Advertisement

ಇಂದಿನಿಂದ ಮಾ. 29ರವರೆಗೆ ರೈಲು ಸಂಚಾರ ವ್ಯತ್ಯಯ

12:19 AM Mar 23, 2022 | Team Udayavani |

ಬೆಂಗಳೂರು: ಸಾಮರ್ಥ್ಯ ಮತ್ತು ಸುರಕ್ಷಿತೆಯನ್ನು ಸುಧಾರಿಸಲು ಹಾಗೂ ರೈಲ್ವೇ ಮೂಲಸೌಕರ್ಯ ವೃದ್ಧಿ ಹಿನ್ನೆಲೆ ಕೆಲವು ಮಾರ್ಗಗಳಲ್ಲಿ ದ್ವಿಪಥ ಹಾಗೂ ವಿದ್ಯುದೀಕರಣಗೊಳಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದು ಮುಂದಿನ ಎಂಟು ದಿನಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನೈರುತ್ಯ ರೈಲ್ವೆಯ ಪ್ರಯಾಣಿಕರ ಸೌಕರ್ಯ ವಿಭಾಗದ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ|ಅನೂಪ್‌ ದಯಾನಂದ್‌ ಸಾಧು ತಿಳಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 23ರಿಂದ 29ರವರೆಗೆ ಯಲಹಂಕದ ಹಿಂದೂಪುರ-ಪೆನುಕೊಂಡ, ಹೊಸದುರ್ಗ-ಚಿಕ್ಕಜಾಜೂರು, ಅಳ್ನಾವರ-ಅಂಬೆವಾಡಿ, ಯಲವಿಗಿ -ಸವಣೂರು, ಸವಣೂರು-ಹಾವೇರಿ, ಗದಗ- ಹೊಳೆಆಲೂರು, ಸೌಂಶಿ-ಯಲವಿಗಿ, ಕುಡಚಿ-ಘಟಪ್ರಭಾ, ಲೋಂಡಾ-ತಿನೈಘಾಟ್‌ ಮಾರ್ಗದ ರೈಲು ಹಳಿಗಳಲ್ಲಿ ಕೆಲವು ಕಡೆ ದ್ವಿಪಥ ಮಾರ್ಗ ಹಾಗೂ ಇನ್ನೂ ಕೆಲವು ಕಡೆ ವಿದ್ಯುದೀಕರಣಗೊಳಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಹತ್ತು ರೈಲುಗಳನ್ನು ರದ್ದುಗೊಳಿಸಲಾಗಿದ್ದು, 14 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರಿಗೆ ಹಣ ವಾಪಾಸು ನೀಡಲಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next