ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಅರಂತೋಡು, ಸಂಪಾಜೆ ಪರಿಹಾರ ಕೇಂದ್ರಕ್ಕೆ ಆಗಮಿಸಿದ್ದ ವೇಳೆ ಈ ರಸ್ತೆಯನ್ನು ಶ್ರಮದಾನದ ಮೂಲಕ ಸರಿಪಡಿಸುವ ಕುರಿತು ಹೇಳಿದ್ದರು.
Advertisement
ಮಾಣಿ-ಮೈಸೂರು ರಸ್ತೆ ಕುಸಿದು ಕೊಡಗು – ದ.ಕ. ಜಿಲ್ಲೆ ಸಂಪರ್ಕ ಕಷ್ಟವಾಗುತ್ತಿದ್ದು, ತೊಡಿಕಾನ -ಪಟ್ಟಿ ರಸ್ತೆ ಯನ್ನು. ನಾವು ಶ್ರಮದಾನದ ಮೂಲಕ ದುರಸ್ತಿ ಮಾಡುತ್ತೇವೆ, ಅರಣ್ಯ ಇಲಾಖೆ ಸಮಸ್ಯೆ ಮಾಡಬಾರ ದೆಂಬ ಗ್ರಾಮಸ್ಥರ ಮನವಿ ಮೇರೆಗೆ ಕೊಡಗಿನ ಡಿಎಫ್ಒ ಜತೆಗೆ ದೂರವಾಣಿ ಮೂಲಕ ಚರ್ಚಿಸಿದ್ದರು. ಡಿಎಫ್ಒ ಭರವಸೆಯ ಮೇರೆಗೆ ಕೂಡಲೇ ದುರಸ್ತಿ ಆರಂಭಿಸಬಹುದು, ಅರಣ್ಯ ಇಲಾಖೆ ಸಹಕಾರ ನೀಡುತ್ತದೆ ಎಂದಿದ್ದರು. ಕೊಡಗು ಜಿ.ಪಂ. ಸಿಇಒ ಪ್ರಶಾಂತ್ ಮಿಶ್ರಾ, ತೊಡಿಕಾನಕ್ಕೆ ಬಂದು ರಸ್ತೆ ಪರಿಶೀಲಿಸುತ್ತೇನೆ ಎಂದಿದ್ದರು.
ಸಂಘಟನೆಗಳ ಮೂಲಕ ನಡೆದ ಶ್ರಮದಾನದಲ್ಲಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು ಗ್ರಾ.ಪಂ. ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಅರಂತೋಡು – ತೊಡಿಕಾನ ವ್ಯ.ಸೇ.ಸ. ಬ್ಯಾಂಕ್ ಅಧ್ಯಕ್ಷ ಸಂತೋಷ್
ಕುತ್ತಮೊಟ್ಟೆ, ಉಪಾ ಧ್ಯಕ್ಷ ದಯಾನಂದ ಕುರುಂಜಿ, ತೊಡಿಕಾನ ಶ್ರೀ ಮಲ್ಲಿ ಕಾರ್ಜುನ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಸದಸ್ಯ ಕೇಶವಪ್ರಸಾದ್ ಗುಂಡಿಗದ್ದೆ, ಮಾಜಿ ಸದಸ್ಯ ವಸಂತ್ ಭಟ್ ತೊಡಿಕಾನ, ದೇಗುಲದ ಮ್ಯಾನೇಜರ್ ಆನಂದ ಕಲ್ಲಗದ್ದೆ, ಎ.ಪಿ.ಎಂ.ಸಿ. ಸದಸ್ಯ ದೀಪಕ್ ಕುತ್ತಮೊಟ್ಟೆ, ಗ್ರಾ. ಪಂ. ಸದಸ್ಯರಾದ ಧನಲಕ್ಷ್ಮೀ, ಸುಶೀಲಾ ಪಂಜಿಕೋಡಿ, ಅರಂತೋಡು ಉನ್ನತೀ ಕರಿಸಿದ ಹಿ. ಪ್ರಾ. ಶಾಲೆಯ ಅಧ್ಯಕ್ಷ ವೆಂಕಟ್ರಮಣ ಮೇರ್ಕಜೆ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.