Advertisement
ಒಂದೊಮ್ಮೆ ಸಂಪೂರ್ಣ ವಿಪಕ್ಷವು ಒಗ್ಗಟ್ಟಾದರೆ ಮತ್ತು ಪ್ರತಿಯೊಂದು ಸ್ಥಾನದಲ್ಲಿ ಬಿಜೆಪಿಯ ವಿರುದ್ಧ ಓರ್ವ ಅಭ್ಯರ್ಥಿಯ ತತ್ತÌವನ್ನು ಅನುಸರಣೆ ಮಾಡಿದರೆ 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಥವನ್ನು ನಿಲ್ಲಿಸಬಹುದಾಗಿದೆ ಎಂದವರು ತಿಳಿಸಿದ್ದಾರೆ. ಪತ್ರಕರ್ತನಿಂದ ರಾಜಕಾರಣಿಯಾಗಿ ತಿರುಗಿದ ಶೌರಿ ಅವರು ಇಲ್ಲಿ ಟಾಟಾ ಲಿಟರೇಚರ್ ಫೆಸ್ಟಿವಲ್‌ನಲ್ಲಿ ನ್ಯಾಯಾಂಗ ವ್ಯವಸ್ಥೆಯೊಳಗೆ ಅಪಾಯ ಎಂಬ ವಿಷಯದ ಮೇಲೆ ಆಯೋಜಿತ ಚರ್ಚೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.
1975ರಲ್ಲಿ (ತುರ್ತು ಪರಿಸ್ಥಿತಿಯ ಸಮಯದಲ್ಲಿ) ಒಂದು ಉತ್ತಮ ವ್ಯಾಖ್ಯಾನಿತ ವಿಪಕ್ಷವಿತ್ತು, ಆದರೆ ಇಂದು ವಿಪಕ್ಷ ಚದುರಿಹೋಗಿದೆ. ಇಂದಿರಾ ಮತ್ತು ನರೇಂದ್ರ ಮೋದಿ ಅವರ ನಡುವಿನ ವ್ಯತ್ಯಾಸವೆಂದರೆ ಇಂದಿರಾ ತಮ್ಮ ಕ್ರಮಗಳ ಬಗ್ಗೆ ಪಶ್ಚಾತ್ತಾಪ ಹೊಂದಿದ್ದರೆಂದು ಹೇಳಬಹುದಾಗಿದೆ ಎಂದು ಶೌರಿ ನುಡಿದಿದ್ದಾರೆ. ಮಿತಿಯೊಂದನ್ನು ಹೊಂದಿದ್ದರು
ಇಂದು ಯಾವುದೇ ಪಶ್ಚಾತ್ತಾಪವಿಲ್ಲ. ಇಂದಿರಾ ವಿಷಯದಲ್ಲಿ ಹೇಳುವುದಾದರೆ ಅವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಸುಮಾರು 1,75,000 ಜನರನ್ನು ಜೈಲಿನಲ್ಲಿ ಬಂಧಿಯಾಗಿರಿಸಿಕೊಂಡಿದ್ದರಾದರೂ ಅದರ ಹಿಂದೆ ಒಂದು ಮಿತಿ ಎಂಬುದನ್ನು ಹೊಂದಿದ್ದರು ಮತ್ತು ಯಾವತ್ತೂ ಅದನ್ನು ದಾಟಿ ಸಾಗಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ಇಂದು ಅಂತಹ ಮಿತಿಯ ಬಗ್ಗೆ ಯಾವುದೇ ಚಿಂತನೆ ಅಥವಾ ಗ್ರಹಿಕೆಯಿಲ್ಲ ಎಂದವರು ತಿಳಿಸಿದ್ದಾರೆ.
Related Articles
Advertisement