Advertisement
9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಗುರುವಾರ ಚಾಲನೆ ನೀಡಿದ ಅವರು, “ಕನ್ನಡದಲ್ಲಿ ಉತ್ತಮ ಸಿನಿಮಾಗಳು ಬರುತ್ತಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಕೆಟ್ಟ ಸಿನಿಮಾಗಳೂ ಬರುತ್ತಿವೆ. ವರ್ಷಕ್ಕೆ ಸುಮಾರು 150ರಿಂದ 180 ಚಿತ್ರಗಳು ನಿರ್ಮಾಣವಾಗುತ್ತಿದೆ. ಇದರಲ್ಲಿ ಗುಣಮಟ್ಟದ ಚಿತ್ರಗಳು ಎಷ್ಟು ಎಂಬುದನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಬೇಕು. ಹಿಂದೆಲ್ಲಾ ಒಳ್ಳೆಯ ಕಥಾವಸ್ತು ಚಿತ್ರಗಳು ನಿರ್ಮಾಣವಾಗುತ್ತಿದ್ದವು.
Related Articles
Advertisement
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಮಾತನಾಡಿ, “ದೇಶದಲ್ಲಿ ಚಿತ್ರಮಂದಿರಗಳ ಕೊರತೆಯಿದೆ. ಅಳಿದುಳಿದ ಚಿತ್ರಮಂದಿರಗಳು ನಿರ್ನಾಮದ ಹಂತದಲ್ಲಿವೆ. ಚಿತ್ರರಂಗ ಗಟ್ಟಿಯಾಗಿ ನೆಲೆಯೂರಲು ಸಿಎಂ ಸಿದ್ದರಾಮಯ್ಯ ಅವರು 300 ಜನತಾ ಚಿತ್ರ ಮಂದಿರಗಳ ನಿರ್ಮಾಣಕ್ಕೆ ಪ್ರೋತ್ಸಾಹಧನ ನೀಡಲು ಮುಂದಾಗಿದ್ದು ಸ್ವಾಗತಾರ್ಹ,” ಎಂದರು.
ಮಲ್ಪಿಫ್ಲೆಕ್ಸ್‌ಗಳು ಕನ್ನಡ ಚಿತ್ರಗಳ ವಿಲನ್: ಚಿತ್ರಮಂದಿರ ನಿರ್ಮಾಣ ಪರವಾನಗಿ ಪಡೆಯುವುದೇ ಕಷ್ಟವಾಗಿದೆ. 1954ರ ಕಾಯ್ದೆಯೇ ಇಂದಿಗೂ ಜಾರಿಯಲ್ಲಿದ್ದು, ಐದು ವರ್ಷವಾದರೂ ಅನುಮತಿ ನೀಡುವುದಿಲ್ಲ. ಅನ್ಯ ರಾಜ್ಯಗಳಲ್ಲಿ ಅರ್ಜಿ ಸಲ್ಲಿಸಿದ 21ದಿನದಲ್ಲಿ ಅನುಮತಿ ಸಿಗುತ್ತದೆ. ಈ ಬಗ್ಗೆ ಗಮನ ಹರಿಸಬೇಕು. ಮಲ್ಪಿಫ್ಲೆಕ್ಸ್‌ಗಳು ಕನ್ನಡ ಚಿತ್ರಗಳ ಪಾಲಿಗೆ ವಿಲನ್‌ಗಳಂತಾಗಿವೆ. ಕನ್ನಡ ಚಿತ್ರಗಳನ್ನು ಮನಬಂದಂತೆ ಬದಲಾಯಿಸಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು.
