ಜಿಮ್ನಾಸ್ಟ್ ಒಬ್ಬರಿಗೆ ಒಲಿಂಪಿಕ್ ತರಬೇತಿ ಶಿಬಿರದಲ್ಲಿ ಕರೋನ ವೈರಸ್ ಸೊಂಕು ತಗುಲಿದೆ ಮತ್ತು ತಂಡದ ಇನ್ನೊಬ್ಬ ಸದಸ್ಯ ರನ್ನು ಐಸೋಲೇಶನ್‌ನಲ್ಲಿ ಇರಿಸಲಾಗಿದೆ ಎಂದು ಜಪಾನಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಬೀಚ್ ವಾಲಿಬಾಲ್‌ಗೂ ಆತಂಕಒಲಿಂಪಿಕ್ಸ್ ಬೀಚ್ ವಾಲಿಬಾಲ್‌ನಲ್ಲಿ ಸ್ಪರ್ಧಿಸಲಿ ರುವ ಜೆಕ್ ತಂಡಕ್ಕೆ ಕೊರೊನಾ ಆತಂಕ ಎದುರಾಗಿದೆ. ಆಂಡ್ರೆಜ್ ಪೆರುಸಿಕ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕ್ರೀಡಾಗ್ರಾಮಕ್ಕೆ ಬಂದ ಬಳಿಕ ನಡೆಸಲಾದ ಕೋವಿಡ್ ಟೆಸ್ಟ್ ವೇಳೆ ಇವರಲ್ಲಿ ಪಾಸಿಟಿವ್ ಫಲಿತಾಂಶ ಕಂಡುಬಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಗಾಯದಿಂದ ಹಿಂದೆ ಸರಿದ ಇಟಲಿಯ ಮ್ಯಾಟೊ ಬೆರೆಟಿನಿ
ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದ ಇಟಲಿಯ ಮ್ಯಾಟೊ ಬೆರೆಟಿನಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿ¨ªಾರೆ. ಮಾಂಸಖಂಡದಲ್ಲಿ ಸೆಳೆತ ಕಾಣಿಸಿಕೊಂಡಿರುವುದರಿಂದ ಅವರು ಟೋಕಿಯೋಗೆ ಹೋಗುವುದಿಲ್ಲ ಎಂದು ಇಟಾಲಿಯನ್ ಒಲಿಂಪಿಕ್ಸ್ ಸಮಿತಿ ತಿಳಿಸಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿರುವ ಬೆರೆಟಿನಿ ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದ ಇಟಲಿಯ ಮೊದಲ ಆಟಗಾರನೆನಿಸಿದ್ದರು. ಅಲ್ಲಿ ನೊವಾಕ್ ಜೊಕೋವಿಕ್ ಎದುರು ಸೋತಿದ್ದರು. ಭಾರತೀಯರ ಅಭ್ಯಾಸ ಆರಂಭ
ಒಲಿಂಪಿಕ್ಸ್ ಇತಿಹಾಸದಲ್ಲೇ ಗರಿಷ್ಠ ಪದಕ ಸಾಧನೆಯ ಗುರಿಯನ್ನು ಹೊತ್ತು ಟೋಕಿಯೊ ತಲುಪಿದ ಭಾರತದ ಮೊದಲ ಕ್ರೀಡಾ ತಂಡ ಸೋಮವಾರ ಅಭ್ಯಾಸ ಆರಂಭಿಸಿದೆ. ಆರ್ಚರಿಗಳಾದ ಅತನು ದಾಸ್, ದೀಪಿಕಾ ಕುಮಾರಿ, ಟೆಬಲ್ ಟೆನಿಸಗರಾದ ಜಿ. ಸಥಿಯನ್, ಶರತ್ ಕಮಲ್, ಶಟ್ಲರ್ ಪಿ.ವಿ. ಸಿಂಧು, ಸಾಯಿ ಪ್ರಣೀತ್, ಜಿಮ್ನಾಸ್ಟ್ ಪ್ರಣತಿ ನಾಯಕ್ ಮೊದಲಾದವರು ಮೊದಲ ಸುತ್ತಿನ ಅಭ್ಯಾಸ ನಡೆಸಿದರು. ಒಲಿಂಪಿಕ್ಸ್ ಸುರಕ್ಷಿತ: ತಜ್ಞರ ಅಭಿಪ್ರಾಯ
ಕೋವಿಡ್ ಪ್ರಕರಣಗಳು ನಿತ್ಯವೂ ವರದಿಯಾಗುತ್ತಿದ್ದರೂ ಒಲಿಂಪಿಕ್ಸ್ ನಡೆಯುವ ಸ್ಥಳ ಸುರಕ್ಷಿತ ಎಂದು ಆರೋಗ್ಯ ತಜ್ಞ ಬ್ರಯಾನ್ ಮೆಕ್‌ಲೊಸ್ಕಿ ಅಭಿಪ್ರಾಯಪಟ್ಟಿದ್ದಾರೆ. “ಸದ್ಯ ವರದಿಯಾಗುತ್ತಿರುವ ಪ್ರಕರಣಗಳು ನಿರೀಕ್ಷಿತ. ಪ್ರಕರಣಗಳನ್ನು ಆದಷ್ಟು ತಹಬದಿಗೆ ತರುವುದಕ್ಕಾಗಿ ನಿತ್ಯವೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಸೋಂಕು ಬೇಗನೆ ಪತ್ತೆಯಾಗುತ್ತಿದ್ದು ಇತರ ಕ್ರೀಡಾಪಟುಗಳಿಂದ ಅವರನ್ನು ದೂರ ಇರಿಸಲು ಸಾಧ್ಯವಾಗುತ್ತಿದೆ’ ಎಂದು ಮೆಕ್‌ಲೊಸ್ಕಿ ಹೇಳಿದ್ದಾರೆ.