Advertisement

L-1 ಪಾಯಿಂಟ್‌ನಲ್ಲಿ ಆದಿತ್ಯ ಸ್ಥಾಪನೆಗೆ ಇಂದು ಇಸ್ರೋ ಕಸರತ್ತು

12:53 AM Jan 06, 2024 | Team Udayavani |

ಹೊಸದಿಲ್ಲಿ: ಶನಿವಾರ ಇಸ್ರೋ ಮಹತ್ವದ ಸಾಹಸ ಕೈಗೆತ್ತಿಕೊಳ್ಳಲಿದೆ. ಸಂಜೆ 4ರ ವೇಳೆಗೆ ಆದಿತ್ಯ ಉಪಗ್ರಹವನ್ನು ಲಾಗ್ರೇಂಜ್‌-1 ಪಾಯಿಂಟ್‌ಗೆ ತಲುಪಿಸಲು ಕಸರತ್ತು ನಡೆಸಲಿದೆ. ಇದು ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಒಂದು ಕೇಂದ್ರ. ಇಲ್ಲಿಂದ ಗ್ರಹಣ ಮತ್ತಿತರ ಯಾವುದೇ ಅಡೆತಡೆಗಳಿಲ್ಲದೆ ಸೌರಚಟುವಟಿಕೆಗಳನ್ನು ವೀಕ್ಷಿಸಬಹುದು. ಸೂರ್ಯನು ಅಂತರಿಕ್ಷದಲ್ಲಿ ಉಂಟುಮಾಡುವ ಪರಿಣಾಮಗಳನ್ನೂ ಇಲ್ಲಿಂದ ಅಧ್ಯಯನ ಮಾಡಬಹುದು.

Advertisement

ಸೂರ್ಯನ ಅಧ್ಯಯನಕ್ಕಾಗಿ 2023ರ ಸೆ. 2ರಂದು ಇಸ್ರೋ ಆದಿತ್ಯ ಎಲ್‌-1 ಉಡಾವಣೆ ಮಾಡಿತ್ತು. ಅದನ್ನೀಗ ನಿಗದಿತ ಕಕ್ಷೆಗೆ ತಲುಪಿಸಬೇಕಾಗಿದೆ. ಅದನ್ನು ಹ್ಯಾಲೊ ಆರ್ಬಿಟ್‌ ಎಂದು ಕರೆಯುವ ಎಲ್‌-1 ಪಾಯಿಂಟ್‌ಗೆ ಆದಿತ್ಯನನ್ನು ತಲುಪಿಸಿ, ಅಲ್ಲಿ ಸುತ್ತುವಂತೆ ಮಾಡಬೇಕಿದೆ.

ತಲುಪಿಸದಿದ್ದರೆ ಏನಾಗುತ್ತದೆ?
ಒಂದು ವೇಳೆ ಆದಿತ್ಯನನ್ನು ಎಲ್‌-1ನಲ್ಲಿ ನಿಲ್ಲಿಸುವ ಕೆಲಸ ಸಾಧ್ಯವಾಗದಿದ್ದರೆ ಅದರ ಚಲನೆ ನಿರಂತರವಾಗಿ ಮುಂದುವರಿಯುವ ಸಾಧ್ಯತೆಯಿದೆ. ಸೂರ್ಯನ ಕಡೆಗೂ ಅದು ಸಾಗಬಹುದು ಎಂದು ಇಸ್ರೋ ಹೇಳಿದೆ. ಆ ಹಂತದಲ್ಲಿ ಆದಿತ್ಯ ಉಪಗ್ರಹ ಸ್ಫೋಟಗೊಂಡು ಉದ್ದೇಶವೇ ವಿಫ‌ಲವಾಗುವ ಸಾಧ್ಯತೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next