ಕುಂಬಳೆ: ಮಂಜೇಶ್ವರ ಬಳಿಯ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಲಿರುವ ಮಹಾ ಮೃತ್ಯುಂಜಯ ಯಾಗ ಮತ್ತು ಮಹಾಸರಸ್ವತಿ ಯಾಗದಂಗವಾಗಿ ವೇ|ಮೂ| ಬ್ರಹ್ಮಶ್ರೀ ದಿನೇಶ ಕೃಷ್ಣ ತಂತ್ರಿ ವರ್ಕಾಡಿ ಮತ್ತು ವೇ|ಮೂ| ಬ್ರಹ್ಮಶ್ರೀ ಸುಬ್ರಹ್ಮಣ್ಯ ಬಳ್ಳಕುರಾಯ ತಂತ್ರಿ ಕೆಮ್ಮಿಂಜೆ ಪುತ್ತೂರು ಅವರ ನೇತೃತ್ವದಲ್ಲಿ ರವಿವಾರದಂದು ಬೆಳಗ್ಗೆ ಗಣಪತಿ ಹವನ, ಅಶ್ವತೊಪನಯನ, ವಿವಾಹ, ತಂಬಿಲ ಸೇವೆ ನಡೆಯಿತು. ಸಂಜೆ ಯಾಗಮಂಟಪ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ನಡೆಯಿತು.
ಶ್ರೀ ಮಹಾಲಿಂಗೇಶ್ವರ ವಿದ್ಯಾನಿಕೇತನದ ನೂತನ ಕಟ್ಟಡ ಉದ್ಘಾಟನೆ ಮತ್ತು ಸಾರ್ವಜನಿಕ ಸಮಾರಂಭ ಜರಗಿತು.
ಎ. 3ರಂದು ಸೋಮವಾರ ಬೆಳಗ್ಗೆ ಮಹಾ ಮೃತ್ಯುಂಜಯ ಹಾಗೂ ಮಹಾಸರಸ್ವತೀ ಯಾಗವು ಪ್ರಾರಂಭವಾಗಿ ಮಧ್ಯಾಹ್ನ 12 ಗಂಟೆಗೆ ಪೂರ್ಣಹುತಿಗೊಳ್ಳಲಿದೆ. ಮಧ್ಯಾಹ್ನ 1ರಿಂದ ದಾಮೋದರ ಶೆಟ್ಟಿ ಕುಂಜತ್ತೂರು ಬಳಗದವರಿಂದ ಭಕ್ತಿಭಾವ-ಗಾನಯಾನ, ಸಂಜೆ 4ರಿಂದ ಧಾರ್ಮಿಕ ಸಭೆ ನಡೆಯಲಿದ್ದು ಒಡಿ ಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಕರ್ನಾಟಕ ಧಾರ್ಮಿಕ ಪರಿಷತ್ತಿನ ಸದಸ್ಯ ಪಂಜ ಭಾಸ್ಕರ್ ಭಟ್, ಡಾ| ಎಂ. ಜಯಪಾಲ ಶೆಟ್ಟಿ, ಚಲನಚಿತ್ರ ನಟ ವಿಜಯ ರಾಘವೇಂದ್ರ, ಕೊಲ್ಲೂರು ಶ್ರೀ ಮೂಕಾಂಬಿಕ ಕ್ಷೇತ್ರದ ಮಾಜಿ ಮೊಖೆ¤àಸರ ಬಿ.ಎಂ. ಸುಕುಮಾರ ಶೆಟ್ಟಿ, ಮುಂಬಯಿಯ ಘನ್‌ಸೋಲಿ ಶ್ರೀ ಮೂಕಾಂಬಿಕಾ ಕ್ಷೇತ್ರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಯು.ಪಿ.ಸಿ.ಎಲ್. ಉಡುಪಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಆಳ್ವ, ಬಿ. ವಸಂತ ಪೈ ಬದಿಯಡ್ಕ, ಚಂದ್ರಹಾಸ್ ರೈ ಬೊಳ್ನಾಡ್‌ಗುತ್ತು, ಮಹಾರಾಷ್ಟ್ರದ ಬದ್ಲಾಪುರ್ ಶಿವಸೇನಾ ನಗರ ಪ್ರಮುಖ್ ವಾಮನ ಬರಾರ್ಕು ಮ್ಹಾತ್ರೆ ಮುಂತಾದ ಗಣ್ಯರು ಭಾಗವಹಿಸಲಿರುವರು.
ಸಂಜೆ 6ರಿಂದ ಭಜನಾ ಸಂಕೀರ್ತನೆ,ರಾತ್ರಿ 7.30ರಿಂದ ಶ್ರೀ ಮಹಾಗಣಪತಿ ದೇವರಿಗೆ ಹಾಗೂ ಮಹಾಲಿಂಗೇಶ್ವರ ದೇವರಿಗೆ ರಂಗಪೂಜೆ ಮತ್ತು ಪ್ರಸಾದ ವಿತರಣೆ, 8ರಿಂದ ಅನ್ನ ಸಂತರ್ಪಣೆ, ಬಳಿಕ ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ನೃತ್ಯ ಆಕರ್ಷಣಂ ನೃತ್ಯ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.