Advertisement

ಇಂದು ವಿಶ್ವ ಪುಸ್ತಕ ದಿನ

03:45 AM Apr 23, 2017 | Harsha Rao |

ಕನ್ನಡದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಗೊಣಗುವವರ ಮಧ್ಯೆ ಕನ್ನಡ ಪುಸ್ತಕ‌ಗಳ ಸಂಖ್ಯೆ ಹೆಚ್ಚುತ್ತಿದೆ. ಪುಸ್ತಕ ಪ್ರಕಟನೆಯ ಕುರಿತಂತೆ ಕನ್ನಡದಲ್ಲಿ ಯಾವುದೇ ರೀತಿಯ ಶೈಕ್ಷಣಿಕ ಕೋರ್ಸುಗಳು ಇಲ್ಲದಿದ್ದರೂ ತಮಗಿರುವ ಸೀಮಿತ ಜ್ಞಾನದಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿ¨ªಾರೆ. ಪುಸ್ತಕ ಪ್ರಕಾಶನಕ್ಕೆ ತೊಡಗುವ ಮುಂಚೆ ಈ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಕಾಯಿದೆಗಳ/ನಿಯಮಾವಳಿಗಳ ಬಗೆಗೆ ತಿಳಿದುಕೊಳ್ಳುವುದು ಅವಶ್ಯ. 

Advertisement

ಕಾಪಿರೈಟ್‌ ಕಾಯಿದೆ

1914, 1947, 1957, 1983, 1984, 1994, 1999, 2010 (ಭಾರತದಲ್ಲಿ ಜಾರಿಯಾದ ಕಾಪಿರೈಟ್‌ ಕಾಯಿದೆ ಮತ್ತು ತಿದ್ದಿಪಡಿಗಳು)  ಪ್ರಕಾಶಕ ಅಥವಾ ಲೇಖಕರಿಗೆ ಈ ಕಾಯ್ದೆಯ ಬಗೆಗೆ ಸಂಪೂರ್ಣ ಮಾಹಿತಿ ಇರಬೇಕಾದುದು ಅವಶ್ಯ. ಕೇವಲ ಸಾಹಿತ್ಯ ಮಾತ್ರವಲ್ಲ, ಇವತ್ತು ಕಲೆ, ಸಂಗೀತ, ಧ್ವನಿಮುದ್ರಿತ ವಿಷಯ, ಚಲನಚಿತ್ರ ಮುಂತಾದ ವಿಷಯಗಳಿಗೂ ಈ ಕಾಯಿದೆಯಲ್ಲಿ ಅವಕಾಶ ಕಲ್ಪಿಸಿದೆ. ಈಚೆಗೆ ಕಂಪ್ಯೂಟರ್‌ ಪ್ರೋಗ್ರಾಮ್‌ಗಳಿಗೂ ಈ ಕಾಯಿದೆಯಲ್ಲಿ ಅವಕಾಶ ಕಲ್ಪಿಸಿದೆ. 1957ರಲ್ಲಿ ಜಾರಿಗೆ ಬಂದ ಈ ಕಾಯಿದೆ ಹಲವು ಬಾರಿ ಪರಿಷ್ಕರಣೆಗೆ ಒಳಗಾಗಿದ್ದು ಸದ್ಯ ಭಾರತದಲ್ಲಿ ಒಬ್ಬ ಲೇಖಕನ ಮರಣಾನಂತರ 60 ವರ್ಷಗಳವರೆಗೆ ಆ ಕೃತಿಯ ಸಾಮ್ಯವು ಲೇಖಕನ ಉತ್ತರಾಧಿಕಾರಿಗಳ ವಶದಲ್ಲಿರುತ್ತದೆ. (ಬಾನುಲಿ ಪ್ರಸಾರದ ಕಾರ್ಯಕ್ರಮಗಳಿಗೆ 25 ವರ್ಷಗಳು) ಈ ಕಾಯಿದೆಯನ್ವಯ ಒಬ್ಬ ಲೇಖಕ ತನ್ನ ಬಿಡಿಬರಹಗಳನ್ನು ಮತ್ತು ಸಮಗ್ರ ಸಾಹಿತ್ಯವಾಗಿ ಪ್ರಕಾಶಕರಿಗೆ ಪ್ರಕಟಿಸಲು ಅನುಮತಿ ನೀಡಬಹುದು. ಒಂದೇ ಬಾರಿ ಪ್ರಕಾಶಕರಿಂದ ಹಣ ಪಡೆದು ಪೂರ್ಣ ಹಕ್ಕುಗಳನ್ನು ಬಿಟ್ಟುಕೊಡಬಹುದು ಅಥವಾ ಇಂತಿಷ್ಟು ಪ್ರತಿಗಳಿಗೆ ಅಥವಾ ಇಂತಿಷ್ಟು ವರ್ಷಗಳಿಗೆ ಎಂದು ಒಪ್ಪಂದ ಮಾಡಿಕೊಂಡು ಪ್ರಕಟಿಸಲು ಅನುಮತಿ ನೀಡಬಹುದು. ಇಲ್ಲಿ ಲೇಖಕ ಮತ್ತು ಪ್ರಕಾಶಕನ ನಡುವಿನ ಒಪ್ಪಂದ ಪತ್ರಕ್ಕೆ ಮಾನ್ಯತೆ ಇದ್ದು ಅದರಲ್ಲಿ ಪ್ರಕಟನೆಯ/ಮಾರಾಟದ ಭೌಗೊಳಿಕ ವಿವರ, ಒಪ್ಪಂದದ ಅವಧಿ, ಗೌರವಧನದ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು.

