Advertisement

ಇಂದು ದ್ವಿತೀಯ ಟಿ20 ಪಂದ್ಯ

08:40 AM Aug 01, 2022 | Team Udayavani |

ಬಸೆಟರ್‌ (ಸೇಂಟ್‌ ಕಿಟ್ಸ್‌ ಆ್ಯಂಡ್‌ ನೆವಿಸ್‌): ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಮುಖಾಮುಖಿ ಬಳಿಕ ಟಿ20 ಸರಣಿ ಯಲ್ಲೂ ಪ್ರಾಬಲ್ಯ ಸ್ಥಾಪಿಸಲು ಹೊರಟಿರುವ ಭಾರತ, ಸೋಮವಾರ ದ್ವಿತೀಯ ಪಂದ್ಯವನ್ನು ಆಡಲಿದೆ. ಗೆಲುವಿನ ಲಯವನ್ನು ಕಾಯ್ದುಕೊಂಡು ಸರಣಿ ಮುನ್ನಡೆ ಸಾಧಿಸು ವುದು ರೋಹಿತ್‌ ಪಡೆಯ ಯೋಜನೆ.

Advertisement

ಎರಡೂ ತಂಡಗಳ ಈಗಿನ ಬಲಾಬಲವನ್ನು ಗಮನಿಸಿದರೆ ಟೀಮ್‌ ಇಂಡಿಯಾದ ಮೇಲುಗೈ ಸ್ಪಷ್ಟವಾಗುತ್ತದೆ. ಕೆರಿಬಿಯನ್ನರ ಪಡೆ ಸಂಪೂರ್ಣ ಶರಣಾದಂತೆ ಗೋಚರಿಸುತ್ತಿದೆ. ಈವರೆಗಿನ ಸತತ 4 ಸೋಲಿನಿಂದ ಅದು ದಿಕ್ಕೆಟ್ಟಿದೆ. ಆದರೆ ಟಿ20 ಸರಣಿ 5 ಪಂದ್ಯಗಳನ್ನು ಹೊಂದಿರುವುದರಿಂದ ಪೂರಣ್‌ ಪಡೆಯ ತಿರುಗೇಟಿಗೆ ಹೆಚ್ಚಿನ ಅವಕಾಶವಿದೆ. ಆದರೆ ಇದಕ್ಕೆ ವಿಂಡೀಸ್‌ ಶಕ್ತವಾಗಿದೆಯೇ ಎಂಬುದಷ್ಟೇ ಪ್ರಶ್ನೆ.

ಮೇಲ್ನೋಟಕ್ಕೆ ವೆಸ್ಟ್‌ ಇಂಡೀಸ್‌ ಟಿ20 ಸ್ಪೆಷಲಿಸ್ಟ್‌ಗಳ ತಂಡವಾಗಿ ಗೋಚರಿಸುತ್ತಿದೆ. ಆದರೆ ಮೊದಲ ಪಂದ್ಯದಲ್ಲಿ ಆಡಿದ ರೀತಿ ಯನ್ನು ಗಮನಿಸಿದಾಗ ಅವರಿಗಲ್ಲ, ಎದುರಾ ಳಿಗೇ ಸಂಕಟವಾಗುತ್ತದೆ. ಮೊದಲ ಪಂದ್ಯದ 191 ರನ್‌ ಚೇಸಿಂಗ್‌ ವೇಳೆ 8 ವಿಕೆಟಿಗೆ ಕೇವಲ 122 ರನ್‌ ಮಾಡಿತ್ತು.

ಭಾರತ ಬ್ಯಾಟಿಂಗ್‌, ಬೌಲಿಂಗ್‌ ವಿಭಾಗಗಳೆರಡರಲ್ಲೂ ಪರಿಪೂರ್ಣ ಪ್ರದರ್ಶನ ನೀಡಿ ಗಮನ ಸೆಳೆದಿತ್ತು.ಇದೇ ಲಯದಲ್ಲಿ ಸಾಗಿದರೆ ಭಾರತದ ಮತ್ತೂಂದು ಗೆಲುವನ್ನು ನಿರೀಕ್ಷಿಸಲಡ್ಡಿಯಿಲ್ಲ. ಆದರೆ ಮೊದಲ ಮುಖಾಮುಖಿಯಲ್ಲಿ ಶ್ರೇಯಸ್‌ ಅಯ್ಯರ್‌ ಖಾತೆ ತೆರೆಯದೆ ನಿರ್ಗಮಿ ಸಿದ್ದರು. ದೀಪಕ್‌ ಹೂಡಾ, ಸಂಜು ಸ್ಯಾಮ್ಸನ್‌ ಇರುವಾಗ ಅಯ್ಯರ್‌ ಅವರನ್ನು ಆಡುವ ಬಳಗಕ್ಕೆ ಸೇರಿಸಿ ಕೊಂಡದ್ದೇ ಅಚ್ಚರಿ ಎನಿಸಿತ್ತು. ಹೀಗಾಗಿ ಈ ಕ್ರಮಾಂಕದಲ್ಲಿ ಬದಲಾವಣೆ ಯೊಂದು ಸಂಭವಿಸಬಹುದು.

ಭಾರತದ ಬೌಲಿಂಗ್‌ ಯೂನಿಟ್‌, ಅದರಲ್ಲೂ ತ್ರಿವಳಿ ಸ್ಪಿನ್‌ ವಿಭಾಗ ಘಾತಕ ಪ್ರದರ್ಶನ ನೀಡಿತ್ತು. ಸ್ಪಿನ್ನರ್‌ಗಳನ್ನು ಸಮರ್ಥವಾಗಿ ನಿಭಾಯಿಸಿದರಷ್ಟೇ ವೆಸ್ಟ್‌ ಇಂಡೀಸ್‌ ಮೇಲುಗೈ ಸಾಧಿಸೀತು.

Advertisement

ಸ್ಥಳ: ಬಸೆಟರ್‌
ಆರಂಭ: 8.30
ಪ್ರಸಾರ: ಡಿಡಿ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next