Advertisement

ಇಂದು ಆಯುಧ ಪೂಜೆ ಸಂಭ್ರಮ

07:51 AM Oct 18, 2018 | |

ಬೆಂಗಳೂರು: ಶರನ್ನವರಾತ್ರಿಯ 9ನೇ ದಿನವಾದ ಗುರುವಾರ ನಾಡಿನೆಲ್ಲೆಡೆ ಆಯುಧ ಪೂಜೆ ನೆರವೇರಿಸಲಾಗುವುದು. ಮೈಸೂರಲ್ಲಿ ಅಂಬಾವಿಲಾಸ ಅರಮನೆಯ ಕಲ್ಯಾಣಮಂಟಪದ ಆವರಣದಲ್ಲಿ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌
ಅವರು ಆಯುಧ ಪೂಜೆ ನೆರವೇರಿಸಲಿದ್ದಾರೆ. ಅರಸರ ಕಾಲದ ಖಾಸಾ ಆಯುಧಗಳು, ವಾಹನಗಳು ಸೇರಿದಂತೆ ಇನ್ನಿತರ ವಸ್ತುಗಳಿಗೆ ಯದುವೀರ್‌ ಅವರು ಪೂಜೆ ಸಲ್ಲಿಸಲಿದ್ದಾರೆ.

Advertisement

ಮೈಸೂರಲ್ಲಿ ಜಂಬೂಸವಾರಿ: ಶುಕ್ರವಾರ ಮಧ್ಯಾಹ್ನ 2.30ರಿಂದ 3.16ರವರೆಗೆ ಸಲ್ಲುವ ಕುಂಭ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ನಂದೀಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತಿಕುಮಾರಸ್ವಾಮಿ ವಿಜಯದಶಮಿ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಬಳಿಕ, ಮಧ್ಯಾಹ್ನ 3.40ರಿಂದ 4.10ರವರೆಗೆ ಸಲ್ಲುವ ಕುಂಭ ಲಗ್ನದಲ್ಲಿ ಅರಮಒಳಾವರಣದಲ್ಲಿ ದಸರಾ ಗಜಪಡೆಯ ಕ್ಯಾಪ್ಟನ್‌
ಅರ್ಜುನ, 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ಹೊತ್ತು ತರುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಇತರರು ಹಾಜರಿರುತ್ತಾರೆ. ರಾತ್ರಿ 7 ಗಂಟೆಗೆ ಬನ್ನಿಮಂಪಟದಲ್ಲಿ ಪಂಜಿನ ಕವಾಯತು ಆರಂಭವಾಗಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ, ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ಬಳಿಕ, ಸುಮಾರು 2 ಗಂಟೆಗಳ ಕಾಲ ಸಾಹಸಮಯ, ರೋಮಾಂಚಕಾರಿ ಸಾಹಸ ಪ್ರದರ್ಶನ ನಡೆಯಲಿದ್ದು, ಇದರೊಂದಿಗೆ ಹತ್ತು ದಿನಗಳ ಮೈಸೂರು ದಸರೆಗೆ ತೆರೆ ಬೀಳಲಿದೆ. 

ಕೊಲ್ಲೂರಲ್ಲಿ ನಾಳೆ ಮಕ್ಕಳಿಗೆ ಅಕ್ಷರಾಭ್ಯಾಸ: ಈ ಮಧ್ಯೆ, ಕೊಲ್ಲೂರು ಶ್ರಿ ಮೂಕಾಂಬಿಕಾ ದೇವಾಲಯದಲ್ಲಿ ವಿಜಯದಶಮಿ ದಿನವಾದ ಶುಕ್ರವಾರ ಮಕ್ಕಳಿಗೆ ಅಕ್ಷರಾಭ್ಯಾಸ ನೆರವೇರಿಸಲಾಗುವುದು. 

ಶಾರದಾಂಬೆಗೆ ಮೋಹಿನಿ ಅಲಂಕಾರ: ಈ ಮಧ್ಯೆ, ಶೃಂಗೇರಿ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಬುಧವಾರ ಶಾರದಾಂಬೆಗೆ ಮೋಹಿನಿ ಅಲಂಕಾರ ಮಾಡಲಾಗಿತ್ತು. ಶಾರದೆಯು ಕೈಯಲ್ಲಿ ಅಮೃತ ಕಲಶ ಹಿಡಿದು, ಭಕ್ತರನ್ನು ಅನುಗ್ರಹಿಸಿದಳು. ಬೆಳಗ್ಗೆ ಉಭಯ ಜಗದ್ಗುರುಗಳಾದ ಶ್ರೀ ಭಾರತೀರ್ಥ ಸ್ವಾಮೀಜಿಗಳು ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಗುರುನಿವಾಸದಲ್ಲಿ ಆಹಿ°ಕ ಕಾರ್ಯಕ್ರಮವನ್ನು ಪೂರೈಸಿದ ನಂತರ, ಶ್ರೀ ಚಂದ್ರಮೌಳೇಶ್ವರ ಪೂಜೆ, ಶ್ರೀ ಚಕ್ರಕ್ಕೆ ದೈನಂದಿನ ಪೂಜೆ ನೆರವೇರಿಸಿದರು. ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ಶ್ರೀ ಶಾರದಾ ದೇಗುಲಕ್ಕೆ ಆಗಮಿಸಿದರು. ಶಾರದೆಯ ಸನ್ನಿಧಿಯಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾದಿಗಳು ನಡೆದವು. ಮಠಕ್ಕೆ ಆಗಮಿಸುವ ಮೊದಲು ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಗುರುನಿವಾಸದಲ್ಲಿ ಭಕ್ತರಿಗೆ ಆಶೀರ್ವದಿಸಿ ನಂತರ ಶ್ರೀಮಠಕ್ಕೆ ಆಗಮಿಸಿದರು. ತುಂಗಾ ನದಿಯಲ್ಲಿ ಗಂಗಾ ಪೂಜೆ ನೆರವೇರಿಸಿದರು.

ಮಂತ್ರಾಲಯದಲ್ಲಿ ವಿಶೇಷ ಪೂಜೆ
ದುರ್ಗಾಷ್ಟಮಿ ನಿಮಿತ್ತ ಮಂತ್ರಾಲಯದ ಅಧಿದೇವತೆ ಮಂಚಾಲಮ್ಮ ದೇವಿಗೆ ಬುಧವಾರ ವಿಶೇಷ ಪೂಜೆ ನೆರವೇರಿಸಲಾಯಿತು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ಈ ನಿಮಿತ್ತ ದೇವಿಯನ್ನು ವಿಶೇಷ ಹೂವು, ಹಣ್ಣುಗಳಿಂದ ಅಲಂಕರಿಸಲಾಗಿತ್ತು. ನಂತರ ಮಠದ ಪ್ರಾಂಗಣದಲ್ಲಿ ಹೋಮ ಜರುಗಿಸಲಾಯಿತು. 

Advertisement

ಕುದ್ರೋಳಿಯಲ್ಲಿ ನಾಳೆ ಶೋಭಾಯಾತ್ರೆ
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ 10ಕ್ಕೆ ವಾಗೀಶ್ವರಿ ದುರ್ಗಾಹೋಮ, ಮಧ್ಯಾಹ್ನ 1ಕ್ಕೆ ಶಿವಪೂಜೆ, 1.15ರಿಂದ ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ, ಸಂಜೆ 4ರಿಂದ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ನಡೆಯಲಿದೆ. ಮಧ್ಯಾಹ್ನ ರಥಾರೋಹಣ, ರಾತ್ರಿ 7.30ಕ್ಕೆ ರಥೋತ್ಸವ ಜರುಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next