ಲೇಖಕ ಪ್ರಕಾಶಕನಿಗೆ ಹಸ್ತಪ್ರತಿ ನೀಡಿ ಒಂದು ವರ್ಷದೊಳಗೆ ಪ್ರಕಟವಾಗದಿದ್ದರೆ ಅಥವಾ ಒಂದು ಕೃತಿ ಪ್ರಕಟವಾಗಿ ಐದು ವರ್ಷದ ನಂತರ (ಅದರ ಪ್ರತಿಗಳು ಮಾರಾಟವಾಗದಿದ್ದರೂ) ಅದನ್ನು ಬೇರೆ ಪ್ರಕಾಶಕರಿಗೆ ಕೊಡುವ ಹಕ್ಕು ಲೇಖಕನಿಗಿರುತ್ತದೆ. ಗ್ರಂಥಸಾಮ್ಯ ಕಾಯಿದೆ ಉಲ್ಲಂ ಸಿದರೆ ಆರು ತಿಂಗಳ ಸೆರೆಮನೆವಾಸ ಮತ್ತು ಐವತ್ತರಿಂದ ಮೂರು ಲಕ್ಷದವರೆಗೆ ದಂಡವನ್ನು ವಿಧಿಸಬಹುದಾಗಿದೆ.

ಪ್ರಸ್‌ ಅಂಡ್‌ ರಿಜಿಸ್ಟ್ರೇಷನ್‌ ಆಫ್ ಬುಕ್ಸ್‌ ಆಕ್ಟ್ 1967

Advertisement

ಪ್ರಕಟವಾದ ಪುಸ್ತಕವನ್ನು ಆಯಾ ರಾಜ್ಯವು ನಿಗದಿಪಡಿಸಿದ ಸ್ಥಳದಲ್ಲಿ  ಅಧಿಕಾರಿಗಳಿಗೆ ಪುಸ್ತಕಗಳು ಪ್ರಕಟವಾದ ಕೂಡಲೇ ಮುದ್ರಕ ಅಥವಾ ಪ್ರಕಾಶಕ ತನ್ನ ಸ್ವಂತ ಖರ್ಚಿನಲ್ಲಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಇದು ಆಯಾ ಭಾಷೆಯಲ್ಲಿ ಮತ್ತು ವರ್ಷದಲ್ಲಿ ಪ್ರಕಟವಾಗುವ ಪುಸ್ತಕಗಳ ಮಾಹಿತಿ ಸಿಗುವಂತಾಗುತ್ತದೆ. ಈ ಕಾಯಿದೆಯ ಪ್ರಕಾರ ಪುಸ್ತಕದ ಜೊತೆಗೆ ಪುಸ್ತಕದ ಶೀರ್ಷಿಕೆ, ಲೇಖಕನ ಹೆಸರು ಮತ್ತು ವಿಳಾಸ, ಭಾಷಾಂತರವಾಗಿದ್ದರೆ ಅವರ ಹೆಸರು, ಪ್ರಕಟವಾದ ದಿನಾಂಕ ಅಥವಾ ವರ್ಷ, ಪುಟಸಂಖ್ಯೆ, ವಿಷಯ, ಪ್ರಕಾರ, ಆಕಾರ, ಮೊದಲ ಮುದ್ರಣದ ವಿವರಗಳು, ಪುಸ್ತಕದ ಬೆಲೆ, ಮುದ್ರಣಾಲಯದ ಹೆಸರು  ಮತ್ತು ವಿಳಾಸ, ಹಕ್ಕು ಸಾಮ್ಯದ ಬಗೆಗೆ ಮಾಹಿತಿಯನ್ನು ಇಂಗ್ಲಿಷಿನಲ್ಲಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಉಲ್ಲಂ ಸಿದವರಿಗೆ 500 ರೂಪಾಯಿಗಳವರೆಗೆ ದಂಡವನ್ನು ವಿಧಿಸಲು ಅವಕಾಶವಿದೆ.