ಮೈಸೂರಿನಲ್ಲಿ ಫಿಲ್ಮ್ಸಿಟಿ ನಿರ್ಮಾಣವಾಗುತ್ತಿದ್ದು, ಸಮೀಪದಲ್ಲೇ ಸಿನಿಮಾ ಕಾಲೋನಿ ನಿರ್ಮಿಸಿ ಚಿತ್ರರಂಗದವರಿಗೆ ರಿಯಾಯ್ತಿ ದರದಲ್ಲಿ ನಿವೇಶನ ನೀಡಿದರೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, “”ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ 15 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಚಿತ್ರರಂಗದ ಅಭಿವೃದ್ದಿಗೆ ನೆರವು, ಸಹಕಾರ ನೀಡುತ್ತಾ ಬಂದಿದ್ದಾರೆ. “ಟರ್ನ್ ಓವರ್ ಟ್ಯಾಕ್ಸ್’ ರದ್ದುಪಡಿಸಿ ಹಿಂದೊಮ್ಮೆ ನೆರವಾಗಿದ್ದರು,” ಎಂದು ಸ್ಮರಿಸಿದರು.
ಸಭಾಪತಿ ಡಿ.ಎಚ್.ಶಂಕರಮೂರ್ತಿ ಸ್ಮರಣಿಕೆ ಬಿಡುಗಡೆಗೊಳಿಸಿದರು. ಸಚಿವರಾದ ಕೆ.ಜೆ.ಜಾರ್ಜ್, ಉಮಾಶ್ರೀ, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಶಾಸಕ ಮುನಿರತ್ನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ್, ನಿರ್ದೇಶಕ ಎನ್.ಆರ್.ವಿಶುಕುಮಾರ್, ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್, ಕಲಾತ್ಮಕ ನಿರ್ದೇಶಕ ಎಂ. ವಿದ್ಯಾಶಂಕರ್ ಉಪಸ್ಥಿತರಿದ್ದರು. ನಟಿ ಸುಹಾಸಿನಿ ಮಣಿರತ್ನ ಹಾಗೂ ನಟ ರಮೇಶ್ ಅರವಿಂದ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ವಿಶೇಷ ಆಹ್ವಾನಿತರ ನುಡಿಇದು ಭಾರತಕ್ಕೆ ನನ್ನ ಮೂರನೇ ಭೇಟಿ. ನಾನು ಭಾರತಕ್ಕೆ
ಭೇಟಿ ನೀಡಿದಾಗಲೆಲ್ಲಾ ಈಜಿಫ್ಟ್ನಲ್ಲೇ ಇದ್ದ ಅನುಭವವಾಗುತ್ತದೆ. ಎರಡೂ ರಾಷ್ಟ್ರಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಇದೆಲ್ಲಾ ಹೇಗೆ ಎಂಬ ವಿಸ್ಮಯ ಕೂಡ ಕಾಡುತ್ತದೆ.
-ಹಲಾ ಕಲೀಲ್, ಈಜಿಪ್ಟ್ನ ಚಿತ್ರ ನಿರ್ದೇಶಕಿ ನಾನು 1984ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ತೆರಳಿದ್ದೆ. ಈವರೆಗೆ ಏಳು ಚಿತ್ರೋತ್ಸವ ನೋಡಿದ್ದೇನೆ. ಇದೀಗ ನಮ್ಮೂರಿನಲ್ಲೇ ಸಿನಿಮೋತ್ಸವ ನಡೆಯುತ್ತಿರುವುದು ಸಂತಸ ತಂದಿದೆ. ನಮ್ಮ ಕಲಾವಿದರು, ತಂತ್ರಜ್ಞರು, ನಿರ್ಮಾಣಕಾರರಿಗೆ ಚಿತ್ರೋತ್ಸವ ಸಾಕಷ್ಟು ಉಪಯುಕ್ತವಾಗಿದೆ. ಹಾಗಾಗಿ ಅವಕಾಶ ಕಳೆದುಕೊಳ್ಳದೆ ಸದುಪಯೋಗ ಪಡೆದುಕೊಳ್ಳಬೇಕು. ಗೋಧಿಬಣ್ಣ ಸಾಧಾರಣ ಮೈಕಟ್ಟು, ತಿಥಿ, ಯು ಟರ್ನ್, ರಾಮ ರಾಮಾರೇ ಸೇರಿದಂತೆ 8-9 ಅದ್ಭುತ ಸಿನಿಮಾಗಳು ಬಂದಿವೆ.
-ಪುನೀತ್ ರಾಜ್‌ಕುಮಾರ್, ನಟ