Advertisement
ಶೌಚಾಲಯ ನಿರ್ಮಾಣದ ಬಹುದೊಡ್ಡ ಆಂದೋಲನಕ್ಕೆ ದೇಶದ ಪ್ರಧಾನಮಂತ್ರಿ ಮೋದಿ ಅವರು ಚಾಲನೆ ನೀಡಿ ಕೆಲವು ವರ್ಷಗಳೇ ಕಳೆದರೂ, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಇನ್ನೂ ಅನುಷ್ಠಾನ ಆಗಿಲ್ಲ ಎಂಬುವುದಕ್ಕೆ ಇಂಡಿ ತಾಲೂಕಿನ ಕೆಲವೊಂದು ಗ್ರಾಮಗಳೇ ಸಾಕ್ಷಿ ಆಗಿವೆ.
Related Articles
Advertisement
ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛ ಭಾರತ್ ಮಿಷನ್ ಮೂಲಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಎಲ್ಲೆಲ್ಲಿ ಶೌಚಾಲಯ ನಿರ್ಮಾಣ ಆಗಿದೆಯೋ ಅಲ್ಲೆಲ್ಲಿ ಶೌಚಾಲಯದ ಉಪಯೋಗ ಆಗುತ್ತಿಲ್ಲ. ಮಾತ್ರವಲ್ಲದೆ ಗ್ರಾಮೀಣ ಸಮುದಾಯದ ಜನರಲ್ಲಿ ಶೌಚಾಲಯದ ಬಳೆಕೆ ಕುರಿತು ಜಾಗೃತಿ ಮೂಡಿಸುವ ಕೆಲಸ ಕೂಡ ಮಾಡಲಾಗಿಲ್ಲ. ಗ್ರಾಮ ಪಂಚಾಯತ್‌ಗಳಲ್ಲಿ ಸಂಚಾರಿ ವಾಹನದ ಮೂಲಕ, ಕಲಾ ಜಾಥಾ, ದೃಶ್ಯ ಮಾಧ್ಯಮ, ಬೀದಿ ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಿನಿಮಾ ಜಾಹೀರಾತುಗಳ ಮೂಲಕ ಪ್ರದರ್ಶನ ಆಯೋಜಿಸಿದ ಬದಲಾವಣೆ ಮಾತ್ರ ಕಂಡಿಲ್ಲ.
ಗ್ರಾಪಂ ವ್ಯಾಪ್ತಿಯ ಅದೇಷ್ಟೋ ಹಳ್ಳಿಯ ಜನರು ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದರೂ ಮತ್ತೆ ಬಯಲನ್ನೇ ಶೌಚಕ್ಕೆ ಬಳಸಿಕೊಳ್ಳುತ್ತಿದ್ದು, ಇಡೀ ಗ್ರಾಮದಲ್ಲಿ ಸ್ವಚ್ಛತೆ ಮಾತ್ರ ಮರೀಚಿಕೆಯಾಗಿದೆ. ಇದರ ಜೊತೆಗೆ ತಾಲೂಕಲ್ಲಿ ಕೆಲವೂ ಪಂಚಾಯಿತಿಯ ಪಿಡಿಒಗಳು ಶೌಚಾಲಯವನ್ನು ಕಡಿಮೆ ಬೆಲೆಯ ಸಿದ್ಧಪಡಿಸಿದ ಶೌಚಾಲಯಗಳನ್ನು ತಂದು ಆ ಹಣವನ್ನು ಲೂಟಿ ಮಾಡಿದ್ದರ ಪರಿಣಾಮವಾಗಿ ಗ್ರಾಮಸ್ಥರಿಗೆ ಬಯಲೇ ಗತಿಯಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಬಯಲು ಬಹಿರ್ದೆಸೆಗೆ ಹೋಗಿ ಕಾಲುಜಾರಿ ಬಿದ್ದು ಅದೆಷ್ಟೋ ಜನ ಕೈಕಾಲು ಮುರಿದುಕೊಂಡಿದ್ದಾರೆ. ರಾತ್ರಿ ವೇಳೆ ಹಾವು, ಚೇಳುಗಳತಂಹ ವಿಷಜಂತುಗಳು ಕಚ್ಚಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಕೂಡಾ ಅವರು ಶೌಚಾಲಯವನ್ನು ಮಾತ್ರ ಬಳಕೆ ಮಾಡುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಸರಕಾರ ನಿರ್ಮಿಸಿದ ಶೌಚಾಲಯಗಳು ಯೋಗ್ಯವಾಗಿಲ್ಲ ಮತ್ತು ನೀರಿಲ್ಲ. ಹೀಗಾಗಿ ಶೌಚಾಲಯವನ್ನು ಬಳಕೆ ಮಾಡುತ್ತಿಲ್ಲ. -ಮಲ್ಲಿಕಾರ್ಜುನ ಹಾವಿನಾಳಮಠ, ಇಂಡಿ ಪಟ್ಟಣದ ನಿವಾಸಿ.
ಇಂಡಿ ಪಟ್ಟಣದಲ್ಲಿ ಸಮುದಾಯ ಹಾಗೂ ಸಾರ್ವಜನಿಕ ಶೌಚಾಲಯಗಳು ಯಾಕೆ ಬಂದ ಮಾಡಿದ್ದಾರೆ ನನಗೆ ಗೊತ್ತಿಲ್ಲ. ಎಲ್ಲ ಶೌಚಾಲಯಗಳು ಸುರಕ್ಷಿತವಾಗಿವೆ. ಅಲ್ಲಿ ನೀರು ಶೌಚಗೃಹ ಬಳಕೆದಾರರು. ಅಚ್ಚುಕಟ್ಟಾಗಿವೆ. ಇನ್ನೂ ವೈಯಕ್ತಿಕ ಶೌಚಾಲಯಗಳು ಸಾರ್ವಜನಿಕರು ಅರ್ಜಿ ಬಂದರೆ ಸರಕಾರದ ಅನುಮೋದನೆಗೆ ಪತ್ರ ಬರೆಯುತ್ತೇನೆ. -ಲಕ್ಷ್ಮೇಶ ಎಸ್. ಪುರಸಭೆ ಮುಖ್ಯಾಧಿಕಾರಿ ಇಂಡಿ.
ಶೌಚಾಲಯ ಉಪಯೋಗಕ್ಕೆ ಬಾರದಂತೆ ಆಗಿದ್ದು ನನ್ನ ಗಮನಕ್ಕಿವೆ. ವಿಧಾನಪರಿಷತ್ ಚುನಾವಣೆ ಮುಗಿದ ನಂತರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. -ಸುನೀಲ ಮದ್ದಿನ್, ತಾಪಂ ಇಒ ಇಂಡಿ.
-ಯಲಗೊಂಡ ಬೇವನೂರ