ಡೆಲಿವರಿ ಆಫ್ ಬುಕ್ಸ್‌ ಕಾಯಿದೆ 1954
ಈ ಕಾಯಿದೆಯ ಪ್ರಕಾರ ಪ್ರಕಾಶಕ ತನ್ನ ಸ್ವಂತ ಖರ್ಚಿನಲ್ಲಿ ಪ್ರಕಟವಾದ 30 ದಿನಗಳ ಒಳಗೆ ಪ್ರಕಾಶಕ ಕೊಲ್ಕತಾ, ದೆಹಲಿ, ಮುಂಬಯಿ ಮತ್ತು ಚೆನ್ನೈಗಳಲ್ಲಿರುವ ರಾಷ್ಟ್ರೀಯ ಗ್ರಂಥಾಲಯಗಳಿಗೆ ಕಳುಹಿಸಬೇಕು. ಇದು ರಾಷ್ಟ್ರೀಯ ಗ್ರಂಥಸೂಚಿ ರಚಿಸಲು ಸಹಕಾರಿಯಾಗುತ್ತದೆ. (ಈ ಕಾಯಿದೆಗೆ 1956ರಲ್ಲಿ ತಿದ್ದುಪಡಿ ತಂದು ವೃತ್ತಪತ್ರಿಕೆಗಳನ್ನೂ ಸೇರಿಸಲಾಗಿದೆ) ಈ ಗ್ರಂಥಸೂಚಿಯ ಮೇರೆಗೆ ಯುನೆಸ್ಕೋ ಆಯಾ ವರ್ಷದ ವಿಶ್ವಪುಸ್ತಕ ಸೂಚಿಯನ್ನು ಪ್ರಕಟಿಸುತ್ತದೆ. ಒಂದು ವೇಳೆ ತಪ್ಪಿದರೆ ಶಿûಾರ್ಹ ಅಪರಾಧವಾಗಿದ್ದು ಗರಿಷ್ಠ 50 ಅಥವಾ ಪುಸ್ತಕದ ಮುಖಬೆಲೆಯ ಹಣವನ್ನು ದಂಡ ರೂಪದಲ್ಲಿ ವಿಧಿಸಲು ಈ ಕಾಯಿದೆಯಲ್ಲಿ ಅವಕಾಶವಿದೆ. ಇದು ಸರ್ಕಾರವು ಪ್ರಕಟಿಸುವ ಪ್ರಕಟನೆಗಳಿಗೂ ಅನ್ವಯವಾಗುವುದು (ಖಾಸಗಿ ಪ್ರಸಾರದ ಪುಸ್ತಕಗಳಿಗೆ ಅಲ್ಲ)

