Advertisement
ಹೌದು, ಇದು ಮಂಗಳೂರು ನಗರದಲ್ಲಿ ಕಾರ್ಯಾಚರಿಸುತ್ತಿರುವ ಒಂದು ಟೋಯಿಂಗ್ ವಾಹನದ ಕಥೆ. 2 ದಿನಗಳ ಹಿಂದೆ ಈ ವಿಚಾರ ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂದಿದ್ದು, ಇದೀಗ 2 ದಿನಗಳಿಂದ ಈ ಟೋಯಿಂಗ್ ವಾಹನದಲ್ಲಿ ಟೋಯಿಂಗ್ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
Related Articles
Advertisement
ಟೋಯಿಂಗ್ ವ್ಯವಸ್ಥೆಯನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಗುತ್ತಿಗೆಗೆ ಪಡೆದು ಎರಡು ವರ್ಷಗಳಿಂದ ನಿರ್ವಹಣೆ ಮಾಡುತ್ತಿದ್ದಾರೆ. ನಾಲ್ಕು ಟೋಯಿಂಗ್ ವಾಹನಗಳಲ್ಲಿ ಒಂದು ವಾಹನ ಕೋವಿಡ್ ಸಂದರ್ಭದಲ್ಲಿ ಫಿಟೆ°ಸ್ ತಪಾಸಣೆಗಾಗಿ ಬೆಂಗಳೂರಿಗೆ ಕೊಂಡು ಹೋಗಿದ್ದು, ಅದು ಇನ್ನೂ ಬಂದಿಲ್ಲ. ಉಳಿದ 3 ವಾಹನಗಳಲ್ಲಿ ಒಂದು ವಾಹನದ ವಿಮೆ ಮತ್ತು ಫಿಟೆ°ಸ್ ಅವಧಿ 2019 ನವೆಂಬರ್‌ನಲ್ಲಿ ಮುಗಿದಿದ್ದರೂ ಅನಧಿಕೃತವಾಗಿ ಕಾರ್ಯಾಚರಣೆಗೆ ಇಳಿಸಲಾಗಿತ್ತು.
ಪೊಲೀಸರ ಸೂಚನೆಯಂತೆ ಈ ವಾಹನದ ಇನ್ಸುರೆನ್ಸ್ ನ್ನು ಶನಿವಾರ ನವೀ ಕರಿಸಲಾಗಿದೆ. ಫಿಟೆ°ಸ್ ಸರ್ಟಿಫಿಕೆಟ್ (ಕ್ಷಮತಾ ಪ್ರಮಾಣ ಪತ್ರ) ಇನ್ನಷ್ಟೇ ಆಗ ಬೇಕಾಗಿದೆ. ಹಾಗಾಗಿ ಈ ವಾಹನದಲ್ಲಿ ಟೋಯಿಂಗ್ ಮಾಡುವುದನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟೋಯಿಂಗ್ ವಾಹನದ ಮಾಲಕರು ಈಗ ಇನ್ಶೂರೆನ್ಸ್ ಪಾವತಿಸಿದ್ದಾರೆ. ಫಿಟೆ°ಸ್ ಸರ್ಟಿಫಿಕೆಟ್ ನವೀಕರಣ ಇನ್ನಷ್ಟೇ ಆಗ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಈ ವಾಹನದಲ್ಲಿ ಟೋಯಿಂಗ್ ಮಾಡುವುದನ್ನು ನಿಲ್ಲಿಸಲಾಗಿದೆ. –ನಟರಾಜ್, ಎಸಿಪಿ, ಟ್ರಾಫಿಕ್
ಟೋಯಿಂಗ್ ವಾಹನ ನಿಯಮ ಉಲ್ಲಂಘಿಸಿ ಓಡಾಡುತ್ತಿದೆ ಎಂದರೆ ಈ ವಾಹನದ ಟೋಯಿಂಗ್ ಕಾರ್ಯಾಚರಣೆಯೂ ಅಕ್ರಮ ವಲ್ಲವೇ? ನಿಯಮ ಉಲ್ಲಂಘಿಸಿದ ವಾಹನ ಮಾಲಕರಿಂದ ದಂಡ ವಸೂಲಿ ಮಾಡುವ ಇಂತಹ ಟೋಯಿಂಗ್ ವಾಹ ನಕ್ಕೆ ದಂಡ ವಿಧಿಸುವವರು ಯಾರು? 1ವರ್ಷದಲ್ಲಿ ವಸೂಲಿ ಮಾಡಿದ ದಂಡ ಮೊತ್ತವನ್ನು ಸಂಬಂಧಪಟ್ಟ ವಾಹನ ಮಾಲಕರಿಗೆ ಹಿಂದಿರುಗಿಸುವರೇ? –ಪ್ರಸನ್ನ ಕುಮಾರ್, ನಾಗರಿಕ
ನಿಯಮ ಉಲ್ಲಂಘಿಸಿದ ವಾಹನಗಳನ್ನು ಹೊತ್ತೂಯ್ಯುವ ಟೋಯಿಂಗ್ ವಾಹನದಲ್ಲಿ ಓರ್ವ ಪೊಲೀಸ್ ಅಧಿಕಾರಿ ಇರುತ್ತಾರೆ. ಟೋಯಿಂಗ್ ಮಾಡುವ ವಾಹನದ ವಿಮೆ, ಎಫ್‌ಸಿ ಇತ್ಯಾದಿ ದಾಖಲೆಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸುವುದು ಅವರ ಜವಾಬ್ದಾರಿ ಅಲ್ಲವೇ? ಈ ರೀತಿ ಕಾರ್ಯಾಚರಿಸುತ್ತಿರುವ ವಾಹನಗಳ ವಿರುದ್ಧ ಪೊಲೀಸ್ ಆಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಬೇಕು. –ರವಿ, ಮಂಗಳೂರು, ನಾಗರಿಕ