Advertisement

ದೇಶದ ಅತಿ ಎತ್ತರದ ಧ್ವಜಸ್ತಂಭಕ್ಕೆ ಚಾಲನೆ ಇಂದು

06:30 AM Mar 12, 2018 | Team Udayavani |

ಬೆಳಗಾವಿ: ನಗರದ ಕೋಟೆಕೆರೆ ಆವರಣದಲ್ಲಿ ದೇಶದ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭಕ್ಕೆ ಸೋಮವಾರ ಅಧಿಕೃತವಾಗಿ ಚಾಲನೆ ಸಿಗಲಿದೆ.

Advertisement

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬುಡಾ ಅಧ್ಯಕ್ಷ, ಉತ್ತರ ಕ್ಷೇತ್ರದ ಶಾಸಕ ಫಿರೋಜ ಸೇs… ಈ ಬಗ್ಗೆ ಮಾಹಿತಿ ನೀಡಿದರು. ಪುಣೆಯ ಬಜಾಜ್‌ ಎಲೆಕ್ಟ್ರಿಕಲ್ಸ್‌ನವರಿಗೆ ಡೆನಿಯರ್‌ ಪಾಲಿಸ್ಟರ್‌ ಬಟ್ಟೆಯಿಂದ ಧ್ವಜ ಸಿದ್ಧಪಡಿಸಲು ಗುತ್ತಿಗೆ ನೀಡಲಾಗಿತ್ತು. 15 ದಿನದಲ್ಲಿ ಧ್ವಜ ಸಿದ್ಧಪಡಿಸಲಾಗಿದೆ. ಸೋಮವಾರ ಬೆಳಗ್ಗೆ 8:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಧ್ವಜಾರೋಹಣ ಮಾಡುವ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯಮಂತ್ರಿಯವರಿಂದ ರಾಷ್ಟ್ರಧ್ವಜ ಲೋಕಾರ್ಪಣೆ ಮಾಡುವ ಯೋಜನೆ ಹೊಂದಲಾಗಿತ್ತು. ಸಿದ್ದರಾಮಯ್ಯ ಅವರು ಚುನಾವಣೆ ಸಿದ್ಧತೆಯಲ್ಲಿರುವುದರಿಂದ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ತಿಳಿಸಿದರು.

ವಿಶೇಷತೆಗಳೇನು?
ಧ್ವಜಸ್ತಂಭ:

– ವಾಘಾ ಬಾರ್ಡರ್‌ನ ಧ್ವಜಸ್ತಂಭಕ್ಕಿಂತಲೂ ಅತಿ ಎತ್ತರದ ಧ್ವಜಸ್ತಂಭ ಇದಾಗಿದೆ.
– ಬೇಸ್‌ ಪ್ಲೇಟ್‌ನಿಂದ ಒಟ್ಟು 110 ಮೀಟರ್‌ ಎತ್ತರದ, ಒಟ್ಟು 36 ಟನ್‌ ತೂಕದ ಸ್ತಂಭ
– 1.62 ಕೋಟಿ ರೂ.ವೆಚ್ಚದಲ್ಲಿ ರಾಷ್ಟ್ರಧ್ವಜ ಸ್ತಂಭ ನಿರ್ಮಿಸಲಾಗಿದೆ.
– ರಾತ್ರಿ ಹೊತ್ತಿನಲ್ಲೂ ಧ್ವಜಸ್ತಂಭ ಕಾಣುವಂತೆ ಪೋಕಸ್‌ ಲೈಟ್‌ ವ್ಯವ ಸ್ಥೆ ಮಾಡಲಾಗಿದೆ.

ರಾಷ್ಟ್ರಧ್ವಜ
– ಸ್ತಂಭದಲ್ಲಿ 120/80 ಅಡಿ ವಿಸ್ತೀರ್ಣದ ರಾಷ್ಟ್ರಧ್ವಜ ಹಾರಾಡಲಿದೆ.
– 1.9 ಮೀಟರ್‌ ಡೈಮನನ್‌ ಹಾಗೂ 14 ಮಿ.ಮೀ. ದಪ್ಪ ಇರುವ ಧ್ವಜ 
– ವಿದ್ಯುನ್ಮಾನ ಯಂತ್ರದ ಸಹಾಯದಿಂದ ರಾಷ್ಟ್ರಧ್ವಜ ಹಾರಾಡಲಿದ್ದು, 3.5 ಎಚ್‌ಪಿ ಮೋಟಾರ್‌ ಅಳವಡಿಸಲಾಗಿದೆ.
– ಹಗ್ಗದ ದಪ್ಪ 8 ಮಿ.ಮೀ.,  500 ಕೆಜಿ ಬಟ್ಟೆಯಲ್ಲಿ ತ್ರಿವರ್ಣ ಧ್ವಜ ಸಿದ್ಧಪಡಿಸಲಾಗಿದೆ.
– ಈ ಬೃಹದಾಕಾರದ ತ್ರಿವರ್ಣ ಧ್ವಜ ವರ್ಷದ 365 ದಿನವೂ ಹಾರಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next