ಮಾನನಷ್ಟ ಮೊಕದ್ದಮೆ ಮತ್ತು ಅಶ್ಲೀಲ ಪುಸ್ತಕಗಳ ಪ್ರಕಾಶನ/ಮಾರಾಟ
ಪ್ರಕಾಶಕನಾದವನು ನ್ಯಾಯವಾದಿಯಾಗಬೇಕಾದ ಆವಶ್ಯಕತೆ ಇಲ್ಲದಿದ್ದರೂ ದೇಶದ ಕಾನೂನುಗಳನ್ನು ತಕ್ಕಮಟ್ಟಿಗಾದರೂ ತಿಳಿದಿರಬೇಕಾದುದು ಅವಶ್ಯ. ರಾಷ್ಟ್ರದ ಸಾರ್ವಭೌಮತೆ, ಏಕತೆಗೆ ಧಕ್ಕೆ ತರುವ, ಜನರ ಧಾರ್ಮಿಕ ನಂಬಿಕೆಗಳಿಗೆ ಕುಂದುಂಟುಮಾಡುವ ಯಾವುದೇ ವರ್ಗ-ವರ್ಣ-ಜಾತಿ ವ್ಯಕ್ತಿಗಳನ್ನು ಅವಹೇಳನ ಮಾಡುವ ಪುಸ್ತಕಗಳನ್ನು ಪ್ರಕಟಿಸಬಾರದು. ಹೀಗಾಗಿ, ಹಸ್ತಪ್ರತಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಬೇಕಿದ್ದಲ್ಲಿ ಪರಿಣಿತರ ನೆರವು ಪಡೆದು ಅಗತ್ಯ ತಿದ್ದುಪಡಿಗಳನ್ನು ಮಾಡಿ ಪುಸ್ತಕ ಪ್ರಕಟಿಸುವುದು ಅಗತ್ಯ. ಇಂಥ ಪುಸ್ತಕಗಳನ್ನು ಪ್ರಕಟಿಸುವುದು ಹೇಗೆ ಕಾನೂನುಬಾಹಿರವೋ ಅವುಗಳನ್ನು ಮಾರುವುದು ಕೂಡ ಕಾನೂನು ಬಾಹಿರವೇ (ಕ್ರಿಮಿನಲ್‌ ಮೊಕದ್ದಮೆ ಹೂಡಬಹುದು) ರಾಜದ್ರೋಹದ ಕಾಯಿದೆಯಡೆ ರಾಜ್ಯ ಸರ್ಕಾರದ ವಿರುದ್ಧ ಚಳುವಳಿ ಹೂಡಿದಾಗ ಸರ್ಕಾರದ ಮಾನನಷ್ಟವಾಯಿತೆಂದು ಶಿಕ್ಷೆಗೆ ಒಳಪಡಿಸಬಹುದು. ಪಿ. ವಿ. ನಾರಾಯಣ ಅವರ ಧರ್ಮ ಕಾರಣ, ಬಂಜಗೆರೆ ಜಯಪ್ರಕಾಶ ಅವರ ಆನು ದೇವ , ಎಚ್‌. ಎಸ್‌. ಶಿವಪ್ರಕಾಶರ ಮಹಾಚೈತ್ರ ಮುಂತಾದ‌ವನ್ನು ಇಲ್ಲಿ ಉದಾಹರಿಸಬಹುದು. ಲೇಖಕರು ಇಂಥ ಪುಸ್ತಕಗಳನ್ನು ನಿಷೇಧಿಸಿದಾಗ ಲೇಖಕನಿಗೆ ಮಾತ್ರವಲ್ಲ, ಪ್ರಕಾಶಕನಿಗೂ ಮಾನನಷ್ಟವುಂಟಾಗುತ್ತದೆ. ಕಾಮ ಪ್ರಚೋದನೆಯುಳ್ಳ , ಪಾತಿವ್ರತ್ಯವನ್ನು ಕೆಡಿಸುವ, ವಿಕೃತ ಕಾಮವನ್ನು ಉತ್ತೇಜಿಸುವ, ಭ್ರಷ್ಟಾಚಾರವನ್ನು ಬೆಳೆಸುವ ಪುಸ್ತಕಗಳನ್ನು ಪ್ರಕಟಿಸಿದಲ್ಲಿ ಐಪಿಸಿ ಸೆಕ್ಷನ್‌ 292ರ ಅಡಿಯಲ್ಲಿ ಶಿಕ್ಷೆ ವಿಧಿಸಬಹುದಾಗಿರುತ್ತದೆ. ಎರಡು ವರ್ಷಗಳ ಸೆರೆಮನೆವಾಸ ಮತ್ತು ರೂ. ಎರಡು ಸಾವಿರದವರೆಗೆ ದಂಡವನ್ನು ವಿಧಿಸಲಾಗುತ್ತದೆ.

