Advertisement

ಇಂದು ಹಾಸ್ಯ ಚಕ್ರವರ್ತಿ ನರಸಿಂಹರಾಜು 98ನೇ ಹುಟ್ಟುಹಬ್ಬ; ಮೊಮ್ಮಕ್ಕಳ ಹೊಸ ಯೋಜನೆ

02:41 PM Jul 24, 2020 | mahesh |

ಇಂದು (ಜುಲೈ 24) ಕನ್ನಡದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ 98ನೇ ಹುಟ್ಟುಹಬ್ಬ. ಪ್ರತಿ ವರ್ಷ ನರಸಿಂಹ ರಾಜು ಕುಟುಂಬ ಅವರ ಹುಟ್ಟುಹಬ್ಬಕ್ಕೆ ವಿಶೇಷವಾದ ಕಾರ್ಯಕ್ರಮ ಆಯೋಜಿಸುತ್ತಲೇ ಬಂದಿದೆ. ಈ ಬಾರಿಯೂ ಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಕ್ಕಳು ಹೊಸ ಯೋಜನೆಗೆ ಕೈ ಹಾಕಿದ್ದಾರೆ. ಕಟ್ಟೆ ಎಂಬ ವೆಬ್‌ಸೈಟ್‌ (ಓಟಿಟಿ) ಯೊಂದನ್ನು ಲಾಂಚ್‌ ಮಾಡುತ್ತಿದ್ದಾರೆ. ಅಮೆಜಾನ್‌- ನೆಟ್‌ ಫಿಕ್ಸ್‌ ಕ್ವಾಲಿಟಿಯ ಪ್ರಾದೇಶಿಕ ಓಟಿಟಿ ಫ್ಲಾಟ್‌ ಫಾರಂ ರೀತಿಯದ್ದೇ ಕನ್ನಡದಲ್ಲೂ ಕಟ್ಟೆ ಹೆಸರಿನ ಈ ಡಿಜಿಟಲ್‌ ವೇದಿಕೆ ತಯಾರಾಗುತ್ತಿದೆ.

Advertisement

ಲೋಕಲ್‌ ಟು ಇಂಟರ್‌ ನ್ಯಾಷನಲ್‌ ಕಾನ್ಸೆಪ್ಟ್ ನಡಿ ತಯಾರಾಗುತ್ತಿರುವ ಈ ಕಟ್ಟೆ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅವರ ಮೊಮ್ಮಕ್ಕಳ ಬೃಹತ್‌ ಯೋಜನೆಯೆಂಬುದು ವಿಶೇಷ. ಕನ್ನಡದ ಈ ಕಟ್ಟೆ ಬಗ್ಗೆ ಹೇಳುವುದಾದರೆ, ರಾಜ್ಯದ ಕನ್ನಡ ಭಾಷೆ ಮತ್ತು ಉಪ ಭಾಷೆಗಳಲ್ಲಿ ಕ್ರಿಯಾಶೀಲ ಕಥೆಗಳನ್ನು ಕಟ್ಟಿಕೊಡಲು ಅಥವಾ ಸೃಷ್ಟಿಸಲು ರೂಪುಗೊಂಡಿರುವ ಒಂದು ವಿಭಿನ್ನ ಆನ್‌ ಲೈನ್‌ ಮೀಡಿಯಾ ಪೋರ್ಟಲ್‌ ಇದು. ನೆಲದ ಜನ ಸಂಸ್ಕೃತಿಯ ಸಾರ, ಸಂಪ್ರದಾಯ, ಭಾಷಾ ವೈವಿಧ್ಯ ಮತ್ತು ಸ್ಥಳ ಪುರಾಣ, ಇತಿಹಾಸದ ವಿಶೇಷವನ್ನು ದೃಶ್ಯ ಮಾಧ್ಯಮದಲ್ಲಿ ಸೆರೆಹಿಡಿಯುವ ಹಂಬಲ ಈ ಕನ್ನಡದ ಕಟ್ಟೆಯದ್ದು. ತುಳು, ಕೊಡವ, ಕೊಂಕಣಿ, ಹವ್ಯಕ, ಉತ್ತರ ಕರ್ನಾಟಕ ಅಲ್ಲದೇ ಹಳೇ ಮೈಸೂರು ಪ್ರಾಂತ್ಯದ ಕನ್ನಡ ಸೊಗಡು, ಕಂಗ್ಲೀಷ್‌ ಭಾಷಾ ವೈವಿಧ್ಯದಲ್ಲಿ ನೆಲದ ಕಥನಗಳನ್ನು ಹೇಳುವ ಪ್ರಯತ್ನ ಈ ವೇದಿಕೆಯಲ್ಲಾಗಲಿದೆ.

ಈ ಹೊಸ ಯೋಜನೆಯ ಹಿಂದೆ ಜುಗಾರಿ ಕ್ರಾಸ್‌ ಖ್ಯಾತಿಯ ಎಸ್‌. ಡಿ ಅರವಿಂದ ಮತ್ತು ಅವಿನಾಶ್‌ ಪ್ರಮುಖ ಪಾತ್ರ ವಹಿಸಿದ್ದಾರೆ. ಕನ್ನಡ ಸಿನಿಮಾ ಮೂಲಕ ಹಾಸ್ಯ ಪರಂಪರೆಯನ್ನು  ಕಟ್ಟಿಕೊಟ್ಟ ಹಿರಿಯ ನಟ ನರಸಿಂಹರಾಜು ಅವರ ಮೊಮ್ಮಕ್ಕಳಾದ ಈ ಸಹೋದರರು ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಸಂಸ್ಕೃತಿಯನ್ನು ಪಸರಿಸುವ ಈ ಯತ್ನ ನಿಜಕ್ಕೂ ಮಹತ್ವದ್ದು.

ಕಟ್ಟೆಯ ಕಾರ್ಯಕ್ರಮಗಳು ಮೂಲ ಕತೆಗಳು ಮತ್ತು ಪ್ರಾಂತೀಯ ವಸ್ತು-ವಿಷಯಗಳ ಮೇಲೆ ಗಮನ ಹರಿಸುವ  ಕಥನಗಳನ್ನು ಕಟ್ಟೆ ವಿಶೇಷವಾಗಿ ಕರ್ನಾಟಕದ ಉಪ ಭಾಷೆಗಳಲ್ಲಿ ಯಾರಿಸಲಿದೆ. ಕಟ್ಟೆಯಲ್ಲಿ ಈ ಮುಂದಿನ ಕಾರ್ಯಕ್ರಮಗಳು ಇರುತ್ತವೆ. ವೆಬ್‌ ಸರಣಿ, ಮೂಲ ಚಿತ್ರಗಳು, ಕಿರು ಚಿತ್ರ, ಮಕ್ಕಳಿಗಾಗಿ ವೆಬ್‌ ಸರಣಿ, ಎನಿಮೇಟೆಡ್‌ ಶಿಶು ಪ್ರಾಸ ಗೀತೆಗಳು ಮತ್ತು  ಕಥಾ ವಾಚನ, ಹಾಸ್ಯ, ಅಡುಗೆ, ನಾಟಕ, ಪ್ರವಾಸ ಕಥನ, ರಿಯಾಲಿಟಿ ಶೋ, ಸಂಗೀತ ಮತ್ತು ರೇಡಿಯೋ ಇತ್ಯಾದಿ ವಿಷಯಗಳಿರಲಿವೆ. ಈ ವೆಬ್‌ಸೈಟ್‌ ಇಂದು ಅನಾವರಣಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next