Advertisement
ಇತಿಹಾಸವಿಶ್ವದ ಮೊದಲ ವಿದ್ಯುನ್ಮಾನವಾದ ಎಲೆಕ್ಟ್ರಾನಿಕ್ ಟೆಲಿವಿಷನ್ ಅನ್ನು 1927ರಲ್ಲಿ 21 ವರ್ಷದ ಸಂಶೋಧಕ ಫಿಲೋ ಟೇಲರ್ ಫಾರ್ನ್ಸ್ವರ್ತ್ ಕಂಡು ಹಿಡಿದರು. ಅವರು ತಮ್ಮ 14ನೇ ವಯಸ್ಸಿನವರೆಗೂ ಮನೆಯಲ್ಲಿ ವಿದ್ಯುತ್ಛಕ್ತಿಯಿಲ್ಲದೆ ವಾಸಿಸಿದ್ದರು. 19ನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ ಹಲವಾರು ಸಂಶೋಧಕರಿಂದ ದೂರದರ್ಶನದ ಆವಿಷ್ಕಾರ ನಡೆಯಿತು. ಹಿಂದಿನ ತಂತ್ರಜ್ಞಾನವನ್ನು ಮೀರಿಸಲು ಅನೇಕರು ಸ್ಪರ್ಧಿಸಿದ್ದಾರೆ. ಅದಲ್ಲದೆ ಕೆಲವರು ದೃಶ್ಯ ಮತ್ತು ಆಡಿಯೋ ಸಂವಹನ ತಂತ್ರಜ್ಞಾನದ ಮೂಲಕ ಪ್ರಪಂಚವನ್ನು ಬದಲಿಸಲು ಬಯಸಿದ್ದರು.
ಪ್ರಪಂಚಾದ್ಯಂತ ನ. 21ರಂದು ಟೆಲಿವಿಷನ್ ದಿನವನ್ನು ಆಚರಿಸುತ್ತಿದ್ದು ವಿಶ್ವ ಸಂಸ್ಥೆಯು ಇದನ್ನು 1996ರಲ್ಲಿ ಅಂಗೀಕರಿಸಿದೆ. ಜನರಿಗೆ ಪ್ರಮುಖವಾದ ಮಾಹಿತಿಯ ಜತೆ ಸುದ್ದಿಗಳ ನೀಡುವಿಕೆ, ಪಕ್ಷ ಪಾತವಿಲ್ಲದೆ ನಕಲಿ ನ್ಯೂಸ್ ಗಳ ಹಾವಳಿಗೆ ತಡೆ, ಜಗತ್ತಿನಾದ್ಯಂತ ಪರಿಣಾಮ ಬೀರಬಲ್ಲ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
Related Articles
ಟಿವಿಗಳಿಂದ ನಾವು ಮಹತ್ವದ ಮಾಹಿತಿಗಳನ್ನು ಪಡೆಯುವ ಜತೆಗೆ ಅದನ್ನು ಚರ್ಚಿಸಲು ಅವಕಾಶ ಮಾಡಿಕೊಡುತ್ತವೆ. ಆದರೆ ಈಗಿನ ಕೆಲವು ಮಾಧ್ಯಮಗಳು ಜನರ ಅಗತ್ಯಕ್ಕೆ ಮೀರಿದ್ದನ್ನು ನೀಡಲು ಹಾತೊರೆಯುತ್ತಿದ್ದು, ತನ್ನ ಪಥ ಮರೆತು ಮುಂದುವರಿಯುತ್ತಿವೆ. ಇನ್ನು ಕೆಲವು ಮಾಧ್ಯಮಗಳು ಮನೋರಂಜನೆ, ಮಾಹಿತಿ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಜನರಿಗೆ ಮಾಹಿತಿ ಒದಗಿಸುತ್ತಿವೆ. ದಿನಗಳು ಉರುಳುತ್ತಿದ್ದಂತೆ ಮಾನವನ ದೃಷ್ಟಿಕೋನಗಳು ಬದಲಾಗುತ್ತಿವೆ. ಅದೇ ರೀತಿ ಇಲೆಕ್ಟ್ರಾನಿಕ್ ಮಾಧ್ಯಮಗಳು ಕೂಡ ತಮ್ಮ ಛಾಪನ್ನು ಬದಲಿಸಿ ಹೊಸ ಮಾದರಿಯಲ್ಲಿ ಜನರ ಮುಂದೆ ನಿಲ್ಲಲು ಪ್ರಯತ್ನಿಸುತ್ತಿದೆ. ಏನೇ ಇರಲಿ ನಮಗೆ ಬೇಕಾಗುವ ಮಾಹಿತಿಗಳನ್ನು ನಾವು ಉಪಯೋಗಿಸಿಕೊಂಡು ಇರುವ ಸಾಧನವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳೋಣ.
Advertisement
ಪ್ರತಿ ವರ್ಷ ಏರುತ್ತಿರುವ ಸಂಖ್ಯೆ ಟಿಎ ಎಂ ವಾರ್ಷಿಕ ಯೂನಿವರ್ಸ್ ಅಪ್‌ಡೆಟ್ 2015ರ ಪ್ರಕಾರ, ಭಾರತದ 234 ದಶಲಕ್ಷ ಮನೆಗಳಲ್ಲಿ 167 ದಶಲಕ್ಷದಷ್ಟು ಮನೆಗಳಲ್ಲಿ ಟೆಲಿವಿಷನ್ ಸೆಟ್‌ಗಳನ್ನು ಹೊಂದಿದ್ದರು. ಇದರಲ್ಲಿ 161 ದಶಲಕ್ಷಕ್ಕೂ ಹೆಚ್ಚಿನ ಜನರು ಕೇಬಲ್ ಟಿವಿಗಳನ್ನು ಬಳಸುತ್ತಿದ್ದರು. ಅದರಲ್ಲಿ 84 ದಶ ಲಕ್ಷ ಮನೆಗಳು ಡಿಟಿಎಚ್ ಚಂದಾದಾರರಾಗಿವೆ. 2018ರ ಇನ್ನೊಂದು ಸಮೀಕ್ಷೆ ಪ್ರಕಾರ ಟಿವಿ ಮಾಲಿಕತ್ವದ ಕುಟುಂಬಗಳ ಸಂಖ್ಯೆಯಲ್ಲಿ ಶೇ. 7.5 ಅಂದರೆ ಸುಮಾರು 197 ಮಿಲಿಯನ್ ಏರಿಕೆಯಾಗಿದೆ. ಅದಲ್ಲದೆ ವೀಕ್ಷಕರ ಸಂಖ್ಯೆಯೂ ಶೇ. 7.2 ಏರಿಕೆಯಾಗಿ 836 ಮಿಲಿಯನ್‌ಗೆ ತಲುಪಿದ್ದು ಪ್ರತಿ ವರ್ಷ ಇದರ ಸಂಖ್ಯೆ ಏರುತ್ತಲೇ ಇದೆ. ಭಾರತದ ಅಗ್ರ ವೀಡಿಯೋ ಸ್ಟ್ರೀಮಿಂಗ್ ಫ್ಲಾಟ್ಫಾರ್ಮ್ಆದ ಹಾಟ್‌ಸ್ಟಾರ್‌ಗೆ 60 ಮಿಲಿಯನ್ ಬಳಕೆದಾರರಿದ್ದಾರೆ ಎಂಬುದು ಜುಲೈ 27, 2018ರ ವರದಿಯಿಂದ ಬಹಿರಂಗಗೊಂಡಿದೆ. ಪ್ರೀತಿ ಭಟ್, ಗುಣವಂತೆ