ಪ್ರಕಾಶನ ಸಂಸ್ಥೆಗಳ ಕಾನೂನು
ಲೇಖಕ ಪ್ರಕಾಶಕ: (Author publisher) ಸರ್ಕಾರವು ಸ್ವತಃ ಲೇಖಕನೇ ಪ್ರಕಾಶನ ಮಾಡಿದ ಪುಸ್ತಕಗಳಿಗೆ ಕೆಲವು ರಿಯಾಯಿತಿಗಳನ್ನು ನೀಡಿದೆ. ಅವುಗಳಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಥವಾ ಕನ್ನಡ ಪುಸ್ತಕ ಪ್ರಾಧಿಕಾರದಂಥ ಸಂಸ್ಥೆಗಳಿಗೆ ಪುಸ್ತಕ ಸರಬರಾಜು ಮಾಡಲು ವ್ಯಾಟ್‌ ಪ್ರಮಾಣ ಪತ್ರ ಅಥವಾ ಕೇಂದ್ರ ಮಾರಾಟ ಕಾಯ್ದಯ ನೋಂದಣಿ ಪತ್ರಗಳ ವಿನಾಯಿತಿ ಇರುತ್ತದೆ. (ಆದರೆ ಪ್ಯಾನ್‌ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ಗಳನ್ನು ಬಿಲ್ಲಿನ ಜೊತೆಗೆ ಸಲ್ಲಿಸಬೇಕಾಗಬಹುದು.) ವರ್ಷಾಂತ್ಯದಲ್ಲಿ ಪ್ರಕಾಶನದಿಂದ ಬಂದ ಲಾಭ/ಗಳಿಕೆಯನ್ನು ತನ್ನ ವರಮಾನದ ಜತೆಗೆ ಸೇರಿಸಿ ಸಲ್ಲಿಸುವುದು ಒಳಿತು. ಲೇಖಕ ಪಡೆಯುವ ಗೌರವಧನಕ್ಕೆ ಆದಾಯ ಇಲಾಖೆಯು ಒಂದು ಲಕ್ಷದವರೆಗೆ ವಿನಾಯಿತಿ ನೀಡಿದ್ದರೂ ಸೂಕ್ತ ದಾಖಲಾತಿಗಳನ್ನು ಹೊಂದಿರುವುದು ಅವಶ್ಯ. ಸರ್ಕಾರಿ ಕೆಲಸದಲ್ಲಿರುವವರು ಪ್ರಕಾಶನ ಮಾಡಬಹುದು, ಅದಕ್ಕೆ ಉನ್ನತ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಅವಶ್ಯ. ಕನ್ನಡದಲ್ಲಿ ಲೇಖಕ-ಪ್ರಕಾಶಕರ ದೊಡ್ಡ ಪರಂಪರೆಯೇ ಇತ್ತೆಂಬುದನ್ನು ಇಲ್ಲಿ ನಾವು ಮರೆಯಬಾರದು. ಈ ಹೊತ್ತಿಗೂ ಮಾಸ್ತಿ ಅವರ ಜೀವನ ಕಾರ್ಯಾಲಯ ಹಾಗೂ ಕುವೆಂಪು ಅವರ ಉದಯರವಿ ಪ್ರಕಾಶನ, ತೇಜಸ್ವಿ ಅವರ (ಬಿ. ಎನ್‌. ಶ್ರೀರಾಮ್‌ ಅವರ ಜೊತೆಗಿನ) ಪುಸ್ತಕ ಪ್ರಕಾಶನ ಮುಂತಾದವು ಮುಂದುವರಿಯುತ್ತಿವೆ.

