Advertisement

ಇಂದು, ನಾಳೆ ಸೂಪರ್‌ ಮೂನ್‌

02:20 AM Apr 07, 2020 | Sriram |

ಉಡುಪಿ: ಆಗಸದಲ್ಲಿ ಎ. 7ಮತ್ತು 8ರಂದು ರಾತ್ರಿ ವಿಸ್ಮಯ ಗೋಚರಿಸಲಿದೆ. ವರ್ಷದಲ್ಲೇ ಅತೀ ದೊಡ್ಡ ಚಂದ್ರ ಅಂದು ಆಗಸದಲ್ಲಿ ಗೋಚರಿಸಲಿದ್ದಾನೆ. ಭಾರತದಲ್ಲಿ 8ರಂದು ಹುಣ್ಣಿಮೆ. ಆದರೆ ಚಂದ್ರ ಭೂಮಿಗೆ ಅತೀ ಸಮೀಪದಲ್ಲಿ ಬರುವುದು 8ರ ಬೆಳಗ್ಗೆ 8 ಗಂಟೆಗೆ. ಹಾಗಾಗಿ 7 ಹಾಗೂ 8ರ ರಾತ್ರಿ ಹುಣ್ಣಿಮೆ ಚಂದ್ರ ಮಾಮೂಲಿ ಕಾಣುವುದಕ್ಕಿಂತ ಸುಮಾರು 15 ಅಂಶ ದೊಡ್ಡದಾಗಿ ಕಾಣಿಸಲಿದ್ದಾನೆ. ಈ ವರ್ಷ ಮಾರ್ಚ್‌, ಎಪ್ರಿಲ್, ಮೇ ಅನಂತರ ಸೆಪ್ಟಂಬರ್‌, ಅಕ್ಟೊಬರ್‌ ಹಾಗೂ ನವೆಂಬರ್‌ಗಳಲ್ಲಿ ಹುಣ್ಣಿಮೆ ಸೂಪರ್‌ ಮೂನ್‌ಗಳಾದರೂ ನಾಳಿನದ್ದು ಅತೀ ಸಮೀಪ ದರ್ಶನವಾಗಿರುತ್ತದೆ ಎಂದು ಭೌತಶಾಸ್ತ್ರಜ್ಞ ಡಾ| ಎ.ಪಿ. ಭಟ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next