Advertisement

ಈಗಿನ ರಾಜಕಾರಣಿಗಳಿಗೆ ಓದುವ ಹವ್ಯಾಸವಿಲ್ಲ

04:06 PM Dec 16, 2020 | Suhan S |

ಮೈಸೂರು: ಈಗಿನ ರಾಜಕಾರಣಿಗಳಿಗೆ ಓದುವ ಹವ್ಯಾಸವೇ ಇಲ್ಲ, ಹಾಗಾಗಿ ಅವರಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಪ್ರಗತಿಪರ ಚಿಂತಕಕೆ.ಎಸ್‌. ಭಗವಾನ್‌ ಹೇಳಿದರು.

Advertisement

ನಗರದ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ವತಿಯಿಂದಹಮ್ಮಿಕೊಂಡಿದ್ದ “ಡಿ.ದೇವರಾಜ ಅರಸು ಅವರ ಸಾಮಾಜಿಕ ಚಿಂತನೆಗಳು’ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಸಮಾಜ ಕಟ್ಟಬೇಕಾದರೆ ಹೊಸ ಆಲೋಚನೆಗಳು ಬರಬೇಕು. ಏನನ್ನೂ ಓದದೆ ಹೊಸ ಆಲೋಚನೆಗಳು ಬರುವುದಿಲ್ಲ. ದೇವ ರಾಜ ಅರಸು ಅವರು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದರು. ಈ ಕಾರಣಕ್ಕೆ ಅವರಿಂದ ಪ್ರಗತಿಪರ ಕಾಯ್ದೆಗಳು ಜಾರಿಗೆ ತರಲು ಸಾಧ್ಯವಾಯಿತು.ಈಗಿನ ರಾಜಕಾರಣಿಗಳಲ್ಲಿ ಈ ರೀತಿಯ ಓದುವ ಹವ್ಯಾಸವನ್ನುಕಾಣಲು ಸಾಧ್ಯವಿಲ್ಲ ಎಂದರು.

ಡಿ. ದೇವರಾಜ ಅರಸು ಅವರು ಸಮಾಜದಲ್ಲಿ ಕಡೆಗಣನೆಗೆ ಒಳಗಾದವರನ್ನು ಗುರುತಿಸಿ ಅವರಿಗೆರಾಜಕೀಯಅಧಿಕಾರನೀಡಿದರು.ಅವರಿಗೋಸ್ಕರ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಇದು ದೇವರಾಜ ಅರಸು ಅವರ ಬಹುದೊಡ್ಡ ಗುಣ ಎಂದು ಹೇಳಿದರು.

ಬಡ ವರ್ಗದವರ ಬಗ್ಗೆ ದೇವರಾಜ ಅರಸುಅವರಿಗೆ ಇದ್ದ ಹೃದಯ ಶ್ರೀಮಂತಿಕೆ ಇನ್ನೂ ಯಾರಲ್ಲೂ ಕಾಣಲು ಸಾಧ್ಯವಾಗಿಲ್ಲ. ರಾಜಕೀಯ ಹಿನ್ನೆಲೆ ಇಲ್ಲದ ಶೋಷಿತ ಸಮುದಾಯದವರನ್ನು ಗುರುತಿಸಿ ಅವರಿಗೆ ರಾಜಕೀಯ ಅಧಿಕಾರ ನೀಡಿದರು ಎಂದು ಸ್ಮರಿಸಿದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್‌ ಮಾತನಾಡಿ, ಅರಸು ಪ್ರತಿಮೆ ನಿರ್ಮಾಣಕ್ಕೆಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಟಿ. ಸೋಮಶೇಖರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

Advertisement

ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌ ಮಾತನಾಡಿ, ಸಾಕಷ್ಟು ಜನರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಎಲ್ಲರ ಹೆಸರು ಜನಮಾನಸದಲ್ಲಿ ಉಳಿದಿಲ್ಲ. ಇಂದಿಗೂ ಅರಸು ಅವರ ಹೆಸರುಜನಮಾನಸದಲ್ಲಿ ಉಳಿಯಲು ಅವರು ನೀಡಿದಕೊಡುಗೆಗಳೇ ಕಾರಣ ಎಂದರು. ವೇದಿಕೆಯಲ್ಲಿಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ ಕುಮಾರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನಿವೃತ್ತನಿರ್ದೇಶಕಡಾ.ಟಿ. ತಿಮ್ಮಯ್ಯ,ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್‌,ಕೇಂದ್ರ ಚುಟುಕು ಸಾಹಿತ್ಯ ಪರಿಷತ್‌ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್‌. ಅರಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next