ಏಕ ಮಾಲೀಕತ್ವ ಪ್ರಕಾಶನ : ಸಂಸ್ಥೆ Ownership-Properatioship Publication : ನಮ್ಮಲ್ಲಿರುವ ಪ್ರಕಾಶನ ಸಂಸ್ಥೆಗಳಲ್ಲಿ ಹೆಚ್ಚಿನವು ಈ ಬಗೆಯವು. ವ್ಯಾಟ್‌ ನೋಂದಣಿ ಮತ್ತು ಕಾರ್ಮಿಕ ಇಲಾಖೆಯು ನೀಡುವ ಶಾಪ್ಸ್‌ ಅಂಡ್‌ ಎಸ್ಟಾಬ್ಲಿಷ್‌ಮೆಂಟ್‌ ಪ್ರಮಾಣ ಪತ್ರವನ್ನು ಹಾಗೂ ಸ್ಥಳೀಯ ಸಂಸ್ಥೆಗಳ (ನಗರಸಭೆ ಮತ್ತು ಪುರಸಭೆ ಇತ್ಯಾದಿ)ಗಳ ಪರವಾನಿಗೆ ಪತ್ರವನ್ನು ಹೊಂದಿರುವುದು ಕಡ್ಡಾಯ. ಹಲವು ಪ್ರಕಾಶನ ಸಂಸ್ಥೆಗಳು ಮಾಲೀಕನ ಆಸಕ್ತಿ, ಅಭಿರುಚಿ ಮತ್ತು ಪ್ರಭಾವಗಳ ಕಾರಣದಿಂದ ರೂಪುಗೊಂಡಿರುತ್ತವೆ. ಆ ವ್ಯಕ್ತಿ ನಿಧನಗೊಂಡಾಗ ಅಥವಾ ಬೇರೆ ಕಡೆಗೆ ಸ್ಥಳಾಂತರಗೊಂಡಾಗ, ಅನಿವಾರ್ಯ ಕಾರಣಗಳು ಎದುರಾದಾಗ ಪ್ರಕಾಶನ ಸ್ಥಗಿತಗೊಳ್ಳುತ್ತದೆ. ಮೈಸೂರಿನ ಶಾರದಾಮಂದಿರ, ಉಷಾ ಸಾಹಿತ್ಯ ಮಾಲೆ ಮುಂತಾದವುಗಳು ಉದಾಹರಣೆಗಳು. ಕೆಲವು ಪ್ರಕಾಶನ ಸಂಸ್ಥೆಗಳು ತಮ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿವೆ. ಡಿವಿಕೆ ಮೂರ್ತಿ ಅವರ ನಿಧನದ ನಂತರವೂ ಅವರ ಅಳಿಯ ದ್ವಾರಕಾನಾಥ ಅವರು ಆ ಪ್ರಕಾಶನವನ್ನು ಅದೇ ಸಂಪ್ರದಾಯ ಮಾರ್ಗದಲ್ಲಿ ಪ್ರಾಮಾಣಿಕವಾಗಿ ನಡೆಸಿಕೊಂಡು ಬರುತ್ತಿ¨ªಾರೆ. ಮಾ. ಗೋವಿಂದರಾಯರ ನಂತರ ಸಾಹಿತ್ಯ ಭಂಡಾರ/ಸಾಹಿತ್ಯ ಪ್ರಕಾಶನವೂ ಅದೇ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ತಳುಕಿನ ವೆಂಕಣ್ಣಯ್ಯ ಗ್ರಂಥಮಾಲೆಯನ್ನು ಅವರ ಮಗ ಛಾಯಾಪತಿ ಮುನ್ನಡೆಸುತ್ತಿ¨ªಾರೆ. ಹೀಗೆ ಮೂರು ತಲೆಮಾರಿನಲ್ಲಿಯೂ ಪ್ರಕಾಶನ ಮುಂದುವರೆಯುತ್ತಿರುವ ಏಕೈಕ ಸಂಸ್ಥೆಯೆಂದರೆ ಧಾರವಾಡದ ಮನೋಹರ ಗ್ರಂಥಮಾಲೆಯದು.

ಹಲವು ಮಾಲೀಕರ (ಪಾರ್ಟನರ್‌ಶಿಪ್‌) ಪ್ರಕಾಶನ : ಹಲವು ಜನರು ಸೇರಿ ಪ್ರಕಾಶನ ಸಂಸ್ಥೆಗಳನ್ನು  ಸ್ಥಾಪಿಸಬಹುದು. ಇದನ್ನು 1932ರ ಭಾರತೀಯ ಪಾರ್ಟನರ್‌ಶಿಪ್‌ ಕಾಯಿದೆಯಡಿಯಲ್ಲಿ ನೋಂದಣಿ ಮಾಡಿಸಬೇಕು. ಆ ಪತ್ರದಲ್ಲಿ ಸೂಚಿಸಿರುವಂತೆ ಎಲ್ಲ ಮಾಲೀಕರಿಗೂ ಆದಾಯ ಮತ್ತು ಗಳಿಕೆಯಲ್ಲಿ ಸಮಪಾಲು ನೀಡಬಹುದು ಅಥವಾ ಸರಾಸರಿ ಇಂತಿಷ್ಟು ಎಂದು ಹಂಚಿಕೊಳ್ಳಬಹುದು. ಇಂಥ ಪ್ರಕಾಶನ ಸಂಸ್ಥೆಗಳು ಕಡಿಮೆ.

