Advertisement

ಗ್ರಾಮಾಭಿವೃದ್ಧಿ ಇಂದಿನ ಅಗತ್ಯ : ಡಾ|ವಸಂತಕುಮಾರ ಪೆರ್ಲ

06:25 AM Aug 17, 2017 | Team Udayavani |

ಮಂಜೇಶ್ವರ: ಪ್ರತಿಯೊಂದು ಗ್ರಾಮವೂ ತನ್ನಲ್ಲೇ ಇರುವ ಲಭ್ಯ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ಸ್ವಾವಲಂಬಿ ಗ್ರಾಮ ಭಾರತವನ್ನು ಕಟ್ಟಬೇಕು. ಇದಕ್ಕೆ ಸರಕಾರ ನೆರವು ಕೊಡಬೇಕು ಎಂದು ಹಿರಿಯ ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ   ನಿರ್ದೇಶಕ ಡಾ| ವಸಂತಕುಮಾರ ಪೆರ್ಲ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ವರ್ಕಾಡಿ ಸಮೀಪದ  ಪಾವಳದ ಸಂತೋಷ್‌ ಫ್ರೆಂಡ್ಸ್‌ ಕ್ಲಬ್‌ನ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಹಮ್ಮಿಕೊಳ್ಳಲಾದ ಶ್ರೀಕೃಷ್ಣ ಜನ್ಮಾಷ್ಟಮಿ – ಮೊಸರುಕುಡಿಕೆ ಉತ್ಸವ, ಶ್ರೀಕೃಷ್ಣ ಪೂಜೆ ಮತ್ತು ತುಳಸಿ ಅರ್ಚನೆಯ ವಿವಿಧ ಕಾರ್ಯಕ್ರಮಗಳ ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಹಳ್ಳಿಗಳ ಕಡೆಗೆ ಕೇವಲ ಆಡಳಿತ ನಡೆಸು ವವರು ಮಾತ್ರವೇ ಅಲ್ಲ, ಸ್ವತಃ ಗ್ರಾಮದ ಜನತೆ ಕೂಡ ನಿರ್ಲಕ್ಷ್ಯ ವಹಿಸಿದಂತೆ ಕಂಡುಬರುತ್ತಿದೆ. ಹಳ್ಳಿಗಳ ಯುವಕರು ಕೃಷಿಯನ್ನು ಅವಗಣನೆ ಮಾಡಿ ನಗರಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರಿಂದ ಕೃಷಿ ಭೂಮಿ ಹಡಿಲುಬಿದ್ದು, ಹಳ್ಳಿಗಳು ಅನಾಥವಾಗಿ, ವೃದ್ಧಾಶ್ರಮಗಳಾಗಿ ಪರಿವರ್ತಿತವಾಗುತ್ತಿವೆ. ಹಳ್ಳಿ ಮತ್ತು ನಗರಗಳ ವರಮಾನದಲ್ಲಿ ದೊಡ್ಡ ಅಂತರ ವುಂಟಾಗಿ ಹಳ್ಳಿಗಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಡಾ| ಪೆರ್ಲ ಅವರು ಹೇಳಿದರು.

ಸಂತೋಷ್‌ ಫ್ರೆಂಡ್ಸ್‌ ಕ್ಲಬ್‌ ಕಳೆದ ಇಪ್ಪತ್ತೆ$çದು ವರ್ಷಗಳಿಂದ ಪಾವಳ ಪರಿಸರದಲ್ಲಿ ರಸ್ತೆಗಳ ನಿರ್ಮಾಣ, ಬಡವರಿಗೆ  ಮನೆಗಳನ್ನು ಕಟ್ಟಿಕೊಡು ವುದು, ಗ್ರಂಥಾಲಯ ಸ್ಥಾಪನೆ ಹಾಗೂ ಹಲವಾರು ಕೃಷಿ  ಜಾಗೃತಿ ಶಿಬಿರಗಳ ಮೂಲಕ ಸಾರ್ಥಕ ಕೆಲಸಗಳನ್ನು ಮಾಡಿಕೊಂಡು ಬಂದಿದೆ ಎಂದು ಶ್ಲಾಘಿಸಿದರಲ್ಲದೆ, ಇಂತಹ ಕೆಲಸಗಳಿಗೆ ಗ್ರಾಮದವರು ಪೂರ್ಣ ಸಹಕಾರ ನೀಡಿ ಸಂಘವನ್ನು ದೊಡ್ಡ  ಪ್ರಮಾಣದಲ್ಲಿ ಬೆಳೆಸುವ ಆವಶ್ಯಕತೆ ಇದೆ. ಪಂಚಾಯತ್‌ಗಳು ಕೂಡ ಉತ್ತಮ ಕೆಲಸ ಮಾಡುವ ಇಂತಹ ಸಂಘಗಳಿಗೆ ಆರ್ಥಿಕ ಚೇತನ ನೀಡಬೇಕಾಗಿದೆ ಎಂದು ಹೇಳಿದರು.

