Advertisement

ಶೌಚಾಲಯಕ್ಕಿಲ್ಲ ಉದ್ಘಾಟನೆ ಭಾಗ್ಯ

10:49 AM Aug 17, 2019 | Suhan S |

ನರೇಗಲ್ಲ: ದೇಶದ ಎಲ್ಲೆಡೆ ಶೌಚಾಲಯ ನಿರ್ಮಾಣದ ದೊಡ್ಡ ಅಭಿಯಾನ ನಡೆಯುತ್ತಿದೆ. ಆದರೆ, ಪಪಂ ಯೋಜನೆಯೊಂದರಲ್ಲಿ ಸುಮಾರು 85.98 ಲಕ್ಷಕ್ಕೂ ಹೆಚ್ಚು ರೂ. ಖರ್ಚು ಮಾಡಿ ಅನೇಕ ಸಾರ್ವಜನಿಕ ಶೌಚಾಲಯ ನಿರ್ಮಿಸಿ ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಜನರಿಗೆ ಬಯಲು ಶೌಚವೇ ಗತಿಯಾಗಿದೆ.

Advertisement

ಪಟ್ಟಣದ ಮಜರೆ ಗ್ರಾಮವಾದ ಮಲ್ಲಾಪುರದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಕ್ಕೆ 11 ಲಕ್ಷ ರೂ., ದ್ಯಾಂಪುರ ಗ್ರಾಮದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಕ್ಕೆ 11.46 ಲಕ್ಷ ರೂ., ಅಬ್ಬಿಗೇರಿ ರಸ್ತೆಯಲ್ಲಿರುವ ಅನ್ನದಾನೇಶ್ವರ ಕಾಲೇಜಿನ ಹತ್ತಿರ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಕ್ಕೆ 14.60 ಲಕ್ಷ ರೂ., ಕೊಂತಿ ಮಲ್ಲೇಶ್ವರ ದೇವಸ್ಥಾನದ ಹಿಂದೆ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಕ್ಕೆ 11.46 ಲಕ್ಷ ರೂ., ಹಿರೇಭಾವಿ ಹತ್ತಿರ ನಿರ್ಮಿಸಿರುವ ಹೈಟೆಕ್‌ ಸಾರ್ವಜನಿಕ ಶೌಚಾಲಯಕ್ಕೆ 15.46 ಲಕ್ಷ ರೂ., ಕೆ.ಎಸ್‌.ಎಸ್‌. ಕಾಲೇಜಿನ ಆವರಣದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಕ್ಕೆ 11 ಲಕ್ಷ ರೂ., ಅನ್ನದಾನೇಶ್ವರ ಕಾಲೇಜಿನ ಆವರಣದಲ್ಲಿ ನಿರ್ಮಿಸಿರುವ ಶೌಚಾಲಯಕ್ಕೆ 11 ಲಕ್ಷ ರೂ.ಗಳನ್ನು ಖರ್ಚು ಮಾಡಿ ಶೌಚಾಲಯ ನಿರ್ಮಿಸಿದ್ದಾರೆ. ಅನುದಾನ ಕೊರತೆಯಿಂದ ಮೂಲ ಸೌಲಭ್ಯಗಳ ಸಮಸ್ಯೆಯಿಂದ ಶೌಚಾಲಯಗಳು ಅರ್ಧಕ್ಕೆ ನಿಂತು ಪಟ್ಟಣದ ಸಾರ್ವಜನಿಕರಿಗಾಗಿ ನಿರ್ಮಿಸಲಾದ ಶೌಚಾಲಯ ಬಳಕೆಗೆ ಬರುತ್ತಿಲ್ಲ.

ಹೊಸ ಕಟ್ಟಡ ನಿರ್ವಹಣೆ ಇಲ್ಲದೆ ಕಿಟಕಿ, ಬಾಗಿಲುಗಳಿಗೆ ಬಳಸಿದ ಸರಳುಗಳು ತುಕ್ಕು ಹಿಡಿಯಲಾರಂಭಿಸಿವೆ. ಉದ್ಘಾಟನೆಗೂ ಮುನ್ನವೇ ಗೋಡೆಗಳು ಬಿರುಕು ಬಿಟ್ಟು ನಿಂತಿವೆ. ಕಟ್ಟಡಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾಲಿ ಕಂಟಿಗಳು ಬೆಳೆದಿವೆ. ಅಲ್ಲೊಂದು ಇಲ್ಲೊಂದು ಕಸದ ತಿಪ್ಪೆ ಹಾಕಿರುವುದರಿಂದ ಜನರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯಕ್ಕೆ ಯಾವಾಗಲೂ ಬೀಗ ಹಾಕೇ ಇರುತ್ತದೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾತ್ರ ಇದ್ಯಾವುದೂ ಕಾಣುತ್ತಿಲ್ಲ. ಪಟ್ಟಣದಲ್ಲಿ ಬೆರಳೆಣಿಕೆಯಷ್ಟು ಸಾರ್ವಜನಿಕ ಶೌಚಾಲಯಗಳಿವೆ. ಅವುಗಳು ಸಹ ನೀರಿನ ಸಮಸ್ಯೆಯಿಂದ ನಿರುಪಯುಕ್ತವಾಗುತ್ತಿವೆ. ಶೌಚಾಲಯಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಹೀಗಾಗಿ ಅದಕ್ಕಿನ್ನೂ ಉದ್ಘಾಟನೆ ಭಾಗ್ಯ ದೊರೆತ್ತಿಲ್ಲ. ಕಾಟಾಚಾರಕ್ಕೆ ಎನ್ನುವಂತೆ ಇಲ್ಲಿ ಶೌಚಾಲಯ ನಿರ್ಮಿಸಿ ಕೈತೊಳೆದುಕೊಳ್ಳಲಾಗಿದೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.

ಸರ್ಕಾರಿ ಆಸ್ಪತ್ರೆಗೆ ನಿತ್ಯ 25ರಿಂದ 30 ರೋಗಿಗಳು ಜ್ವರ, ತೆಲೆ ನೋವು, ಕೆಮ್ಮು ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಇದರಲ್ಲಿ ಕನಿಷ್ಠ 4ರಿಂದ 5 ಜನ ಡೆಂಘೀ, ಚಿಕೂನ್‌ಗುನ್ಯಾ ರೋಗಿಗಳು ಈಗಾಗಲೇ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ.•ಡಾ| ಎ.ಡಿ. ಸಾಮುದ್ರಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ

Advertisement

ಸಾರ್ವಜನಿಕರ ಉಪಯೋಗಕ್ಕೆಂದು ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಅವುಗಳು ಉದ್ಘಾಟನೆಗೊಳ್ಳದೇ ಇರುವುದರಿಂದ ಸಾರ್ವಜನಿಕರು ಬಯಲು ಶೌಚಾಲಯಕ್ಕೆ ಹೋಗುತ್ತಿದ್ದಾರೆ. ಹೊಸ ಕಟ್ಟಡ ಬೀಗ ಹಾಕಿದ ಸ್ಥಿತಿಯಲ್ಲೇ ಇದೆ. ವರ್ಷ ಕಳೆಯುತ್ತ ಬಂದರೂ ಪಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ನಿರ್ಮಿಸಿರುವ ಶೌಚಾಲಯಗಳಿಗೆ ನೀರಿನ ಹಾಗೂ ಮೂಲ ಸೌಲಭ್ಯವನ್ನು ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು.•ಪಟ್ಟಣದ ನಿವಾಸಿಗಳು

 

•ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next