ಸಹಕಾರಿ ಸಂಘಗಳು ಮತ್ತು ನೋಂದಾಯಿತ ಟ್ರಸ್ಟ್‌ಗಳು: ಈ ಸಂಸ್ಥೆಗಳು 1867ರ ಸೊಸೈಟಿ ರಿಜಿಸ್ಟ್ರೇಷನ್‌ ಕಾಯಿದೆ ಪ್ರಕಾರ ನೋಂದಣಿ ಮಾಡಿಸಬೇಕು. ಲೇಖಕ-ಪ್ರಕಾಶಕರ ಸಹಕಾರಿ ಸಂಘ (ಹಿಂದೆ ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ ನಿಯಮಿತ, ಬೆಂಗಳೂರು ಹಲವು ಪುಸ್ತಕಗಳನ್ನು ಪ್ರಕಟಿಸಿದ ಇತಿಹಾಸ ನಮ್ಮ ಮುಂದಿದೆ, ಈಗ ಗುಲ್ಬರ್ಗಾದಲ್ಲಿ ಇಂಥದೊಂದು ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ) ಹಾಗೆಯೇ ಹಲವು ಟ್ರಸ್ಟ್‌ಗಳು ಕೂಡ ಪುಸ್ತಕಗಳನ್ನು ಪ್ರಕಟಿಸುತ್ತಿವೆ. ಯಾವುದೇ ಲಾಭದ ಉದ್ದೇಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕಾಗುವುದು. ಅಕ್ಷರ ಪ್ರಕಾಶನವು ಅಕ್ಷರ ಟ್ರಸ್ಟ್‌ ನ ಒಂದು ಭಾಗ, ಮುದ್ದಪ್ಪ ಸ್ಮಾರಕ ಟ್ರಸ್ಟ್‌, ಅನೇಕ ನಾರಾಯಣ ಜೋಶಿ ಚಾರಿಟಬಲ್‌ ಟ್ರಸ್ಟ್‌ ಮುಂತಾದವುಗಳು ಕೂಡ ಅಪುಸ್ತಕ ಪ್ರಕಟನೆಯನ್ನು ತಮ್ಮ ಕಾರ್ಯಯೋಜನೆಯಲ್ಲಿ ಸೇರಿಸಿಕೊಂಡಿವೆ.

ಪ್ರಕಾಶನೋದ್ಯಮ: ಕಂಪೆನಿ ಕಾಯಿದೆ 1867ರ ಪ್ರಕಾರ ಪ್ರಕಾಶನ ಸಂಸ್ಥೆಗಳನ್ನು ಪ್ರçವೇಟ್‌ ಲಿಮಿಟೆಡ್‌ ಕಂಪೆನಿಗಳಾಗಿ ನೋಂದಾಯಿಸಬಹುದಾಗಿದ್ದು, ಹಲವು ರಿಯಾಯಿತಿ ಸೌಲಭ್ಯಗಳನ್ನು ಸರ್ಕಾರವು ಒದಗಿಸುತ್ತದೆ. ಕರ್ನಾಟಕದಲ್ಲಿ ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈ ಲಿ., ಸಪ್ನಾ ಬುಕ್‌ ಹೌಸ್‌ ಪ್ರೈ ಲಿ., ಆಕೃತಿ ಬುಕ್ಸ್‌ ಪ್ರೈ ಲಿ. ಮುಂತಾದವು ಈ ಕಾಯಿದೆಯಡಿಯಲ್ಲಿ ನೋಂದಾಯಿತವಾದ ಪ್ರಕಾಶನ ಸಂಸ್ಥೆಗಳು.

