Advertisement

ಟೋಕಿಯೊ: ಒಲಿಂಪಿಕ್‌ ಕ್ರೀಡಾಂಗಣ ಅನಾವರಣ

10:00 AM Dec 17, 2019 | sudhir |

ಟೋಕಿಯೊ: ಇನ್ನು 7 ತಿಂಗಳಲ್ಲಿ ಜರಗಲಿರುವ 2020ರ ಟೋಕಿಯೊ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದ, 60 ಸಾವಿರ ಆಸನ ಸಾಮರ್ಥ್ಯದ ನ್ಯೂ ನ್ಯಾಶನಲ್‌ ಒಲಿಂಪಿಕ್‌ ಕ್ರೀಡಾಂಗಣವನ್ನು ರವಿವಾರ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.

Advertisement

1964ರ ಟೋಕಿಯೊ ಒಲಿಂಪಿಕ್ಸ್‌ ಗಾಗಿ ಬಳಸಲಾದ ರಾಷ್ಟ್ರೀಯ ಕ್ರೀಡಾಂಗಣದ ಸ್ಥಳದಲ್ಲಿಯೇ ಈ ಕ್ರೀಡಾಂಗಣವನ್ನು ನಿರ್ಮಿಸ ಲಾಗಿದೆ. ನೆಲ ಮಟ್ಟದಿಂದ ಮೇಲ್ಗಡೆ 5 ಮತ್ತು ಕೆಳಗಡೆ 2 ಅಂತಸ್ತನ್ನು ಒಳಗೊಂಡ ಈ ಕ್ರೀಡಾಂಗಣವನ್ನು ಪ್ರಧಾನಮಂತ್ರಿ ಶಿಂಝೊ ಅಬೆ ಅನಾವರಣಗೊಳಿಸಿದರು. ಇದೊಂದು ಉನ್ನತ ಗುಣಮಟ್ಟದ ಅದ್ಭುತ ವಿನ್ಯಾಸದಿಂದ ನಿರ್ಮಿಸಲಾದ ಕ್ರೀಡಾಂಗಣವಾಗಿದೆ ಎಂದವರು ಬಣ್ಣಿಸಿದ್ದಾರೆ. ಖ್ಯಾತ ಆರ್ಕಿಟೆಕ್ಟ್ ಕೆಂಗೊ ಕುಮ ಈ ಕ್ರೀಡಾಂಗಣವನ್ನು ವಿನ್ಯಾಸಗೊಳಿಸಿದ್ದಾರೆ.

ಈ ಭವ್ಯ ಕ್ರೀಡಾಂಗಣದಲ್ಲಿ 2020ರ ಒಲಿಂಪಿಕ್‌ ಗೇಮ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭವಲ್ಲದೆ ಬಹು ಆಕರ್ಷಣೆಯ ಆ್ಯತ್ಲೆಟಿಕ್‌ ಸ್ಪರ್ಧೆಗಳು ನಡೆಯಲಿವೆ.

ವಿಶೇಷ ಸೌಕರ್ಯ
ಇಲ್ಲಿನ ವಿಪರೀತ ಸೆಕೆಯನ್ನು ತಡೆಗಟ್ಟಲು ಈ ಕ್ರೀಡಾಂಗಣದಲ್ಲಿ ಹಲವು ವಿಶೇಷ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ರಣಬಿಸಿಲಿನಿಂದ ಪ್ರೇಕ್ಷಕರಿಗೆ ಕಿರಿಕಿರಿ ತಪ್ಪಿಸುವ ನಿಟ್ಟಿನಲ್ಲಿ ಎಲ್ಲ ಕಡೆ ನೆರಳು ಬೀಳುವ ಉದ್ದೇಶದಿಂದ ಕ್ರೀಡಾಂಗಣದ ಎಲ್ಲ ಅಂತಸ್ತಿನ ಬದಿಗಳಲ್ಲಿ ಗಿಡಗಳನ್ನು ನೆಡಲಾಗಿದೆ. ಮಂಜು, ಇಬ್ಬನಿ ದೂರ ಮಾಡುವ 8 ಸಾಧನಗಳಿವೆ. 185 ಫ್ಯಾನ್‌ ಮತ್ತು 16 ಹವಾ ನಿಯಂತ್ರಣ ಕೊಠಡಿಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next