ಮಂಗಳೂರಿನ ಪ್ರಾದೇಶಿಕ ಭವಿಷ್ಯನಿಧಿ ಕಚೇರಿಯ ಚಂದ್ರಹಾಸ ಕಣಂತೂರು ಮತ್ತು ಮಂಗಳೂರು ಗ್ರಾಮಾಂತರ ಅಂಗನವಾಡಿ ಮೇಲ್ವಿಚಾರಕಿ ಶಾರದಾ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವಿಟuಲ ಪೂಜಾರಿ ಮತ್ತು ಪ್ರಸಿದ್ಧ ವೈದ್ಯ  ಡಾ| ಎಸ್‌.ಎಸ್‌.ರಾಮ್‌ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಕಳೆದ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

Advertisement

ಸಭೆಯ ಅಧ್ಯಕ್ಷತೆಯನ್ನು ಮಂಜೇಶ್ವರ ತಾಲೂಕು  ಗ್ರಂಥಾಲಯ ಸಮಿತಿಯ ಅಧ್ಯಕ್ಷ ಎಸ್‌. ನಾರಾಯಣ ಭಟ್‌ ವಹಿಸಿದ್ದರು. ಐವತ್ತಕ್ಕೂ ಮಿಕ್ಕಿ ಪುಟಾಣಿ ಗಳಿಂದ ಕೃಷ್ಣ ವೇಷ ಪ್ರದರ್ಶನ ಮತ್ತು ಸ್ಪರ್ಧೆ ಏರ್ಪಟ್ಟಿತು. ಮೊಸರುಕುಡಿಕೆ, ಕಬಡ್ಡಿ ಹಾಗೂ ವಿವಿಧ ಕ್ರೀಡೆಗಳನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು. ಪಾವಳದ ಪ್ರೀತಿ ಮಹಿಳಾ ಸಮಾಜ ಮತ್ತು ಸಂತೋಷ್‌ ಫ್ರೆಂಡ್ಸ್‌ ಕ್ಲಬ್‌ ಲೈಬ್ರೆರಿ  ಸಂಘಟನೆಗಳು ಈ ಕಾರ್ಯಕ್ರಮಗಳಿಗೆ ಸಹಯೋಗ ನೀಡಿದ್ದವು.

ಸಂತೋಷ್‌ ಫ್ರೆಂಡ್ಸ್‌ ಕ್ಲಬ್‌ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು. ಶ್ರೇಯಾ ಪ್ರಾರ್ಥಿಸಿದರು. ಕಲ್ಲೂರು ನಾಗೇಶ್‌ ಸಂಘ ನಡೆದು ಬಂದ ಹಾದಿಯನ್ನು ವಿವರಿಸಿ, ಪ್ರಾಸ್ತಾವಿಕವಾಗಿ ಮಾತಾಡಿದರು. ಕಾರ್ಯದರ್ಶಿ ಹಾಗೂ ಅಧ್ಯಾಪಕ ವಿಜಯಕುಮಾರ್‌ ಸ್ವಾಗತಿಸಿದರು. ಕಿಶೋರ್‌ ಕುಮಾರ್‌ ವಂದಿಸಿದರು.ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು ಮತ್ತು “ಕೊರಗತನಿಯ ಯಕ್ಷಗಾನ ಬಯಲಾಟ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next