ಸರ್ಕಾರಿ ಪ್ರಕಟನಾ ಮಂದಿರಗಳು: ಸರ್ಕಾರಿ ಸಾಮ್ಯದ ಸಂಘಸಂಸ್ಥೆಗಳು, ವಿಶ್ವವಿದ್ಯಾನಿಲಯಗಳ ಪ್ರಸಾರಾಂಗಗಳು ತಮ್ಮ ಉದ್ದೇಶಕ್ಕೆ ಅನುಗುಣವಾಗಿ ಪುಸ್ತಕಗಳನ್ನು ಪ್ರಕಟಿಸುತ್ತವೆ. ಸರ್ಕಾರದ ಅಥವಾ ಆಯಾ ವಿಶ್ವವಿದ್ಯಾನಿಲಯಗಳ ನಿಯಮಗಳ ಚೌಕಟ್ಟಿನಲ್ಲಿ ಪುಸ್ತಕಗಳ ಪ್ರಕಟನೆ ಮತ್ತು ಮಾರಾಟ ವ್ಯವಸ್ಥೆಯನ್ನು ನಿರ್ವಹಿಸುತ್ತವೆ. ಈ ಸಂಸ್ಥೆಗಳಿಗೂ ಮಾರಾಟ ಕಾಯಿದೆ ಹಾಗೂ ಇನ್ನಿತರ ನೋಂದಣಿ ಪತ್ರಗಳನ್ನು ಸಲ್ಲಿಸುವಲ್ಲಿ ವಿನಾಯಿತಿ ಇದೆ. ಕೆಲವೆಡೆ ಈ ಸಂಸ್ಥೆಗಳು ಪ್ರಕಟಿಸುವ ಪುಸ್ತಕಗಳನ್ನು ಯಾವುದೇ ಆಯ್ಕೆ ಪ್ರಕ್ರಿಯೆಗೆ ಒಳಪಡಿಸದೆ ಆಯಾ ಗ್ರಂಥಪಾಲಕರು ಖರೀದಿಸಲೂ ಅವಕಾಶವಿದೆ. ಹಂಪಿ ವಿಶ್ವವಿದ್ಯಾಲಯ, ಮೈಸೂರು ಪ್ರಸಾರಾಂಗಗಳು, ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಮುಂತಾದವುಗಳ ಪ್ರಕಟನೆಗಳು ತುಂಬ ಜನಪ್ರಿಯವಾಗಿವೆ.

ಹಣಕಾಸು ಮತ್ತು ತೆರಿಗೆ ಕಾಯಿದೆಗಳು: ಮೇಲ್ಕಂಡ ಎಲ್ಲ ಪ್ರಕಾಶನ ಸಂಸ್ಥೆಗಳು ತಮ್ಮ ಆದಾಯ ಮತ್ತು ವೆಚ್ಚದ ಲೆಕ್ಕಗಳನ್ನು ಸಮರ್ಪಕ ರೀತಿಯಲ್ಲಿ ದಾಖಲಿಸಿ ಪ್ರತಿವರ್ಷ ಸಲ್ಲಿಸುವುದು ಕಡ್ಡಾಯವಾಗುತ್ತದೆ. ಸರ್ಕಾರಿ ಪ್ರಕಾಶನ ಸಂಸ್ಥೆಗಳನ್ನು ಉಳಿದಂತೆ ಉಳಿದ ಪ್ರಕಾಶನ ಸಂಸ್ಥೆಗಳು (ಕಂಪೆನಿಗಳು, ಸಹಕಾರ ಸಂಘಗಳು)ಆದಾಯ ತೆರಿಗೆ ಕಾಯಿದೆಯಂತೆ ಪ್ರತಿವರ್ಷ ಮಾರ್ಚ್‌ ಅಂತ್ಯಕ್ಕೆ ವಹಿವಾಟಿನ ವಿವರಗಳನ್ನು ತಯಾರಿಸಿ, ಆಡಿಟ್‌ ಮಾಡಿಸಿ, ಪ್ರಮಾಣೀಕರಿಸಿ ಸಂಬಂಧಿಸಿದ ಅಧಿಕಾರಿಗಳಿಗೆೆ ಸಲ್ಲಿಸಬೇಕಾಗುತ್ತದೆ. 

– ನ. ರವಿಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next