Advertisement

ಕಾರ್ಮಿಕ ದಿನಾಚರಣೆ…ಗೂಗಲ್ ಡೂಡಲ್ ವಿಶೇಷ ಗೌರವ

01:12 PM May 01, 2018 | Sharanya Alva |

ನವದೆಹಲಿ: ಮೇ 1ರ ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಶ್ರಮಿಕ ಸಮುದಾಯಕ್ಕೆ ಗೂಗಲ್ ತನ್ನ ಸರ್ಜ್ ಇಂಜಿನ್ ನಲ್ಲಿ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

Advertisement

ವಿವಿಧ ವೃತ್ತಿರಂಗದ ಕಾರ್ಮಿಕರು ಬಳಸುವ ಸಲಕರಣೆ–ಸಾಧನಗಳ ಚಿತ್ರಗಳನ್ನು ಡೂಡಲ್‌ನಲ್ಲಿ ಬಿಂಬಿಸಿದೆ. ಕಾರ್ಮಿಕರಿಗೆ ಗೌರವ ಸೂಚಕವಾಗಿ ಆಚರಿಸುವ ಈ ದಿನಕ್ಕೆ ಮೇ ಡೇ ಎಂತಲೂ ಕರೆಯುತ್ತಾರೆ.

ಶ್ರಮಿಕ ಹಾಗೂ ಕಾರ್ಮಿಕ ವರ್ಗ ಕಾರ್ಮಿಕ ದಿನವನ್ನು ದೇಶಾದ್ಯಂತ ಆಚರಿಸುತ್ತಿದೆ. ಮೇ ದಿನದ ಮೂಲ ಅಮೆರಿಕ. 19ನೇ ಶತಮಾನದಲ್ಲಿ ಅಮೆರಿಕದಲ್ಲಿ ಟ್ರೇಡ್ ಯೂನಿಯನ್ ಮತ್ತು ಕಾರ್ಮಿಕ ಚಳವಳಿ ಉತ್ತುಂಗದ ಸ್ಥಿತಿಯಲ್ಲಿತ್ತು.

ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಮೇ ದಿನ ಸಾರ್ವತ್ರಿಕ ರಜೆ ಘೋಷಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next