Advertisement
ಮೇಷ: ಸುಖದುಃಖ, ಕಷ್ಟ ಸುಖಗಳ ಸಮ್ಮಿಶ್ರ ಫಲವು ನಿಮಗೆ ಕಂಡುಬರುವುದು. ಹಲವು ಕಡೆಗಳಿಂದ ಎಷ್ಟು ಕಷ್ಟಗಳು ಬಂದರೂ ಅದನ್ನು ಸಹಿಸುವ ಶಕ್ತಿ ನಿಮಗಿರುತ್ತದೆ. ಸಮಾಧಾನದಿಂದ ಮುಂದುವರಿಯಿರಿ.
Related Articles
Advertisement
ಸಿಂಹ: ಹಲವು ಸುಧಾರಣೆಗಳು ಕಂಡುಬಂದರೂ ಮನಸ್ಸು ಉದ್ವೇಗದಿಂದ ವಿಮುಖವಾಗಿರಲಾರದು. ಮಕ್ಕಳಿಗೆ ಯಶೋವೃದ್ಧಿ, ಕಾರ್ಯಸಿದ್ಧಿಯ ಕಂಡುಬರುವುದು. ಗೃಹದಲ್ಲಿ ಸಂಭ್ರಮವು ಕಂಡುಬರುವುದು.
ಕನ್ಯಾ: ವೃತ್ತಿ ಕ್ಷೇತ್ರದಲ್ಲಿ ಸ್ಥಾನಮಾನ ಬದಲಾದೀತು. ಒಳಜಗಳ, ಅತೃಪ್ತಿ, ಅಸೂಯಾದಿಗಳಿಂದ ಮಿತ್ರಪಕ್ಷದವರೂ ಅಹಿತರೆನಿಸಿಯಾರು. ಕಚೇರಿ ಕೆಲಸದಲ್ಲಿ ಚಿಂತೆ ಹೆಚ್ಚಲಿದೆ. ದುರ್ವ್ಯಸನಗಳಿಗೆ ದಾಸರಾಗದಿರಿ.
ತುಲಾ: ವಿದ್ಯಾರ್ಜನೆಯಲ್ಲಿ ಭಂಗ ಕಂಡುಬಂದೀತು. ಆಟೋಟ ಗಳಲ್ಲೂ ಕೀರ್ತಿ ತಂದೀತು. ಪುಸ್ತಕ ವ್ಯಾಪಾರ, ಪತ್ರಿಕೋದ್ಯಮ, ಅಲಂಕರಣ ಸಾಮಾಗ್ರಿಗಳ ವ್ಯಾಪಾರವು ಭರಾಟೆಯಿಂದ ನಡೆದೀತು. ಶುಭವಿದೆ.
ವೃಶ್ಚಿಕ: ಹೊಸ ಹೊಸ ಗೃಹೋಪಕರಣಗಳು ಮನೆಯನ್ನು ಅಲಂಕರಿಸಲಿವೆ. ಗುಡಿಕೈಗಾರಿಕೆಯಲ್ಲಿ ತಯಾರಾದ ಸಾಮಾಗ್ರಿ ಮಾರಾಟವಾಗದೆ ಹಣಕ್ಕಾಗಿ ಚಡಪಡಿಸುವಂತಾದೀತು. ಕೃಷಿ, ಆದಾಯವು ಸ್ವಲ್ಪ ನೆಮ್ಮದಿ ತರಲಿದೆ.
ಧನು: ವಾಣಿಜ್ಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶೋವರ್ಷದ ಕಾಲ. ಕಬ್ಬಿಣ, ತವರ, ಅಲ್ಯೂಮಿನಿಯಂ ಪಾತ್ರೆ ವ್ಯವಹಾರಗಳಲ್ಲಿ ಲಾಭ ಕಡಿಮೆ ಇರುತ್ತದೆ. ಹಿತ್ತಾಳೆ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿ ಉತ್ತಮ ಅಭಿವೃದ್ಧಿ ಇದೆ.
ಮಕರ: ಮಂಗಲ ಕಾರ್ಯಕ್ಕೆ ನಾಂದಿ ಹಾಡಲಿದ್ದೀರಿ. ಆಪೆ¤àಷ್ಟರ ಸಹಾಯವು ಕಂಡುಬರಲಿದೆ. ಬಾಕಿ ವಸೂಲಿ ಭರದಿಂದ ನಡೆದು ಸಫಲತೆ ಸಾಧಿಸುವಿರಿ. ಕ್ರಯವಿಕ್ರಯದಲ್ಲಿ ನಷ್ಟ ಸಂಭವವೇ ಹೆಚ್ಚಲಿದೆ. ಶುಭವಿದೆ.
ಕುಂಭ: ವಾಣಿಜ್ಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶೋ ವರ್ಷದ ಕಾಲ. ದೇವತಾರಾಧನೆ ಹಾಗೂ ಧಾರ್ಮಿಕ ಕಾರ್ಯಗಳು ನಡೆದು ಖರ್ಚು ತಂದರೂ ಸಮಾಧಾನವು ಸಿಗಲಿದೆ. ಕಷ್ಟಗಳಿಗೆ ತಡೆಯೊಡ್ಡಿ ನಿಂತಿರಿ.
ಮೀನ: ಸಂಗೀತಾದಿ ಪರಿಣಿತರಿಗೆ ಉತ್ತಮ ಆದಾಯದ ಜೊತೆಗೆ ಕೀರ್ತಿಯು ಕೂಡ ಲಭ್ಯವಿರುತ್ತದೆ. ಗೃಹ ನಿರ್ಮಾಣದಂತಹ ಮಹತ್ಕಾರ್ಯಗಳು ಜರಗಲಿವೆ. ಋಣಭಾದೆಯಿದೆ. ಧನ ವಿನಿಯೋಗ ಉತ್ತಮ ಫಲದಾಯಕ.
ಎನ್.ಎಸ್. ಭಟ್