Advertisement
ಓವಲ್‌ನಲ್ಲಿ ಇಂಗ್ಲೆಂಡ್ 110ಕ್ಕೆ ಕುಸಿದುದರಿಂದ ಭಾರತದ ಬ್ಯಾಟಿಂಗ್ ಸರದಿಯ ಮೇಲೆ ಯಾವುದೇ ಒತ್ತಡ ಬೀಳಲಿಲ್ಲ. ರೋಹಿತ್ ಶರ್ಮ-ಶಿಖರ್ ಧವನ್ ಇಬ್ಬರೇ ಸೇರಿ ಈ ಮೊತ್ತವನ್ನು ಬೆನ್ನಟ್ಟಿದರು. ಆದರೆ ಲಾರ್ಡ್ಸ್‌ನಲ್ಲಿ ಪರಿಸ್ಥಿತಿ ಉಲ್ಟಾ ಹೊಡೆಯಿತು. ಇಲ್ಲಿ ಲಭಿಸಿದ್ದು 247 ರನ್ ಟಾರ್ಗೆಟ್. ಇದೇನೂ ದೊಡ್ಡ ಸವಾಲಲ್ಲ. ಆದರೆ ಇಂಗ್ಲೆಂಡ್ ಬೌಲರ್ ತಿರುಗಿ ಬಿದ್ದರು; ರೀಸ್ ಟಾಪ್ಲಿ ಟಾಪ್ ಕ್ಲಾಸ್ ಬೌಲಿಂಗ್ ಪ್ರದರ್ಶಿಸಿದರು. ಭಾರತದ ಬ್ಯಾಟಿಂಗ್ ಲಯ ತಪ್ಪಿತು. ಪರಿಣಾಮ, 100 ರನ್ನುಗಳ ದೊಡ್ಡ ಸೋಲು.
ಎಚ್ಚರಿಕೆಯಿಂದ ಕೂಡಿದ ಆಕ್ರಮಣಕಾರಿ ಹಾಗೂ ನಿರ್ಭೀತ ಆಟವೊಂದೇ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರವಾಗಬಲ್ಲದು. ನಾಯಕ ರೋಹಿತ್ ಶರ್ಮ ಮುನ್ನುಗ್ಗಿ ಬಾರಿಸತೊಡಗಿದರೆ ಟೀಮ್ ಇಂಡಿಯಾದ ಅರ್ಧದಷ್ಟು ಬ್ಯಾಟಿಂಗ್ ಸಮಸ್ಯೆಗೆ ಪರಿಹಾರ ಲಭಿಸುತ್ತದೆ. ರೋಹಿತ್ ಓವಲ್‌ನಲ್ಲಿ ಸಿಡಿದ ಪರಿಣಾಮ ಟೀಮ್ ಇಂಡಿಯಾಕ್ಕೆ ನೋಲಾಸ್ ಜಯ ಒಲಿಯಿತು. ಲಾರ್ಡ್ಸ್ ನಲ್ಲಿ ರೋಹಿತ್ ಸೊನ್ನೆ ಸುತ್ತಿದರು, ಸತತ 4 ಓವರ್ ಮೇಡನ್ ಆಯಿತು, ಭಾರತದ ಬ್ಯಾಟಿಂಗ್ ಹಳಿ ತಪ್ಪಿತು. ಒಂದರಲ್ಲಿ 10 ವಿಕೆಟ್ ಜಯವಾದರೆ, ಇನ್ನೊಂದರಲ್ಲಿ 100 ರನ್ ಸೋಲು. ತಂಡವೊಂದರ ಅಸ್ಥಿರ ಆಟಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ.
Related Articles
Advertisement
ಅರ್ಧ ಶತಕ ಬಾರಿಸದ ಇಂಗ್ಲೆಂಡ್!ಎರಡೂ ಪಂದ್ಯಗಳಲ್ಲಿ ಭಾರತದ ಬೌಲಿಂಗ್ ಪರಿಣಾಮಕಾರಿಯಾ ಗಿಯೇ ಇತ್ತು. ವಿಶ್ವ ಚಾಂಪಿಯನ್ನರಿಗೆ ಸರಣಿಯಲ್ಲಿ ಈವರೆಗೆ ಒಂದೂ ಅರ್ಧ ಶತಕ ಬಾರಿಸಲು ಸಾಧ್ಯವಾಗಲಿಲ್ಲ ಎಂಬುದು ಭಾರತದ ಬೌಲಿಂಗ್ ಪಡೆಯ ಹೆಗ್ಗಳಿಕೆಯೇ ಆಗಿದೆ. ಆಂಗ್ಲರ ಬ್ಯಾಟಿಂಗ್ ಸರದಿಯನ್ನೊಮ್ಮೆ ನೋಡಿ… 7ನೇ ಕ್ರಮಾಂಕದ ತನಕ ಬಿಗ್ ಹಿಟ್ಟರ್‌ಗಳೇ ತುಂಬಿದ್ದಾರೆ. ರಾಯ್, ಬೇರ್‌ಸ್ಟೊ, ರೂಟ್, ಸ್ಟೋಕ್ಸ್, ಬಟ್ಲರ್, ಲಿವಿಂಗ್‌ಸ್ಟೋನ್ ಮತ್ತು ಅಲಿ. ಇವರಲ್ಲಿ 2-3 ಮಂದಿ ಕ್ರೀಸ್ ಆಕ್ರಮಿಸಿಕೊಂಡರೂ ಸಾಕು, ಮುನ್ನೂರರ ಮೊತ್ತಕ್ಕೇನೂ ಕೊರತೆ ಇಲ್ಲ. ಭಾರತ ಈ ಎಚ್ಚರಿಕೆಯಲ್ಲೇ ಬೌಲಿಂಗ್ ಸಂಘಟಿಸಬೇಕಿದೆ. ಇಂದು 3ನೇ ಏಕದಿನ
ಸ್ಥಳ: ಮ್ಯಾಂಚೆಸ್ಟರ್
ಆರಂಭ: 3.30
ಪ್ರಸಾರ: ಸೋನಿ ಸ್ಪೋರ್ಟ್ಸ್