Advertisement

ಇಂದು ಸೂರ್ಯ ಕಿರಣ್‌ ಪ್ರದರ್ಶನ

06:23 AM Feb 23, 2019 | Team Udayavani |

ಬೆಂಗಳೂರು: ಈ ಬಾರಿಯ ಏರೋ ಇಂಡಿಯಾ ಪ್ರದರ್ಶನ ಆರಂಭದ ದಿನದಿಂದಲೂ ಬಾನಂಗದಿಂದ ಮರೆಯಾಗಿದ್ದ ಸೂರ್ಯ ಕಿರಣ್‌ ತಂಡ ಶನಿವಾರ ಪ್ರದರ್ಶನ ನೀಡಲಿದೆ. ಸಂಜೆ 4:30ಕ್ಕೆ ಸೂರ್ಯ ಕಿರಣ್‌ತಂಡದ ಏಳು ಜೆಟ್‌ ಟ್ರೇನರ್‌ (ತರಬೇತಿ ಯುದ್ಧ ವಿಮಾನ)ಗಳು 14 ನಿಮಿಷಗಳ ಕಾಲ ಹಾರಾಟ ನಡೆಸುವ ಮೂಲಕ ಪ್ರೇಕ್ಷಕರನ್ನು ರಂಜಿಸಲಿವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

Advertisement

ಏರೋ ಇಂಡಿಯಾ-2019ರ ಉದ್ಘಾಟನೆಯ ಮುನ್ನಾ ದಿನ (ಫೆ.19ರಂದು) ಅಭ್ಯಾಸ ನಡೆಸುವ ಸಂದರ್ಭದಲ್ಲಿ ಸೂರ್ಯ ಕಿರಣ್‌ ತಂಡದ ಒಂಬತ್ತು ವಿಮಾನಗಳ ಪೈಕಿ ಎರಡು ವಿಮಾನಗಳ ನಡುವೆ ಘರ್ಷಣೆ ಸಂಭವಿಸಿ ಪಥನಗೊಂಡಿದ್ದವು. ಘಟನೆಯಲ್ಲಿ ಪೈಲಟ್‌ ಒಬ್ಬರು ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಮೊದಲ ಮೂರು ದಿನ ಸೂರ್ಯ ಕಿರಣ್‌ ತಂಡ ಪ್ರದರ್ಶನ ನೀಡಿರಲಿಲ್ಲ. ಎರಡು ವಿಮಾನಗಳು ಪಥನಗೊಂಡಿರುವ ಕಾರಣ, ಶನಿವಾರ ಏಳು ಜೆಟ್‌ ಟ್ರೇನರ್‌ಗಳಷ್ಟೇ ಪ್ರದರ್ಶನ ನೀಡಲಿವೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next